ಕುತ್ತಾರು ಬಳಿ ಬಸ್ಸು ಅಪಘಾತ: ಕೇರಳದ ವ್ಯಕ್ತಿ ಸಾವು
Team Udayavani, Sep 1, 2017, 8:00 AM IST
ಉಳ್ಳಾಲ: ತೊಕ್ಕೋಟು ಕೊಣಾಜೆ ರಸ್ತೆಯ ಕುತ್ತಾರು ದೇವ ಸ್ಥಾನದ ಸಮೀಪ ಗುರುವಾರ ಸಂಜೆ ಬಸ್ಸು ಅಪಘಾತದಲ್ಲಿ ಕೇರಳ ಮೂಲದ ಕೇರಳದ ಪಯ್ಯ ನ್ನೂರಿನ ವಳಸ್‌ರಾಜ್ (42) ಮೃತಪಟ್ಟಿದ್ದಾರೆ.
ತಣ್ಣೀರುಬಾವಿಯಲ್ಲಿ ಸೆಲೂನ್ ಅಂಗಡಿಯನ್ನು ನಡೆಸುತ್ತಿರುವ ಅವರು ಅಲ್ಲಿಂದ ದೇರಳಕಟ್ಟೆಯ ಬಗಂಬಿಲದಲ್ಲಿರುವ ಸಹೋದರಿಯ ಮನೆಗೆ ಬರುವ ಸಂದರ್ಭ ಘಟನೆ ಸಂಭವಿಸಿದೆ. ಸೆಲೂನ್‌ನಿಂದ ವಾಪಸಾಗುವ ವೇಳೆ ಸಹೋದರಿ ಪದ್ಮಾವತಿ ಅವರ ಪುತ್ರಿಗೆ ಕರೆ ಮಾಡಿ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದರು. ಆದರೆ ದಾರಿಮಧ್ಯೆ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಗೊಂದಲ
ಸ್ಥಳೀಯರ ಪ್ರಕಾರ ಮೂರು ರೀತಿ ಯಲ್ಲಿ ಘಟನೆ ನಡೆದಿದೆ. ಇದರಿಂದ ಪೊಲೀಸರಿಗೂ ಅಪಘಾತ ನಡೆದಿರುವ ಕುರಿತು ಗೊಂದಲ ಉಂಟಾಗಿದೆ. ಬಿ.ಸಿ. ರೋಡಿನಿಂದ ಮಂಗಳೂರು ಮಾರ್ಗವಾಗಿ ತೆರಳುವ ಸರ್ವಿಸ್ ಬಸ್ಸಿನ ಹಿಂಬದಿ ಚಕ್ರದಡಿ ಸಿಲುಕಿ ವಳಸ್‌ರಾಜ್ ತಲೆಯ ಭಾಗ ಜಜ್ಜಿಹೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ದೇರಳಕಟ್ಟೆ ಕಡೆಗೆ ಬರುತ್ತಿದ್ದ ವಳಸ್‌ರಾಜ್ ಹಿಂಬದಿ ಚಕ್ರದಡಿ ಸಿಲುಕಿರುವ ಕಾರಣವೇ ಯಾರಿಗೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಹಲವರು ಬೈಕಿನಲ್ಲಿ ಬರುತ್ತಿದ್ದವರು ಜಾರಿಬಿದ್ದು ಬಸ್ಸಿನಡಿ ಬಿದ್ದಿದ್ದಾರೆ ಅನ್ನುತ್ತಿದ್ದರೆ, ಸ್ಥಳದಲ್ಲಿ ಯಾವುದೇ ಬೈಕ್ ಆಗಲಿ, ಅವರ ಪರಿಚಯಸ್ಥರಾಗಲಿ ಇರಲಿಲ್ಲ. ಇನ್ನು ಹಲವರು ರಸ್ತೆ ದಾಟುವ ಸಂದರ್ಭ ಬಸ್ಸಿನಡಿ ಬಿದ್ದು ಸಾವನ್ನಪ್ಪಿದ್ದಾರೆ ಅನ್ನುತ್ತಿದ್ದಾರೆ. ಆದರೆ ಬಗಂಬಿಲ ಬರುತ್ತಿದ್ದವರು ಕುತ್ತಾರು ಸಮೀಪ ಇಳಿಯಲು ಸಾಧ್ಯವೇ ಇಲ್ಲ ಅನ್ನುವ ಸಂಶಯವ್ಯಕ್ತವಾಗಿದೆ. ಪೊಲೀಸರಿಗೂ ಅಪಘಾತ ಸಂಭವಿಸಿರುವ ಕುರಿತು ಸ್ಪಷ್ಟ ಮಾಹಿತಿ ಇಲ್ಲ.
ಬಸ್ಸು ಚಾಲಕನೂ ಸ್ಥಳದಿಂದ ಪರಾರಿಯಾದ ಹಿನ್ನೆಲೆಯಲ್ಲಿ ಪೊಲೀಸರಿಗೂ ಮಾಹಿತಿ ಸಂಗ್ರಹಿಸಲು ಕಷ್ಟವಾಗಿದೆ.
ಅರ್ಧ ಗಂಟೆ ಕಾಲ ರಸ್ತೆಯಲ್ಲೇ ಉಳಿದ ಮೃತದೇಹ : ಅಪಘಾತ ನಡೆದು ಅರ್ಧ ಗಂಟೆಯ ಕಾಲ ಮƒತದೇಹ ರಸ್ತೆಯಲ್ಲೇ ಬಿದ್ದಿತ್ತು. 108 ಆಂಬ್ಯುಲೆನ್ಸ್ ಸ್ಥಳಕ್ಕೆ ಬಂದರೂ, ಮೃತದೇಹವನ್ನು ಕೊಂಡೊಯ್ಯದೆ ನೇರವಾಗಿ ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಳಿಕ ಸ್ಥಳೀಯ ಯೆನೆಪೋಯ ಆಸ್ಪತ್ರೆಯ ಆಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ರಸ್ತೆಯಿಂದ ಕೊಂಡೊಯ್ಯಲಾಯಿತು. ಘಟನೆ ಯಿಂದ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಮೃತರು ವಿವಾಹಿತರಾಗಿದ್ದು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.