ದ್ವೀಪದಂತಿದ್ದ ಅರಂಬೂರಿಗೀಗ ಸೇತುವೆ
Team Udayavani, Mar 21, 2017, 3:53 PM IST
ಸುಳ್ಯ : ತಾಲೂಕಿನ ಅತಿ ದೊಡ್ಡ ಗ್ರಾಮ ವಾದ ಅರಂಬೂರಿನಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ.
ಇದರಿಂದ ದ್ವೀಪದಂತಿದ್ದ ಅರಂಬೂರು ಪ್ರದೇಶದ ಜನರಿಗೆ ಸುಳ್ಯ ನಗರವನ್ನು ಸಂಪರ್ಕಿ ಸಲು ಇದ್ದ ಸಮಸ್ಯೆ ಬಗೆಹರಿಯಲಿದೆ.
ಸುಮಾರು 4.95 ಕೋಟಿ ರೂ. ಅನುದಾನದಲ್ಲಿ ಸೇತುವೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಆಲೆಟ್ಟಿ ಗ್ರಾಮದ ಅರಂಬೂರು ಪರಿಸರವನ್ನು ಪಯಸ್ವಿನಿ ನದಿ ಇಬ್ಭಾಗಿಸಿತ್ತು. ಎರಡು ದಶಕಗಳ ಹಿಂದೆ ಅಲ್ಲಿನ ನಿವಾಸಿಗಳು ಪಿಂಡಿ ದಾಟಿ ಸುಳ್ಯಕ್ಕೆ ಬರಬೇಕಿತ್ತು. ಅಲ್ಲಿನ ಮಕ್ಕಳಿಗೆ ಕಾಲೇಜು ಶಿಕ್ಷಣಕ್ಕೂ ತೊಡಕಾಗಿತ್ತು. ಅವೆಲ್ಲವೂ ಇನ್ನು ಬಗೆಹರಿಯಲಿವೆ.
ವಾಹನ ಸೇತು
1989ರಲ್ಲಿ ತಾನು ಹುಟ್ಟಿದ ಗ್ರಾಮದಲ್ಲಿ ಮೊತ್ತಮೊದಲ ತೂಗುಸೇತುವೆಯನ್ನು ನಿರ್ಮಿ ಸಿದ ಪದ್ಮಶ್ರೀ ಗಿರೀಶ ಭಾರದ್ವಾಜ ಅವರು ಜನರ ಕಣ್ಮಣಿಯಾದರು. ಈ ತೂಗುಸೇತುವೆ ಮೂಲಕ ಜನರಿಗೆ ಸುಳ್ಯಕ್ಕೆ ಬರಲು ಮತ್ತು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಯಿತು. ಈ ಊರಿನ ಯುವಕರಿಗೆ ಹೆಣ್ಣು ಕೊಡಲು ಹಿಂಜರಿಯುತ್ತಿದ್ದ ಕಾಲವೂ ಬದಲಾಯಿತು. ಆದರೆ ಈಗ ಪ್ರತಿಯೊಬ್ಬರಲ್ಲೂ ವಾಹನವಿರು ವುದರಿಂದ ತೂಗು ಸೇತುವೆ ಮೂಲಕ ಸಾಗಲಾ ಗದೇ ನದಿಯ ಈ ದಂಡೆಯಲ್ಲಿ ವಾಹನವಿರಿಸಿ, ನಡೆದು ಹೋಗುವ ಅನಿವಾರ್ಯ ಇದೆ.
ಕಲ್ಲುಮಣ್ಣು ತುಂಬಿ ರಸ್ತೆ
ಬೇಸಗೆಯಲ್ಲಿ ಪಯಸ್ವಿನಿಯಲ್ಲಿನ ನೀರು ಇಳಿ ಮುಖವಾದಾಗ ಕಲ್ಲುಮಣ್ಣು ತುಂಬಿ ತಾತ್ಕಾಲಿಕ ರಸ್ತೆ ನಿರ್ಮಿಸಿ ಆ ಮೂಲಕ ವಾಹನಗಳಲ್ಲಿ ಮತ್ತೂಂದು ದಡವನ್ನು ಗ್ರಾಮಸ್ಥರು ಸೇರುತ್ತಿದ್ದರು. ವಾಹನ ಸಂಚಾರಕ್ಕೆ ಯೋಗ್ಯವಾಗುವ ಸೇತುವೆ ಬೇಕೆಂದು ಆಗ್ರಹಿಸುತ್ತಿದ್ದರು. ಅದೀಗ ನನಸಾಗುತ್ತಿದೆ.
ಈ ಸೇತುವೆ ಮೂಲಕ ಹೊಸತಾಗಿ ನಿರ್ಮಾಣಗೊಳ್ಳುತ್ತಿರುವ ರಸ್ತೆಗೆ ಸುಮಾರು 25 ಕ್ಕೂ ಹೆಚ್ಚು ಕೃಷಿಕರು ತಮ್ಮ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರು ಅನುದಾನ ತರುವಲ್ಲಿ ಪ್ರಯತ್ನಿಸಿದ್ದರು.
- ಗಂಗಾಧರ ಮಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.