“ಉದ್ಯಮ ಬೆಳವಣಿಗೆಗೆ ಉತ್ತೇಜನಕಾರಿ ಬಜೆಟ್’
ಕರಾವಳಿಗೆ ಕೊಡುಗೆ ನೀಡಿದ್ದರೆ ಇನ್ನಷ್ಟು ಖುಷಿ: ಉದಯವಾಣಿ ಬಜೆಟ್ ಸಂವಾದದಲ್ಲಿ ತಜ್ಞರ ಅಭಿಮತ
Team Udayavani, Feb 2, 2020, 5:33 AM IST
ಮಂಗಳೂರು: ಈ ಬಜೆಟ್ ದೀರ್ಘಾವಧಿ ಪರಿಣಾಮದ್ದು. ಈ ಹೊತ್ತಿನ ಅಗತ್ಯಗಳಿಗೆ ಹೆಚ್ಚು ನಿರೀಕ್ಷಿಸುವಂತಿಲ್ಲ. ಉದ್ಯಮಗಳಿಗೆ ಉತ್ತೇಜನ ನೀಡಿದ್ದು ನಿಜಕ್ಕೂ ಸ್ವಾಗತಾರ್ಹ ಎಂಬ ಅಭಿಪ್ರಾಯ ಬಜೆಟ್ ಕುರಿತ ಕ್ಷೇತ್ರ ಪರಿಣತರ ಸಂವಾದದಲ್ಲಿ ವ್ಯಕ್ತವಾಯಿತು.
“ಉದಯವಾಣಿ’ಯು ಶನಿವಾರ ಮಂಗಳೂರು ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಐಸಾಕ್ ವಾಜ್, ಕೆನರಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಅಜಿತ್ ಕಾಮತ್, ಹಿರಿಯ ಬ್ಯಾಂಕರ್ ಬಿ.ಆರ್. ಭಟ್, ಹಿರಿಯ ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ್, ನವೋದ್ಯಮಿ ಯಶಸ್ವಿನಿ ಅಮಿನ್ ಅವರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಬಿ.ಆರ್. ಭಟ್ ಮಾತನಾಡಿ, ಬಜೆಟ್ ದೀರ್ಘಾವಧಿ ದೃಷ್ಟಿಕೋನ ಹೊಂದಿದೆ. ತತ್‌ಕ್ಷಣಕ್ಕೆ ಭಾರೀ ಲಾಭ ಸಿಗದು. ಬ್ಯಾಂಕಿಂಗ್ ಕ್ಷೇತ್ರ ಬಲಪಡಿ ಸುವ ಉಪಕ್ರಮಗಳು ಆರ್ಥಿಕ ಕ್ಷೇತ್ರಕ್ಕೆ ಉತ್ತೇಜನಕಾರಿ ಎಂದರು.
ಎಸ್.ಎಸ್. ನಾಯಕ್ ಮಾತನಾಡಿ, ಹೊಸ ತೆರಿಗೆದಾರರಿಗೆ ಹೊಸ ಆದಾಯ ತೆರಿಗೆ ಮಿತಿ ಕೊಡುಗೆ ನೀಡಲಾಗಿದೆ. ಆದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೂಲ ಸೌಲಭ್ಯ ಅಭಿವೃದ್ಧಿಗೆ ಏನನ್ನೂ ಪ್ರಕಟಿಸದಿರುವುದು ಬೇಸರ ತಂದಿದೆ ಎಂದು ಅಭಿಪ್ರಾಯಪಟ್ಟರು.
ಐಸಾಕ್ ವಾಜ್ ಮಾತನಾಡಿ, ಉದ್ಯಮಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂತಹ ಮತ್ತಷ್ಟು ಕ್ರಮಗಳ ಅಗತ್ಯವಿತ್ತು. ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಲು ಕ್ರಮ ಕೈಗೊಳ್ಳಬೇಕಿತ್ತು ಎಂದರು.
ಕೆನರಾ ಸಣ್ಣ ಕೈಗಾರಿಕಾ ಅಸೋಸಿ ಯೇಶನ್ ಅಧ್ಯಕ್ಷ ಅಜಿತ್ ಕಾಮತ್ ಮಾತನಾಡಿ, ಉದ್ಯಮ ಕ್ಷೇತ್ರಕ್ಕೆ ಮಹತ್ವ ನೀಡಲಾಗಿದೆ. ಗೃಹ ಸಾಲದ ಬಡ್ಡಿಯ ಮೇಲೆ ನೀಡಲಾಗುತ್ತಿರುವ ತೆರಿಗೆ ವಿನಾಯಿತಿಯನ್ನು ಮುಂದಿನ ಒಂದು ವರ್ಷಕ್ಕೆ ವಿಸ್ತರಣೆ ಮಾಡಿರುವುದು ಮಧ್ಯಮ ವರ್ಗದವರಿಗೆ ಲಾಭವಾಗಬಹುದು ಎಂದರು.
ಯಶಸ್ವಿನಿ ಅಮೀನ್, ಯುವ ಜನತೆಯ ಕೌಶಲ ಮತ್ತು ತರಬೇತಿಗೆ ಆದ್ಯತೆ ನೀಡಿರುವುದು ಅಭಿನಂದನೀಯ. ಇದರಿಂದ ಯುವಜನರಿಗೆ ಉದ್ಯೋಗಾವಕಾಶ ಹೆಚ್ಚಾಗಲಿದೆ ಎಂದರು.
ಔಚಿತ್ಯಪೂರ್ಣ ಸಂವಾದ
“ಉದಯವಾಣಿ’ ಪತ್ರಿಕೆಯು ಜನಪರ ಕೆಲಸ ಮಾಡುತ್ತಿದ್ದು, ಸ್ಥಳೀಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ ಬಜೆಟ್ ವಿಶ್ಲೇಷಣೆಗೆ ವೇದಿಕೆ ಕಲ್ಪಿಸಿರುವುದು ಔಚಿತ್ಯಪೂರ್ಣ ಎಂದು ಪರಿಣತರು ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.