ಬಜೆಟ್‌ ಕಡೆಗೆ ನಿರೀಕ್ಷೆ ; ಆಡಳಿತಕ್ಕೆ ಸತ್ವಪರೀಕ್ಷೆ

Team Udayavani, Mar 14, 2017, 11:15 AM IST

kagodu.jpg

ಮಂಗಳೂರು: ಅವಿಭಜಿತ ದ.ಕ. ಜಿಲ್ಲೆಯಲ್ಲಿ 4 ಹೊಸ ತಾಲೂಕುಗಳ ರಚನೆಯ ಅನುಷ್ಠಾನ ಭರವಸೆಗೆ ಬರೋಬ್ಬರಿ 4 ವರ್ಷಗಳು. ಪ್ರತಿ ಬಾರಿ ಬಜೆಟ್‌ ಸಮೀಪಿಸುತ್ತಿರುವಾಗಲೂ ತಾ|ಗಳ ರಚನೆ ಸಾಕಾರದ ಆಶೆಗಳು ಗರಿಗೆದರುತ್ತವೆ. ಆದರೆ ಹಂತ ಹಂತವಾಗಿ ಮಾಡುವ ಭರವಸೆಯೊಂದಿಗೆ ಮತ್ತೆ ಮುಂದಿನ ವರ್ಷದತ್ತ ಆಶಾವಾದ ಹೊರಳುತ್ತದೆ. 

ಹೊಸದಾಗಿ ಕಡಬ, ಮೂಡಬಿದಿರೆ, ಬೈಂದೂರು, ಬ್ರಹ್ಮಾವರ ತಾಲೂಕುಗಳ ಘೋಷಣೆ ಮಾಡಿ 4 ವರ್ಷಗಳು ಕಳೆದಿವೆ. ಪ್ರಸ್ತುತದ ಆಡಳಿತಾರೂಢ ಸರಕಾರ ಹಂತ ಹಂತವಾಗಿ ತಾಲೂಕು ರಚನೆ ಮಾಡುವುದಾಗಿ 4 ವರ್ಷಗಳಿಂದಲೂ ಭರವಸೆ ನೀಡುತ್ತಾ ಬಂದಿದೆ. ಈಗ ಮುಂದಿನ ಆರ್ಥಿಕ ಸಾಲಿನ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭಗೊಂಡಿವೆ. ಪ್ರಸ್ತುತ ಕಂದಾಯ ಸಚಿವರಾಗಿರುವ ಕಾಗೋಡು ತಿಮ್ಮಪ್ಪ ಹೊಸ ತಾಲೂಕುಗಳ ಅನುಷ್ಠಾನದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾ ಬಂದಿದ್ದಾರೆ. ಇದಕ್ಕೆ ಪೂರಕ ಕ್ರಮಗಳು ಬಜೆಟ್‌ನಲ್ಲಿ ಕಂಡುಬರಬಹುದು ಹಾಗೂ ಘೋಷಣೆಯಾಗಿರುವ ಹೊಸ ತಾಲೂಕುಗಳ ರಚನೆಗೆ ಅನುದಾನ ದೊರೆತು ಹಲವು ವರ್ಷಗಳ ಕನಸಿಗೆ ಸಾಕಾರ ಭಾಗ್ಯ ಲಭಿಸೀತು ಎಂಬ ನಿರೀಕ್ಷೆ ಈ ಭಾಗದ ಜನರದ್ದಾಗಿದೆ. 

ಹಿಂದಿನ ಬಿಜೆಪಿ ಸರಕಾರ ತನ್ನ ಆಡಳಿತಾವಧಿಯ ಕೊನೆ ಘಟ್ಟದಲ್ಲಿ ಹೊಸದಾಗಿ 53 ತಾಲೂಕುಗಳ ರಚನೆಯನ್ನು ಘೋಷಿಸಿತ್ತು. ಮುಂದೆ ನಡೆದ ಚುನಾವಣೆಯಲ್ಲಿ ಸೋಲು ಕಂಡ ಪರಿಣಾಮ ಇದರ ಅನುಷ್ಠಾನ ಹೊಣೆ ಮುಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರಕಾರದ ಅಂಗಳಕ್ಕೆ ಬಂತು.  ಕಾಂಗ್ರೆಸ್‌ ಸರಕಾರ ತನ್ನ ಅಧಿಕಾರಾವಧಿಯ 4ನೇ ವರ್ಷದ ಬಜೆಟ್‌ ಮಂಡನೆ ಕೆಲವೇ ದಿನಗಳಲ್ಲಿ ಆಗಲಿದೆ. ಮುಂದಿನ ವರ್ಷ ಚುನಾವಣಾ ವರ್ಷ. ಈ ಬಜೆಟ್‌ನಲ್ಲಿ ಹೊಸ ತಾಲೂಕುಗಳ ರಚನೆಯಾದರೆ ಕಾಂಗ್ರೆಸ್‌ ಆಡಳಿತದಲ್ಲಿ ಸಾಕಾರ ಭಾಗ್ಯ ಪಡೆದಂತಾಗುತ್ತದೆ. 

55 ವರ್ಷಗಳ ಬೇಡಿಕೆ
ಅವಿಭಜಿತ ದ.ಕನ್ನಡ ಜಿಲ್ಲೆಯಲ್ಲಿ ಹೊಸ ತಾಲೂಕುಗಳ ರಚನೆ ಬೇಡಿಕೆ 55 ವರ್ಷಗಳಷ್ಟು ಹಿಂದಿನದ್ದು. ಇದರ ಸಾಧ್ಯಾಸಾಧ್ಯತೆ ಪರಿಶೀಲಿಸಲು ರಚಿಸಿದ ಸಮಿತಿ ವರದಿ ನೀಡಿ 31 ವರ್ಷಗಳು ಕಳೆದಿವೆ.

1961ರಲ್ಲಿ ಕಡಬ ತಾಲೂಕು ರಚನೆಗೆ ಆಗ್ರಹ ಆರಂಭಗೊಂಡಿತ್ತು. ಕಡಬ ತಾಲೂಕು ಹೋರಾಟ ಸಮಿತಿ ರಚಿಸಿಕೊಂಡು ನಿರಂತರ ಹೋರಾಟಗಳು ನಡೆದಿವೆ. 1964ರಲ್ಲಿ ಮೂಡಬಿದಿರೆ ತಾಲೂಕು ರಚನೆ ಬೇಡಿಕೆ ಹುಟ್ಟಿಕೊಂಡಿತ್ತು. ಹೊಸ ತಾಲೂಕುಗಳ ರಚನೆಗೆ ಕರ್ನಾಟಕ ಸರಕಾರ 1985ರಲ್ಲಿ ನೇಮಿಸಿದ್ದ ಬಿ.ಎಂ. ಹುಂಡೇಕರ್‌ ಸಮಿತಿ ಕಡಬ, ಮೂಡಬಿದಿರೆ ತಾಲೂಕುಗಳ ರಚನೆಗೆ ವರದಿಯಲ್ಲಿ ಶಿಫಾರಸು ಮಾಡಿತ್ತು. ಆ ಬಳಿಕ ರಚಿಸಿದ್ದ ಗದ್ದಿಗೌಡರ್‌ ಸಮಿತಿ ಹಾಗೂ ವಾಸುದೇವ ರಾವ್‌ ಸಮಿತಿ ವರದಿಯಲ್ಲೂ ಇದರ ಆವಶ್ಯಕತೆ ಪ್ರತಿಪಾದನೆ ಮಾಡಲಾಗಿತ್ತು. 

2013-14ರಲ್ಲಿ ಬಿಜೆಪಿ ಸರಕಾರದ ಕೊನೆಯ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್‌ ದ.ಕ. ಜಿಲ್ಲೆಯ ಕಡಬ, ಮೂಡಬಿದಿರೆ ಹಾಗೂ ಉಡುಪಿ ಜಿಲ್ಲೆಯ ಬ್ರಹ್ಮಾವರ, ಬೈಂದೂರು ಸೇರಿ 43 ಹೊಸ ತಾಲೂಕುಗಳ ರಚನೆ ಘೋಷಣೆ ಮಾಡಿದಾಗ ಬಹುದಿನಗಳ ಕನಸು ಸಾಕಾರಗೊಂಡಿತು ಎಂದು ಸಂಭ್ರಮಪಡಲಾಯಿತು. ಆದರೆ ಚುನಾವಣೆ ಬಳಿಕ ಅಧಿಕಾರಕ್ಕೆ ಬಂದ ಈಗಿನ ಸರಕಾರ ಇದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದಿದ್ದ ಪರಿಣಾಮ ಜನತೆ ಮತ್ತೆ ನಿರಾಸೆ ಅನುಭವಿಸುವಂತಾಯಿತು. 

ತಾಲೂಕುಗಳ ರಚನೆ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾವನೆಯಾ ಗುತ್ತಿರುವಾಗ ಲಭಿಸಿದ್ದು, ಹಂತಹಂತ ಗಳ ಅನುಷ್ಠಾನದ ಭರವಸೆ ಮಾತ್ರ. ವಿಳಂಬಕ್ಕೆ ಆರ್ಥಿಕ ಅನುದಾನದ ಆವಶ್ಯಕತೆ ತೋರಿಸಲಾಗುತ್ತಿದೆ. 

ಅರ್ಧ ಕೆಲಸ ಆಗಿದೆ
ಘೋಷಣೆಯಾಗಿರುವ ಹೊಸ ತಾಲೂಕುಗಳು ಈಗಾಗಲೇ ತಾಲೂಕು ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ಒಂದಷ್ಟು ಕೆಲಸ ಆಗಿದೆ. 2005ರಲ್ಲಿ ಕಡಬ ಹೋಬಳಿ ರಚಿಸಿ ವಿಶೇಷ ತಹಶೀಲ್ದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಮೂಡಬಿದಿರೆಯೂ ಪ್ರಸ್ತುತ ಹೋಬಳಿ ಸ್ವರೂಪದಲ್ಲಿದ್ದು, ವಿಶೇಷ ತಹಶೀಲ್ದಾರರು ಇದ್ದಾರೆ. ಹಾಗಾಗಿ ತಾಲೂಕುಗಳ ರಚನೆಗೆ ಆರ್ಥಿಕ ಹೊರೆ ಪ್ರಮಾಣ ಕಡಿಮೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಘೋಷಣೆಯಾಗಿರುವ ಹೊಸ 53 ತಾಲೂಕುಗಳ ರಚನೆಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಕೋರಿ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪರಿಶೀಲಿಸುವ ಭರವಸೆ ನೀಡಿದ್ದಾರೆ. 
– ಕಾಗೋಡು ತಿಮ್ಮಪ್ಪ , ಕಂದಾಯ ಸಚಿವರು

– ಕೇಶವ ಕುಂದರ್

ಟಾಪ್ ನ್ಯೂಸ್

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

courts

Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

7-shahapur

Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.