Bunts Hostel ವೃತ್ತ: ಫುಟ್‌ಪಾತ್ ಇಲ್ಲದೆ ಅಪಾಯ
Team Udayavani, Sep 30, 2024, 2:34 PM IST
ಬಂಟ್ಸ್‌ಹಾಸ್ಟೆಲ್: ನಗರದ ಬಂಟ್ಸ್‌ಹಾಸ್ಟೆಲ್ ವೃತ್ತದ ಬಳಿ ಫುಟ್‌ಪಾತ್ ಇಲ್ಲದೆ ಪಾದಚಾರಿಗಳು ವಾಹನಗಳ ನಡುವೆ ಅಪಾಯಕಾರಿಯಾಗಿ ಸಂಚರಿಸ ಬೇಕಾದ ಅನಿವಾರ್ಯತೆ ಉಂಟಾಗಿದೆ.
ಜ್ಯೋತಿ ಕಡೆಯಿಂದ ಕರಂಗಲ್ಪಾಡಿ ಕಡೆಗೆ ಬರುವಲ್ಲಿ ಸರ್ಕಲ್ ಸಮೀಪ (ಎಸ್ಸೆಲ್ ಟವರ್ ಅಕ್ಕಪಕ್ಕ) ಫುಟ್‌ಪಾತ್ ಇಲ್ಲ. ಮಾತ್ರವಲ್ಲ, ರಸ್ತೆಯ ಅಂಚಿನಲ್ಲಿ ನಡೆದಾಡುವುದು ಕೂಡ ಕಷ್ಟಕರವಾಗಿದೆ. ರಸ್ತೆಯ ಅಂಚು ಸಮತಟ್ಟಾಗಿಲ್ಲ. ಇರುವ ಸ್ವಲ್ಪ ಜಾಗದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತದೆ. ಹಾಗಾಗಿ ಇದು ತೀರಾ ಇಕ್ಕಟ್ಟಿನಿಂದ ಕೂಡಿದ ಸ್ಥಳವಾಗಿ ಮಾರ್ಪಟ್ಟಿದೆ. ಜ್ಯೋತಿ ಕಡೆಯಿಂದ ಪಿವಿಎಸ್ ಕಡೆಗೆ ಬರುವ ವಾಹನಗಳು ಇಲ್ಲಿ ತಿರುವು ಪಡೆದುಕೊಳ್ಳುವಾಗ ತೀರಾ ರಸ್ತೆಯ ಅಂಚಿನಲ್ಲಿಯೇ ಸಾಗುತ್ತವೆ. ಹಾಗಾಗಿ ಇಲ್ಲಿ ನಡೆದುಕೊಂಡು ಹೋಗುವವರಿಗೆ ವಾಹನ ಢಿಕ್ಕಿಯಾಗುವ ಅಪಾಯ ಎದುರಾಗುತ್ತಿದೆ. ಇದರ ಎದುರು ಭಾಗದಲ್ಲಿ ಕೂಡ ಸುರಕ್ಷಿತವಾಗಿ ನಡೆದಾಡಲು ಫುಟ್‌ಪಾತ್ ಇಲ್ಲ.
ಜನನಿಬಿಡ ಪ್ರದೇಶ
ಸದಾ ವಾಹನಗಳ ದಟ್ಟಣೆ ಇರುವ ಈ ಸ್ಥಳದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಪಕ್ಕದಲ್ಲೇ ಬಸ್‌ಗಳ ತಂಗುದಾಣ ಕೂಡ ಇವೆ. ಇಲ್ಲಿ ಫುಟ್‌ಪಾತ್ ಇಲ್ಲದಿರುವುದರಿಂದ ಹಿರಿಯ ನಾಗರಿಕರು, ಮಹಿಳೆಯರು, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚು. ಲಭ್ಯ ಜಾಗವನ್ನು ಬಳಸಿಕೊಂಡು ಫುಟ್‌ಪಾತ್ ನಿರ್ಮಿಸುವ ಅಗತ್ಯವಿದೆ. ಇದಕ್ಕೂ ಮೊದಲು ಇಲ್ಲಿನ ರಸ್ತೆಯ ಅಂಚುಗಳಲ್ಲಿ ಉಂಟಾಗಿರುವ ಹೊಂಡಗಳನ್ನು ಮುಚ್ಚಿ ಸಮತಟ್ಟುಗೊಳಿಸಬೇಕಾದ ಆವಶ್ಯಕತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.