ಪುಸ್ತಕ ಕೊಂಡು ಓದುವ ಅಭಿರುಚಿ ಬೆಳೆಸಿ
Team Udayavani, Apr 23, 2019, 7:14 AM IST
ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವುದು ಪ್ರಚಲಿತವಾದ ಮಾತು. ಜ್ಞಾನ ಸಂಪಾದನೆಗೆ ಅಂದಿನಿಂದ ಇಂದಿನವರೆಗೂ ಪುಸ್ತಕವೇ ಮೂಲವಾಗಿದೆ. ಇ-ಬುಕ್ ಇರುವ ಈ ಕಾಲದಲ್ಲೂ ಪುಸ್ತಕಗಳ ತನ್ನ ಮೌಲ್ಯಗಳನ್ನು ಕಳೆದುಕೊಂಡಿಲ್ಲ. ಪುಸ್ತಕ, ಲೇಖಕರು ಮತ್ತು ಪ್ರಕಾಶನಗಳ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 1995ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಯುನೆಸ್ಕೋದ ಸಾಮಾನ್ಯ ಸಭೆಯಲ್ಲಿ ಎಪ್ರಿಲ್ 23ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಈ ನಿಟ್ಟಿನಲ್ಲಿ ಪ್ರತಿ ವರ್ಷ ವಿಶ್ವಾದ್ಯಂತ ಯುನೆಸ್ಕೋ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಆಚರಿಸಲಾಗುತ್ತದೆ.
ಆಚರಣೆಯ ಉದ್ದೇಶ
ಒಬ್ಬ ವ್ಯಕ್ತಿಯ ಬೌದ್ಧಿಕ ಪ್ರಬುದ್ಧತೆ ಬರುವುದೇ ಪುಸ್ತಕ ಓದುವುದರಿಂದ, ಓದು ನಮ್ಮ ಮನೋವೈಶಾಲ್ಯವನ್ನು ಹೆಚ್ಚಿಸುವ ಬಹುದೊಡ್ಡ ಸಾಧನ. ಈ ಆಧುನಿಕ ಕಾಲದಲ್ಲಿ ಇಂದಿನ ಯುವ ಜನತೆಯಲ್ಲಿ ಪುಸ್ತಕ ಪ್ರೇಮ ಕೊರತೆ ಬಹಳಷ್ಟಿದೆ. ಯುವ ಜನತೆಯಲ್ಲಿ ಪುಸ್ತಕ ಕುರಿತಾದ ಮಹತ್ವ ಹೆಚ್ಚಿಸಲು, ಪುಸ್ತಕ ಮಾರಾಟವನ್ನು ಹೆಚ್ಚಿಸುವ ಸಲುವಾಗಿ, ಪುಸ್ತಕದ ಉಳಿವಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಕೃತಿಸ್ವಾಮ್ಯ ದಿನ
ಪುಸ್ತಕಗಳ ರಕ್ಷಕನಾಗಿ ಕೃತಿಸ್ವಾಮ್ಯ ಕೆಲಸ ಮಾಡುತ್ತದೆ. ಲೇಖಕರಿಗೆ ಪುಸ್ತಕಗಳೇ ಆಸ್ತಿ .
ಈ ಅಸ್ತಿಯನ್ನು ಕದಿಯದಂತೆ ನೋಡುಕೊಳ್ಳುತ್ತದೆ ಕೃತಿಸ್ವಾಮ್ಯ ಕಾಯ್ದೆ. ಭಾರತ ಸಹಿತ ವಿಶ್ವ ದ ಅನೇಕ ರಾಷ್ಟ್ರಗಳಲ್ಲಿ ಕೃತಿ ಸ್ವಾಮ್ಯ ಕಾಯ್ದೆ ಇದೆ.
ಪುಸ್ತಕದ ಜತೆ ಸಂಗೀತ, ನಾಟಕ, ಸಿನೆಮಾ, ಛಾಯಾಚಿತ್ರ, ತಂತ್ರಜ್ಞಾನಕ್ಕೂ ಕೃತಿಸ್ವಾಮ್ಯ ಅನ್ವಯವಾಗುತ್ತದೆ. ಕೃತಿ ಸ್ವಾಮ್ಯದ ಅಪರಾಧಿ ಎಂದು ಸಾಬೀತಾದರೆ ದಂಡ ಮತ್ತ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಪುಸ್ತಕ ಓದುವ ಹವ್ಯಾಸ ಇರುವವರೂ ಎಲ್ಲಿ ಬೇಕಾದರೂ ಸಂತೋಷವಾಗಿರುತ್ತಾರೆ ಎನ್ನುವುದು ಮಹಾತ್ಮಾ ಗಾಂಧಿಜೀ ಅವರ ಮಾತು.
ಹಿಂದಿನ ಮತ್ತು ಭವಿಷ್ಯದ ಪೀಳಿಗೆ ನಡುವೆ ತಲೆಮಾರುಗಳ ಮತ್ತು ಸಂಸ್ಕೃತಿಗಳ ನಡುವಿನ ಸೇತುವೆಯಾಗಿ ಪುಸ್ತಕ ನಿಲ್ಲುತ್ತದೆ.
ಪುಸ್ತಕಗಳ ಮಾರಾಟ ಸಂಖ್ಯೆ ಕಡಿಮೆಯಾಗಿರಬಹುದು ಆದರೆ ಅವುಗಳ ಪ್ರಕಟನೆಗಳು ಸ್ಥಿರವಾಗಿವೆ. ಇದು ಪುಸ್ತಕಗಳ ಜನಪ್ರಿಯತೆಗೆ ಸಾಕ್ಷಿ.
ಪುಸ್ತಕ ಕೊಂಡು ಓದುವ ಅಭಿರುಚಿ ಬೆಳೆಸಿ
ಮೈ ಮೇಲೆ ಹರಕು ಬಟ್ಟೆ ಇದ್ದರೂ ಚಿಂತೆಯಿಲ್ಲ, ಕೈಯಲ್ಲೊಂದು ಪುಸ್ತಕವಿರಲಿ ಎಂಬ ಮಾತಿನಂತೆ ಪುಸ್ತಕಗಳ ಓದಿನಿಂದ ಮನುಷ್ಯನಿಗೆ ಜ್ಞಾನ ಸಂಪಾದನೆ ಜತೆಗೆ ಆತನ ಅಸ್ತಿತ್ವದ ಬಗ್ಗೆ ಅರಿವಾಗುತ್ತದೆ. ಪ್ರಸ್ತುತವಾಗಿ ಪುಸ್ತಕ ಓದುವವರ ಸಂಖ್ಯೆ ವಿರಳವಾಗುತ್ತಿದೆ. ಪುಸ್ತಕ ಓದು, ಮನುಷ್ಯನ ಹವ್ಯಾಸವಷ್ಟೇ ಅಲ್ಲ, ದೈನಂದಿನ ಕಾಯಕವಾಗಲಿ ಎಂಬ ಸದಾಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.