ಬಿಎಸ್ಸೆನ್ನೆಲ್ ಜಾಗ ಹರಾಜಿಗೆ ಆಕ್ಷೇಪ ಹಿನ್ನೆಲೆ: ಅಗತ್ಯ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
ಎಸಿಯಿಂದ ನೋಟಿಸ್
Team Udayavani, Jan 18, 2023, 6:30 AM IST
ಮಂಗಳೂರು: ಕದ್ರಿ ಪಾರ್ಕ್ ಸಮೀಪದಲ್ಲಿರುವ ಭಾರತ ಸಂಚಾರ ನಿಗಮದ ಎರಡು ಎಕರೆ ಜಮೀನು (ಬಿಎಸ್ಸೆನ್ನೆಲ್) ಮಾರಾಟ ಮಾಡುವ ಕ್ರಮವನ್ನು ಆಕ್ಷೇಪಿಸಿ ಸಾಮಾಜಿಕ ಹೋರಾಟಗಾರರು ಸಲ್ಲಿಸಿರುವ ಮನವಿಗೆ ಸಂಬಂಧಿಸಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿ ಮಂಗಳೂರು ಸಹಾಯಕ ಆಯುಕ್ತ(ಎಸಿ)ರಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ಕ್ರಮ ಕೈಗೊಂಡಿರುವ ಎಸಿ ಅವರು ಬಿಎಸ್ಸೆನ್ನೆಲ್‌ಗೆ ನೋಟಿಸ್ ನೀಡಿದ್ದಾರೆ.
ಕದ್ರಿ ಪಾರ್ಕ್ ಎದುರುಗಡೆಯ 2 ಎಕರೆ ಸ್ಥಳವನ್ನು ಕನ್ನಡಿಗರಿಗೆ ದೂರ ಸಂಪರ್ಕ ಲ್ಯಾಂಡ್ ಲೈನ್ ನೀಡಲು ದಶಕಗಳ ಹಿಂದೆ ನೀಡಲಾಗಿದ್ದು, ಅದರಲ್ಲಿ 50 ಸೆಂಟ್ಸ್ ಜಾಗದಲ್ಲಿ ಟೆಲಿಫೋನ್ ಎಕ್ಸ್‌ಚೇಂಜ್ ಕಟ್ಟಡ ನಿರ್ಮಾಣ ವಾಗಿದ್ದು, ಉಳಿದ ಜಾಗ ಖಾಲಿಯಾಗಿದೆ. ಇದೀಗ ಬಿಎಸ್ಸೆನ್ನೆಲ್ ಆ ಜಾಗವನ್ನು ಮಾರಾಟಕ್ಕೆ ಮುಂದಾಗಿದೆ. ಕೋಟಿಗಟ್ಟಲೆ ಬೆಲೆಯ ರಾಜ್ಯ ಸರಕಾರದ ಜಮೀನನ್ನು ಕನ್ನಡಿಗರಿಗಾಗಿಯೇ ಉಪಯೋಗಿಸಬೇಕು. ಅದನ್ನು ಖಾಸಗಿಯಾಗಿ ಮಾರಲು ಅವಕಾಶ ನೀಡಬಾರದು ಎಂದು ಸಾಮಾಜಿಕ ಹೋರಾಟಗಾರರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದರು. ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್., ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡು ನಿಗಮಕ್ಕೆ ಮಂಜೂರು ಮಾಡಲಾದ ಎಲ್ಲ ದಾಖಲೆಗಳನ್ನು ಕಚೇರಿಗೆ ವರದಿ ಮಾಡುವಂತೆ ಎಸಿಯವರಿಗೆ ತಿಳಿಸಿದ್ದರು.
ಕಟ್ಟಡ ಸಹಿತ 200 ಸೆಂಟ್ಸ್ ಜಾಗವನ್ನು ಪಾರ್ಕಿಂಗ್ ಸ್ಥಳವಾಗಿ ಉಪಯೋಗಿಸಲು ಮನಪಾಕ್ಕೆ ಒದಗಿಸಬೇಕು. ಇದರಿಂದ ಪಾಲಿಕೆಗೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಬಹುದಾಗಿದೆ. ಮಾತ್ರವಲ್ಲದೆ 25 ವರ್ಷ ಹಳೆಯ ಕಟ್ಟಡವನ್ನು ನ್ಯಾಯೋಚಿತ ಬೆಲೆಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಒದ ಗಿಸಬೇಕು ಎಂಬುದು ಹೋರಾಟಗಾರರ ಆಗ್ರಹವಾಗಿದೆ.
ಅದು ಸರಕಾರಿ ಜಾಗವಾಗಿದ್ದು, ಅದನ್ನು ಮಾರಾಟ ಅಥವಾ ಹರಾಜು ಹಾಕಲು ಆಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದೆ.
– ಮದನ್ ಮೋಹನ್, ಸಹಾಯಕ ಆಯುಕ್ತ, ಮಂಗಳೂರು ಉಪ ವಿಭಾಗ
ಮಂಗಳೂರು ಮಾತ್ರವಲ್ಲದೆ, ವಿವಿಧ ಕಡೆಗಳಲ್ಲೂ ಬಿಎಸ್ಸೆನ್ನೆಲ್‌ನ ಹೆಚ್ಚುವರಿ ಜಾಗದ ಮಾರಾಟ ಪ್ರಕ್ರಿಯೆ ಕೇಂದ್ರ ಸರಕಾರದ ಸಂಬಂಧಪಟ್ಟ ಇಲಾಖೆಯ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ.
– ಜಿ.ಆರ್. ರವಿ, ಪ್ರ. ಮಹಾ ಪ್ರಬಂಧಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.