ಬಿಎಸ್‌ಎನ್‌ಎಲ್: 4ಜಿ ಸೇವೆಯಲ್ಲಿ ರಾಜ್ಯದ 5ನೇ ನಗರವಾಗಿ ಮಂಗಳೂರು
Team Udayavani, Jan 23, 2020, 11:33 PM IST
ಮಹಾನಗರ: ನಗರದಲ್ಲಿ ಗುರುವಾರದಿಂದ ಬಿಎಸ್‌ಎನ್‌ಎಲ್ 4ಜಿ ಸೇವೆ ಆರಂಭಗೊಂಡಿದ್ದು, ಇದರೊಂದಿಗೆ 4ಜಿ ಸೇವೆ ಆರಂಭಗೊಂಡ ರಾಜ್ಯದ ಐದನೇ ನಗರವಾಗಿ ಮಂಗಳೂರು ಸೇರ್ಪಡೆಯಾಗಿದೆ.
ವಿಶೇಷ ಅಂದರೆ, ಮಂಗಳೂರಿನಲ್ಲಿಯೂ 3ಜಿ ಸ್ಪೆಕ್ಟ್ರಂನಡಿ ಇದೀಗ 4ಜಿ ನೆಟ್‌ವರ್ಕ್ ಸೇವೆ ಯನ್ನು ನೀಡಲಾಗಿದೆ. ರಾಜ್ಯದ ಕಲ ಬುರಗಿ, ಬೀದರ್, ರಾಯಚೂರು ಮತ್ತು ವಿಜ ಯ ಪುರ ನಗರದಲ್ಲಿ ಈಗಾ ಗಲೇ ಬಿಎಸ್ ಎನ್‌ಎಲ್ 4ಜಿ ಸೇವೆ ಇದ್ದು, ಗುರುವಾರದಿಂದ ಮಂಗಳೂರು ಸುತ್ತಮು ತ್ತಲೂ ಆರಂಭವಾಗಿದೆ. ಬಿಎಸ್‌ಎನ್‌ಎಲ್ ಈ ಹಿಂದೆಯೇ ತಿಳಿಸಿದಂತೆ ಕಳೆದ ಆಗಸ್ಟ್ ತಿಂಗಳಿನಲ್ಲಿಯೇ ನಗರದಲ್ಲಿ 4ಜಿ ಸೇವೆ ಆರಂಭಗೊಳ್ಳಬೇಕಿತ್ತು. ಆದರೆ ಕೆಲವೊಂದು ತಾಂತ್ರಿಕ ಕಾರಣದಿಂದಾಗ 5 ತಿಂಗಳುಗಳ ಬಳಿಕ ಇದೀಗ ಆರಂಭವಾಗಿದೆ.
ನಗರದಿಂದ ಅಡ್ಯಾರ್, ತೊಕ್ಕೊಟ್ಟು ಸೇತುವೆ, ಕಿನ್ನಿಗೋಳಿ, ಮೂಲ್ಕಿ, ಪಡುಬಿದ್ರಿವರೆಗೆ ಈ ಸೇವೆ ಲಭ್ಯವಾಗ ಲಿದ್ದು, ಈ ಹಿಂದೆಯೇ ಮೂಲ್ಕಿ ಮತ್ತು ಕಿನ್ನಿಗೋಳಿಯಲ್ಲಿ ಪರೀಕ್ಷಾರ್ಥ ಸೇವೆ ಒದಗಿಸಲಾಗಿತ್ತು. ಮಂಗಳೂರಿನಲ್ಲಿ ಬುಧವಾರ ರಾತ್ರಿಯೇ 3ಜಿಯಿಂದ 4ಜಿಗೆ ವರ್ಗಾವಣೆ ಪ್ರಕ್ರಿ ಯೆಗಳು ನಡೆದಿದೆ. ಜ. 23ರಂದು 4ಜಿ ಸೇವೆಗೆ ಅಧಿಕೃತ ಚಾಲನೆ ದೊರೆತಿದೆ. 4ಜಿ ಸೇವೆಯಲ್ಲಿ ಅತಿ ವೇಗದ ಡೇಟಾ ವ್ಯವಸ್ಥೆ ಹೊಂದಿದ್ದು, ಪ್ರಸ್ತುತ ಇರುವುದಕ್ಕಿಂತ ನಾಲ್ಕು ಪಟ್ಟು ವೇಗ ಜಾಸ್ತಿ ಇರಲಿದೆ ಎಂದು ಬಿಎ ಸೆನ್ನೆಲ್ ಮೂಲಗಳು ತಿಳಿಸಿವೆ.
ಗ್ರಾಹಕರು ಏನು ಮಾಡಬೇಕು?
ಬಿಎಸ್‌ಎನ್‌ಎಲ್ ತನ್ನ 4ಜಿ ಸೇವೆ ಆರಂಭವಾದಾಗಿನಿಂದ 3ಜಿ ಸೇವೆಯು ರದ್ದುಗೊಂಡಿದೆ. ಇದರಿಂದಾಗಿ 3ಜಿ ಸಿಮ್ ಹೊಂದಿದ ಗ್ರಾಹಕರಿಗೆ 2ಜಿ ಸೇವೆಯ ಇಂಟರ್‌ನೆಟ್ ದೊರಕುತ್ತಿದೆ. ಈ ಹಿನ್ನೆಲೆ ಯಲ್ಲಿ ಗ್ರಾಹಕರು ತಮ್ಮ ಸಿಮ್ ಅನ್ನು 3ಜಿ ಯಿಂದ 4ಜಿ ಗೆ ಬದಲಾಯಿಸಿ ಕೊಳ್ಳಬೇಕು. ಮಂಗಳೂರು ಸಹಿತ ಇತರ ಪ್ರದೇಶಗಳಲ್ಲಿ ರುವ ಬಿಎಸ್‌ಎನ್‌ಎಲ್ ಗ್ರಾಹಕ ಕೇಂದ್ರ ಗಳಲ್ಲಿ ಗುರುತಿನ ಚೀಟಿ ನೀಡಿ ತಮ್ಮ ಸಿಮ್ ಅನ್ನು ಉಚಿತವಾಗಿ ಬದಲಾವಣೆ ಮಾಡಿ ಕೊಳ್ಳಲು ಅವಕಾಶವಿದೆ.
ಬಹು ನಿರೀಕ್ಷಿತ ಬಿಎಸ್‌ಎನ್‌ಎಲ್ 4ಜಿ ಸೇವೆ ಮಂಗಳೂರಿನಲ್ಲಿ ಗುರುವಾರ ಆರಂಭ ವಾಗಿದ್ದರೂ ಬುಧವಾರದಿಂದ ನಗರದ ಅನೇಕ ಕಡೆಗಳಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಬಿಗ ಡಾಯಿ ಸಿತ್ತು. ಬೆಂಗಳೂರಿನ ಕೇಂದ್ರ ಕಚೇರಿ ಯಲ್ಲಿನ ತಾಂತ್ರಿಕ ತೊಂದರೆಯಿಂದ ಈ ಸಮಸ್ಯೆ ಉಂಟಾಗಿದ್ದು, ಗುರುವಾರ ಬೆಳಗ್ಗಿನ ವೇಳೆ ಕೆಲವು ಕಡೆಗಳಲ್ಲಿ ಸಮಸ್ಯೆ ಪರಿ ಹಾರ ವಾಗಿದೆ. ಉಳಿದೆಡೆ ಗುರುವಾರ ಸಮಸ್ಯೆ ಪರಿಹಾರವಾಗಲಿದೆ.
ಡಾಟಾ ವೇಗ ನಾಲ್ಕು ಪಟ್ಟು ಹೆಚ್ಚಳ
ಬಿಎಸ್‌ಎನ್‌ಎಲ್ 3ಜಿ ಬಳಕೆ ಮಾಡುತ್ತಿದ್ದ ಗ್ರಾಹಕರಿಗೆ 4ಜಿಯಿಂದ ಇಂಟರ್‌ನೆಟ್ ಡಾಟಾ ವೇಗ ಅಧಿಕ ಇರಲಿದೆ. ಇದರಿಂದಾಗಿ ಯಾವುದೇ ವೀಡಿಯೋ ಅಥವಾ ಫೋಟೋ ಕ್ಷಣಾರ್ಧದಲ್ಲಿ ಡೌನ್‌ಲೋಡ್ ಆಗಲಿದೆ. ಈ ಹಿಂದೆ 3ಜಿಯಲ್ಲಿ ಮಂಗಳೂರು ನಗರದಲ್ಲಿ ಸುಮಾರು 2 ಎಂ.ಬಿ./ಸೆ. ಡಾಟಾ ವೇಗ ಇತ್ತು. ಇದೀಗ 4ಜಿಯಲ್ಲಿ ಡಾಟಾ ವೇಗವು 8 ಎಂಬಿ/ಸೆ. ನಿಂದ 10 ಎಂಬಿ/ಸೆ. ಇದೆ. ನಗರದಲ್ಲಿ ಒಟ್ಟು 7,94,678 ಬಿಎಸ್‌ಎನ್‌ಎಲ್ ಸಿಮ್ ಸಂಪರ್ಕವಿದೆ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳು “ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ.
3ಜಿಯಿಂದ 4ಜಿ ಸಿಮ್‌ಗೆ ಉಚಿತವಾಗಿ ವರ್ಗಾವಣೆ
ನಗರದಲ್ಲಿ ಬುಧವಾರ ರಾತ್ರಿ 9.30ರಿಂದ 12 ಗಂಟೆಯವರೆಗೆ 4ಜಿ ಸೇವೆ ವರ್ಗಾವಣಾ ಪ್ರಕ್ರಿಯೆ ನಡೆದು ಗುರುವಾರದಿಂದ 4ಜಿ ಸೇವೆ ಆರಂಭವಾಗಿದೆ. ಬಿಎಸ್‌ಎನ್‌ಎಲ್ ಸೇವಾ ಕೇಂದ್ರದಲ್ಲಿ ಮಾ.31ರ ವರೆಗೆ 3ಜಿಯಿಂದ 4ಜಿ ಸಿಮ್‌ಗೆ ಉಚಿತವಾಗಿ ವರ್ಗಾವಣೆ ಮಾಡಬಹುದು. ಬಳಿಕ ಸೇವಾಶುಲ್ಕ ನೀಡಬೇಕಾಗುತ್ತದೆ.
- ಪ್ರಕಾಶ್ ಎಂ., ಬಿಎಸ್‌ಎನ್‌ಎಲ್ ಮಂಗಳೂರು ನಗರ ಡಿಜಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.