
“ವಿಶಾಲ ಮನೋಭಾವ ಬೆಳೆಸಿಕೊಳ್ಳಿ’
ಹಳೆ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗುರುವಂದನೆ
Team Udayavani, May 6, 2019, 6:40 AM IST

ಕೂಳೂರು: ನಾವು ಸದಾ ನಾನು,ನನ್ನದು ಎಂದು ತಿಳಿದುಕೊಳ್ಳದೆ ವಿಶಾಲ ಮನೋಭಾವದಿಂದ ಪ್ರಪಂಚ ವನ್ನು ಕಂಡರೆ ಸಮಾಜದ ಹಿತ ಕಾಪಾಡಲು ಸೇವೆ ಮಾಡಲು ಸಾಧ್ಯವಾಗುತ್ತದೆ.ಹೀಗಾಗಿ ಎಲ್ಲರೂ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕೂಳೂರು ಚರ್ಚ್‌ನ ಧರ್ಮಗುರುಗಳಾದ ವಂ|ವಿನ್ಸೆಂಟ್ ಡಿ’ಸೋಜಾ ಹೇಳಿದರು.
ಕೂಳೂರು ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘ 1996-97 ಇದರ ವತಿ ಯಿಂದ ಹಮ್ಮಿಕೊಂಡ ಗುರುವಂದನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯೆ ನೀಡಿದ ಶಿಕ್ಷಕರನ್ನು ಗೌರವಿಸುವ ಸಮಾರಂಭಗಳು ವಿರಳವಾಗುತ್ತಿರುವ ಇಂದಿನ ದಿನಗಳಲ್ಲಿ ಚರ್ಚ್ ಶಾಲೆಯ ಹಳೆ ವಿದ್ಯಾರ್ಥಿಗಳು ವಿದ್ಯೆ ನೀಡಿ ಬದುಕು ರೂಪಿಸಿದ ಶಿಕ್ಷಕರನ್ನು ಮರೆ ಯದೆ ಸಮ್ಮಾನಿಸಿರುವುದು ಅಪರೂಪದ ಮಾದರಿ ಕಾರ್ಯಕ್ರಮ. ದೇವರಲ್ಲಿ ಪ್ರೀತಿ, ಜನರ ಸೇವೆಯ ಮನಸ್ಸನ್ನು ರೂಪಿಸಿ ಕೊಂಡಾಗ ನಮ್ಮ ಏಳಿಗೆ ಸಾಧ್ಯ. ಇಲ್ಲಿನ ವಿದ್ಯಾರ್ಥಿಗಳು ಸಮಾಜದ ಶಕ್ತಿಗಳಾಗಿ ಬೆಳೆದಿದ್ದಾರೆ ಎಂದು ಪ್ರಶಂಸಿಸಿದರು.
ಸಮ್ಮಾನ
ಶಿಕ್ಷಕರಾದ ಸೆಲಿನ್ ಡಿ’ಸೋಜಾ, ಮೋಹಿನಿ, ರೆನಿಲ್ಡಾ ಪಿರೇರ, ಫಿಲೋ ಮಿನಾ ಡಿ. ಕ್ರೂಜ್, ಉರ್ಬನ್ ಮಸ್ಕ ರೇನ್ಹಸ್, ಸೌಮ್ಯಲತಾ, ವಂ| ಪಾವ್É ಸಿಕ್ವೇರ, ಸಿಸ್ಟರ್ ಲಿಲ್ಲಿ ಪಿಂಟೋ, ಗೋಪಾ ಲಕೃಷ್ಣ ತುಳುಪುಳೆ, ನಾಲ್ವರು ಶಿಕ್ಷಕೇತರ ಸಿಬಂದಿಗೆ ಹಾರ, ಮೈಸೂರು ಪೇಟ, ಚಿನ್ನದ ನಾಣ್ಯ,ಅಭಿನಂದನ ಪತ್ರ ನೀಡಿ ವಿದ್ಯಾರ್ಥಿಗಳು ಸ್ವತಃ ಸಮ್ಮಾನಿಸಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷ ಕರು ಇದು ಇತರ ಪ್ರಶಸ್ತಿಗಿಂತ ದೊಡ್ಡದು, ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸವು ನಮಗೆ ಅತೀವ ಸಂತಸ ಉಂಟು ಮಾಡಿದೆ ಎಂದರು.
ಸಹಪಾಠಿ ವಿದ್ಯಾರ್ಥಿಗಳಾದ 7 ಮಂದಿ ಯೋಧರನ್ನು ಸಹ ಈ ಕಾರ್ಯ ಕ್ರಮದಲ್ಲಿ ಸಮ್ಮಾನಿಸಲಾಯಿತು. ರಾಷ್ಟ್ರ ಪ್ರಶಸ್ತಿ ವಿಜೇತ ಸಹಪಾಠಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಹಳೆ ವಿದ್ಯಾರ್ಥಿಗಳು ಅಧ್ಯಾಪಕರ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.ಪ್ರಸಿಲ್ಲಾ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಶಾನವಾಝ್ ವಂದಿಸಿದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.