ಮನೆ ಬಾಗಿಲಿನ ಸಿಂಗಾರಕ್ಕೆ ತಳಿರು ತೋರಣ
Team Udayavani, Mar 17, 2018, 5:22 PM IST
ಮನೆಯ ಅಲಂಕಾರವೆಂಬುದು ಅದ್ಭುತ ಕಲೆ. ಎಷ್ಟು ಮಾಡಿದರೂ ಮುಗಿಯುವುದಿಲ್ಲ. ಮನೆಗೆ ಬರುವ ಅತಿಥಿಗಳು, ಗಣ್ಯರು ನಮ್ಮ ಮನೆಯನ್ನು ನೋಡಿ, ಮೆಚ್ಚುಗೆಯ ಮಾತುಗಳನ್ನಾಡಬೇಕು ಎಂಬ ಹಂಬಲ ಎಲ್ಲರಲ್ಲೂ ಇರುತ್ತದೆ. ಅದಕ್ಕೆ ತಕ್ಕುದಾಗಿ ಸಿಂಗಾರವನ್ನೂ ಮಾಡುತ್ತೇವೆ. ಮನೆಯನ್ನು ಸುಂದರಗೊಳಿಸುವ ಆಸಕ್ತಿಯಲ್ಲಿ ಆಲಂಕಾರಿಕ ವಸ್ತುಗಳನ್ನು ಕೊಳ್ಳಲು ಲಕ್ಷಾಂತರ ರೂ. ಖರ್ಚು ಮಾಡುವುದು ದಡ್ಡತನ. ನಮ್ಮಲ್ಲಿರುವ ಕಚ್ಚಾ ವಸ್ತುಗಳನ್ನೇ ಬಳಸಿಕೊಂಡು ವಿಶೇಷ ಕಲಾಕೃತಿ, ತೋರಣ ಮಾಡಿದರೆ ಮನೆಗೊಂದು ಶ್ರೀಮಂತಿಕ ಲುಕ್ ನೀಡಬಹುದು.
ಇತ್ತೀಚಿನ ದಿನಗಳಲ್ಲಿ ಮನೆ ಬಾಗಿಲಿಗೆ ಹಾಕುವ ತಳಿರು ತೋರಣಗಳು ಆಕರ್ಷಣೆಯ ಕೇಂದ್ರ ಬಿಂದುವಾಗುತ್ತಿವೆ. ಮನೆಗೆ ಬರುವ ಅತಿಥಿಗಳು, ಗಣ್ಯರನ್ನು ನಾವು ಮನೆ ಹೆಬ್ಟಾಗಿಲಿನ ಮೂಲಕವೇ ಸ್ವಾಗತಿಸುತ್ತೇವೆ. ಹೀಗಾಗಿ ಇಲ್ಲಿ ಹಾಕುವ ತಳಿರು, ತೋರಣಗಳು ಅತಿಥಿಗಳ ಗಮನ ಸೆಳೆಯುವಂತಿರಬೇಕು.
ಹಬ್ಬ ಹರಿದಿನಗಳು, ಶುಭ ಸಮಾರಂಭದ ಧ್ಯೋತಕವಾದ ತಳಿರು ತೋರಣಗಳು ಈಗ ಮನೆಯ ಅಲಂಕಾರದಲ್ಲೂ ಪ್ರಮುಖ ಸ್ಥಾನ ಗಿಟ್ಟಿಸಿಕೊಂಡಿದೆ. ಹೀಗಾಗಿ ಇದರಲ್ಲೂ ನಿತ್ಯ ವಿನೂತನ ಎಂಬಂಥ ಪ್ರಯೋಗಗಳು ನಡೆಯುತ್ತಲಿವೆ.
ಉಲ್ಲನ್ ತೋರಣ
ಉಲ್ಲನ್‌ನಿಂದ ತಯಾರಿಸಲ್ಪಟ್ಟ ತೋರಣಗಳು ಬಣ್ಣ, ವಿನ್ಯಾಸದಿಂದಲೇ ಎಲ್ಲರ ಮನ ಸೆಳೆಯುತ್ತಿದೆ. ಸಾಂಪ್ರದಾಯಿಕ ಕಲೆಯನ್ನು ಹೆಚ್ಚಿಸುವ ಈ ತೋರಣ ಮನೆಗೊಂದು ವಿಶೇಷ ಮೆರುಗು ನೀಡುತ್ತದೆ. ಕಸೂತಿ ಕೆಲಸ ಗೊತ್ತಿದ್ದರೆ ಉಲ್ಲನ್ ತಂದು ನಾವೇ ಮನೆಯಲ್ಲಿ ತಯಾರಿಸಬಹುದು ಗಾಜಿನ ತುಣುಕುಗಳು, ಆಲಂಕಾರಿಕ ವಸ್ತುಗಳನ್ನು ಜೋಡಿಸಿ ಸುಂದರಗೊಳಿಸಬಹುದು. ಇದರಲ್ಲಿ ಧೂಳು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಹೆಚ್ಚು ಒಗೆಯುವುದರಿಂದ ಬಣ್ಣ ಮಾಸುವ ಸಾಧ್ಯತೆ ಇದೆ. ಹೀಗಾಗಿ ಆದಷ್ಟು ನಿತ್ಯವೂ ಧೂಳು ತೆಗೆದು ಸ್ವಚ್ಚಗೊಳಿಸಿದರೆ ಉತ್ತಮ.
ಹಳೆ ನಾಣ್ಯದ ತೋರಣ
ಹಳೆ ಕಾಲದ ನಾಣ್ಯಗಳನ್ನೂ ಕೂಡ ತೋರಣವನ್ನಾಗಿ ಮಾಡಬಹುದು. ಚಲಾವಣೆಯಲ್ಲಿಲ್ಲದ ನಾಣ್ಯಗಳನ್ನು ಕಲಾ ಕೃತಿಯನ್ನಾಗಿ ಮಾಡಿ ತೋರಣವಾಗಿ ಹೆಣೆದು ಮುಂಬಾಗಿಲಿಗೆ ಹಾಕಿದರೆ ಮನೆಗೊಂದು ಸಾಂಪ್ರದಾಯಿಕ ಲುಕ್ ಸಿಗುತ್ತದೆ. ಈ ತೋರಣದ ಕಲಾಕೃತಿಯು ಎಲ್ಲರ ಗಮನ ಸೆಳೆಯುವುದರಲ್ಲಿ ಸಂದೇಹವೇ ಇಲ್ಲ.
ಪ್ಲಾಸ್ಟಿಕ್ ತೋರಣಗಳು
ಪ್ಲಾ ಸ್ಟಿಕ್‌ನಿಂದ ತಯಾರಿಸಿದ ತೋರಣಗಳು ಇತ್ತೀಚೆಗೆ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಅದರಲ್ಲೂ ಎಲೆಗಳ ಮಾದರಿಯ ಬಣ್ಣ ಬಣ್ಣದ ತೋರಣ ಮನೆ ಬಾಗಿಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ಲಾಸ್ಟಿಕ್ ಎಲೆಗಳಿಗೆ ಗಿಳಿ, ಗುಬ್ಬಿ, ಪಾರಿವಾಳದಂಥ ಹಕ್ಕಿಗಳ ಆಕಾರದಲ್ಲಿ ತೋರಣಗಳು ಕೂಡ ಬಳಕೆಯಾಗುತ್ತಿವೆ. ಶುಭ ಸಮಾರಂಭಗಳಿಗೆ ಇಂತಹ ತೋರಣವೇ ಹೆಚ್ಚು ಮೆರುಗು ನೀಡುತ್ತದೆ.
ಮಣಿ, ಗಾಜು, ಚಿಪ್ಪಿನ ತೋರಣ
ಮಾರುಕಟ್ಟೆಯಲ್ಲಿ ಸಿಗುವ ಮಣಿಗಳನ್ನು ತಂದು ಪೋಣಿಸಿ, ಅಲಂಕಾರಕ್ಕೆ ಗಾಜು , ಚಿಪ್ಪುಗಳನ್ನು ಸೇರಿಸಿ ತೋರಣ ಮಾಡಬಹುದು. ಇದರ ರೆಡಿ ಮೇಡ್ ತೋರಣವೂ ಮಾರುಕಟ್ಟೆಯಲ್ಲಿ ಸಿಗುತ್ತದೆ. ದಾರದ ಬಗ್ಗೆ ಕೊಂಚ ಎಚ್ಚರ ವಹಿಸಿದರೆ ದೀರ್ಘ ಕಾಲ ಬಾಳಿಕೆ ಬರುತ್ತದೆ. ನೋಡಲು ಆಕರ್ಷಕವಾಗಿರುವ ಈ ತೋರಣವನ್ನು ಮನೆಯ ಮುಂಬಾ ಗಿಲಿಗಿಂತ ಒಳ ಗಿನ ಕೋಣೆಗಳ ಬಾಗಿಲಿಗೆ ಹೆಚ್ಚು ಮೆರುಗು ನೀಡಬಲ್ಲುದು.
ಇಷ್ಟರ ಮಧ್ಯೆಯೂ, ಹಬ್ಬ ಹರಿದಿನಗಳಿಗೆ ಮಾವಿನ ಎಲೆಯಿಂದ ಕಟ್ಟುವ ತೋರಣಗಳೇ ಸುಂದರ. ಇವು 1- 2 ದಿನದಲ್ಲಿ ಬಾಡುವುದರಿಂದ ಹಬ್ಬ ಮುಗಿದ ತತ್‌ಕ್ಷಣ ತೆಗೆಯು ವುದು ಅಥವಾ ಬದಲಾಯಿಸಿದರೆ ಉತ್ತಮ.
ಕಚ್ಚಾ ವಸ್ತುಗಳ ತೋರಣ
ಮನೆಯಲ್ಲಿ ಹೆಚ್ಚಾಗಿ ಬಳಕೆಯಾಗಿ ಕಸವಾಗುವ ವಸ್ತುಗಳಾದ ಪೇಪರ್, ಪ್ಲಾಸ್ಟಿಕ್, ಬಟ್ಟೆಗಳಿಂದಲೂ ತೋರಣ ಮಾಡಿ ಮನೆಯ ಬಾಗಿಲನ್ನು ಸಿಂಗರಿಸಬಹುದು. ಇದರಲ್ಲಿ ಬಗೆ ಬಗೆಯ ತೋರಣಗಳನ್ನು ಮಾಡಿಟ್ಟರೆ ವಾರಕ್ಕೊಂದರಂತೆ ಬದಲಾಯಿಸುತ್ತಾ ಇರಬಹುದು. ಜತೆಗೆ ಇವುಗಳ ವೇಸ್ಟ್ ಆದರೂ ಚಿಂತೆ ಇರುವುದಿಲ್ಲ. ಬಟ್ಟೆಯ ತೋರಣಗಳು ಹೆಚ್ಚು ಬಾಳಿಕೆ ಬರುವುದು ಮಾತ್ರವಲ್ಲ ನಿರ್ವಹಣೆಯೂ ಸುಲಭವಾಗಿರುತ್ತದೆ.
ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.