‘ಸವಾಲು ಎದುರಿಸಿ ಸದೃಢ ಭಾರತ ಕಟ್ಟೋಣ’
Team Udayavani, Aug 16, 2018, 11:00 AM IST
ಪುತ್ತೂರು: ದೇಶದಲ್ಲಿ ಉಳಿದು ಕೊಂಡಿರುವ ಸಮಸ್ಯೆ, ಸವಾಲುಗಳನ್ನು ಎದುರಿಸಿ ಸದೃಢ ಭಾರತವನ್ನು ಕಟ್ಟುವ ಕಡೆಗೆ ನಮ್ಮ ಚಿತ್ತವಿರಬೇಕು. ಆರ್ಥಿಕ, ಸಾಮಾಜಿಕ, ಭೌತಿಕ ಮಟ್ಟದಲ್ಲಿ ದೇಶವನ್ನು ಬಲಿಷ್ಠವಾಗಿ ಮುನ್ನಡೆಸಲು ಯುವ ಸಮುದಾಯ ಮುಂದೆ ಬರಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಆಶಯ ವ್ಯಕ್ತಪಡಿಸಿದ್ದಾರೆ. ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವತಿಯಿಂದ ಮಂಗಲ್ ಪಾಂಡೆ ಚೌಕದಲ್ಲಿ ನಡೆದ 72ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.
ಸಮಾನತೆ, ಸಾರ್ವಭೌಮತ್ವ ಸಾರಿದ, ವಿಭಿನ್ನತೆಯಲ್ಲಿ ಏಕತೆ ಸಾಧಿಸಿದ ದೇಶ ನಮ್ಮದು. ಇಂತಹ ಹೆಮ್ಮೆ ಅನುಭವಿಸುವ ಅವಕಾಶ ನಮ್ಮೆಲ್ಲರ ಪುಣ್ಯ. ಈ ಘನತೆಯ ವೈಭವವನ್ನು ಮತ್ತಷ್ಟು ಉನ್ನತಿಗೆ ಏರಿಸುವ ಕೆಲಸ ಪ್ರತಿಯೊಬ್ಬ ಪ್ರಜೆಯಿಂದ ಆಗಬೇಕು. 21ನೇ ಶತಮಾನ ಭಾರತದ ಶತಮಾನ ಎನ್ನುವುದಕ್ಕೆ ಪೂರಕವಾಗಿ ನಮ್ಮ ಪಾಲಿನ ಸೇವೆಯನ್ನೂ ನೀಡಬೇಕು ಎಂದರು.
ಸೈನಿಕ ಪ್ರಜ್ಞೆಯಿರಲಿ
ಪ್ರತಿ ವ್ಯಕ್ತಿಯಲ್ಲಿ ಸೈನಿಕ ಪ್ರಜ್ಞೆ ಜಾಗೃತವಾಗಿರಬೇಕು. ಸ್ವತ್ಛ ಭಾರತ, ಸ್ವಚ್ಛ ಪರಿಸರ ಮೊದಲಾದ ಜಾಗೃತ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಮೂಡಬೇಕು. ಮಾತಿನ ಮೂಲಕ ಮಾತ್ರವಾಗಿರದೆ ಕೃತಿಯ ಮೂಲಕವೂ ದೇಶಪ್ರೇಮ ಕಾರ್ಯ ರೂಪಕ್ಕೆ ಬರಬೇಕು. ಸರಕಾರಗಳು ಮಾಡುವುದಕ್ಕಿಂತ ನಾವು ಮಾಡೋಣ ಎಂಬ ಸಂಕಲ್ಪ ತೊಡಬೇಕು ಎಂದು ಉಪ ವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಹೇಳಿದರು.
ಏಕತೆಗೆ ಎಲ್ಲರ ಸಹಭಾಗಿತ್ವ ಅತ್ಯಗತ್ಯ: ಅಂಗಾರ
ಸುಳ್ಯ : ಸಮಾಜದಲ್ಲಿ ಏಕತೆ ಮೂಡಿಸಲು ಒಬ್ಬರಿಂದ ಸಾಧ್ಯವಿಲ್ಲ. ಅದು ಸರ್ವರ ಪ್ರಯತ್ನದ ಫಲ. ಇದರಲ್ಲಿ ಎಲ್ಲರ ಹೊಣೆಗಾರಿಕೆ ಇದೆ ಎಂದು ಶಾಸಕ ಎಸ್. ಅಂಗಾರ ಹೇಳಿದರು.
ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಆಶ್ರಯದಲ್ಲಿ ಬುಧವಾರ ಸ.ಪ.ಪೂ. ಕಾಲೇಜಿನ ಮೈದಾನದಲ್ಲಿ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಕೃತಿ ವಿರೋಧಿ ಧೋರಣೆ ಸಲ್ಲದು
ಪ್ರಾಕೃತಿಕ ವಿಕೋಪದಿಂದ ಆಗುತ್ತಿರುವ ತಲ್ಲಣಗಳನ್ನು ಗಮನಿಸುತ್ತಿದ್ದೇವೆ. ಇದಕ್ಕೆ ಅನೇಕ ಬಾರಿ ಜನರೂ ಕಾರಣಕರ್ತರು. ಪ್ರಕೃತಿ ವಿರೋಧಿ ನಡೆಯಿಂದ ಪ್ರಕೃತಿಯೇ ನಮ್ಮ ವಿರುದ್ಧ ತಿರುಗಿ ಬೀಳುವ ಸ್ಥಿತಿ ಸೃಷ್ಟಿಯಾಗಿದೆ. ಹಾಗಾಗಿ ಪ್ರಕೃತಿ ವಿರೋಧಿ ಧೋರಣೆ ಸಲ್ಲದು. ನದಿ, ಕೆರೆಗಳನ್ನು ಒತ್ತುವರಿ ಮಾಡಿದ ಪರಿಣಾಮ ಮಳೆ ನೀರು ಹರಿದು ಹೋಗದ ಸ್ಥಿತಿ ಇದೆ. ಇದನ್ನು ನಿಯಂತ್ರಿಸುವ ಆಡಳಿತ ಯಂತ್ರ ಎಚ್ಚರ ಮರೆತರೆ ಇಂತಹ ಅನಾಹುತಗಳು ಪದೇ-ಪದೇ ಮರುಕಳಿಸುತ್ತವೆ ಎಂದರು. ಧ್ವಜಾರೋಹಣ ನೆರವೇರಿಸಿ ಗೌರವವಂದನೆ ಸ್ವೀಕರಿಸಿ ಸಂದೇಶ ನೀಡಿದ ತಹಸೀಲ್ದಾರ್ ಕುಂಞಮ್ಮ, ಸಂಕುಚಿತ ಮನೋಭಾವ ಒಂದು ರಾಷ್ಟ್ರದ ಬೆಳವಣಿಗೆಗೆ ಮಾರಕ. ದೇಶ ಎಷ್ಟೇ ಅಭಿವೃದ್ದಿ ಕಂಡಿದ್ದರೂ ಶಾಂತಿ ಮತ್ತು ನೆಮ್ಮದಿ ಕಾಣಬೇಕಾದರೆ ದೇಶಕ್ಕೆ ಸರ್ವರಲ್ಲಿ ಸಮಾನತೆ, ಪ್ರೀತಿ, ಗೌರವ ಕಾಣುವ ಪ್ರಜೆಗಳ ನಿರ್ಮಾಣ ಆಗಬೇಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.