ಸುದಿನ ಫಲಶ್ರುತಿ : ನಾಡೋಳಿ ಸೇತುವೆ ಪಿಲ್ಲರ್ ದುರಸ್ತಿ ಆರಂಭ
Team Udayavani, May 28, 2018, 5:05 AM IST
ಸವಣೂರು: ಕುಸಿತದ ಭೀತಿ ಎದುರಿಸುತ್ತಿದ್ದ ಅಂಕತ್ತಡ್ಕ- ಮಂಜುನಾಥನಗರ ಬಂಬಿಲ ಸಂಪರ್ಕಿಸುವ ನಾಡೋಳಿ ಸೇತುವೆಯ ಪಿಲ್ಲರ್ ದುರಸ್ತಿ ಕಾರ್ಯ ರವಿವಾರ ಆರಂಭಗೊಂಡಿದೆ. ಪಿಲ್ಲರ್ ಗಳ ಕಾಂಕ್ರೀಟ್ ಕಿತ್ತು ಹೋಗಿ, ಕಬ್ಬಿಣದ ಸರಳು ತುಕ್ಕು ಹಿಡಿದಿದ್ದ ಸೇತುವೆಯ ದುಸ್ಥಿತಿ ಕುರಿತು ಮೇ 19ರ ‘ಸುದಿನ’ದಲ್ಲಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ಇದನ್ನು ಗಮನಿಸಿದ ಜಿ.ಪಂ.ಎಂಜಿನಿಯರ್ ಗೋವರ್ಧನ್ ಅವರು ಮೇ 21ರಂದು ಸ್ಥಳ ಪರಿಶೀಲನೆ ನಡೆಸಿ, ತುರ್ತು ದುರಸ್ತಿ ನಡೆಸುವ ಕುರಿತು ಮಾಹಿತಿ ನೀಡಿದ್ದರು. ಪಿಲ್ಲರ್ ದುರಸ್ತಿಯನ್ನು ಗುತ್ತಿಗೆದಾರರು ಆರಂಭಿಸಿದ್ದಾರೆ.
ಈ ಸೇತುವೆ ಬಳಸಿ ಪಾಲ್ತಾಡಿ, ಉಪ್ಪಳಿಗೆ, ಮಾಡಾವು, ಮಣಿಕ್ಕರ, ತಾರಿಪಡ್ಪು, ಅಂಕತ್ತಡ್ಕ, ಜಾಣಮೂಲೆ, ಅರೆಪ್ಪಳದಿಂದ ಮಂಜುನಾಥನಗರ, ಬಂಬಿಲ ಮೂಲಕ ಸವಣೂರನ್ನು ಸಂಪರ್ಕಿಸಲು, ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಮಂಜುನಾಥನಗರ ಸರಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಸಿದ್ಧಿವಿನಾಯಕ ಸಭಾ ಭವನ, ಭಜನ ಮಂದಿರ, ಮಹಾದೇವಿ ದೇವಸ್ಥಾನ ಬಂಬಿಲ ಮೊದಲಾದೆಡೆ ತೆರಳಲು ಸುಲಭದ ದಾರಿಯಾಗಿದೆ. ಪಿಲ್ಲರ್ ಮಳೆಗಾಲದಲ್ಲಿ ನೀರಿನ ಹೊಡೆತಕ್ಕೆ ಕುಸಿಯುವ ಸಾಧ್ಯತೆ ಇತ್ತು. ಸುದಿನ ವರದಿಗೆ ಇಲಾಖೆ ಸಕಾಲಿಕವಾಗಿ ಸ್ಪಂದಿಸಿ, ಜನರ ಆತಂಕವನ್ನು ದೂರ ಮಾಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.