ಕುಲಶೇಖರ; ಪರ್ಯಾಯ ಹಳಿಯಲ್ಲಿ ರೈಲು ಸಂಚಾರ ಆರಂಭ
Team Udayavani, Sep 1, 2019, 5:32 AM IST
ಮಂಗಳೂರು: ಕುಲಶೇಖರದಲ್ಲಿ ರೈಲು ಹಳಿ ಮೇಲೆ ಮಣ್ಣು ಕುಸಿತವಾದ ಭಾಗದಲ್ಲಿ ಪರ್ಯಾಯವಾಗಿ ನಿರ್ಮಿಸಿರುವ 450 ಮೀ. ಉದ್ದದ ಹಳಿ ಪ್ರಯಾಣಕ್ಕೆ ಅರ್ಹವಾಗಿದೆ ಎಂದು ದಕ್ಷಿಣ ರೈಲ್ವೇ ಇಲಾಖೆಯ ಅಧಿಕಾರಿಗಳು ಶನಿವಾರ ಸಂಜೆ ಖಚಿತಪಡಿಸಿದ್ದು, ರೈಲು ಸೇವೆ ಆರಂಭಗೊಂಡಿದೆ.
ನಿಜಾಮುದ್ದೀನ್ (ಹೊಸದಿಲ್ಲಿ)- ಎರ್ನಾಕುಳಂ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್ ನಂ. 12618 ಪ್ರಯಾಣಿಕರ ರೈಲು ಶನಿವಾರ ಸಂಜೆ ಹೊಸ ಹಳಿ ಯಲ್ಲಿ ಸಂಚರಿಸಿತು. 8 ದಿನಗಳಿಂದ ಉಂಟಾಗಿದ್ದ ಸಂಚಾರ ತೊಡಕು ಇದೀಗ ನಿವಾರಣೆಯಾಗಿದೆ.
ಪ್ರಥಮ ಹಂತದಲ್ಲಿ ಮಂಗಳೂರು ಜಂಕ್ಷನ್‌ನಿಂದ ಪಣಂಬೂರು ವರೆಗೆ ಈ ಮಾರ್ಗದಲ್ಲಿ ಸರಕು ಬೋಗಿಗಳನ್ನು ಓಡಿಸಲಾಯಿತು. ಶನಿವಾರ ಬೆಳಗ್ಗೆ ಮುಂಬಯಿ- ಮಂಗಳೂರು ಮತ್ಸ್ಯಗಂಧ ಎಕ್ಸ್‌ಪ್ರೆಸ್ (ನಂ.12620) ಸುರತ್ಕಲ್ ವರೆಗೆ ಬಂದು ವಾಪಸಾಗಿತ್ತು. ಮಂಗಳೂರು ಜಂಕ್ಷನ್ – ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ (ನಂ.12134) ಪ್ರಯಾಣವೂ ಮಂಗಳೂರು ಜಂಕ್ಷನ್, ಸುರತ್ಕಲ್ ನಡುವೆ ರದ್ದುಗೊಂಡಿತ್ತು. ಈ ಮಧ್ಯೆ ಎರಡೂ ಭಾಗಗಳಿಂದ ಪ್ರಯಾಣಿಸುವ ಕುರ್ಲಾ- ತಿರುವನಂತಪುರ ಎಕ್ಸ್‌ಪ್ರೆಸ್‌ಗಳ ಸುಮಾರು 2,000ದಷ್ಟು ಪ್ರಯಾಣಿಕರ ಸಂಪರ್ಕಕ್ಕಾಗಿ 30 ಬಸ್‌ಗಳ ಸೇವೆಯನ್ನು ಕೊಂಕಣ ರೈಲ್ವೇ ವಿಭಾಗ ಮಾಡಿಕೊಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.