ತಾಂತ್ರಿಕ ವೈಫಲ್ಯ : ರಸ್ತೆ ಬಿಟ್ಟು ಕೆಳಗಿಳಿದ ಬಸ್ಸು
Team Udayavani, Feb 15, 2019, 5:05 AM IST
ಹಳೆಯಂಗಡಿ: ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ಬಸ್ಸೊಂದು ತಾಂತ್ರಿಕ ವೈಫಲ್ಯದಿಂದ ರಸ್ತೆಬಿಟ್ಟು ಗದ್ದೆಗೆ ಇಳಿದ ಘಟನೆ ಪಡುಪಣಂಬೂರು ಬಳಿ ನಡೆದಿದೆ. ಬೆಳಗ್ಗಿನ ಜಾವ ಆಗಿರುವ ಕಾರಣದಿಂದ ಪ್ರಯಾಣಿಕರಲ್ಲಿ ಹೆಚ್ಚಿನವರು ಕರ್ತವ್ಯಕ್ಕೆ ತೆರಳುವ ಮತ್ತು ವಿದ್ಯಾರ್ಥಿಗಳೇ ಆಗಿದ್ದರು. ತಾಂತ್ರಿಕ ವೈಫಲ್ಯಕ್ಕೊಳಗಾದ ಬಸ್ ಡಿವೈಡರ್ ಹಾರಿ ವಿರುದ್ಧ ರಸ್ತೆಯ ಬದಿಯಲ್ಲಿರುವ ಗದ್ದೆಗೆ ಇಳಿದು ನಿಂತಿತು.
ಅದೃಷ್ಟವಶಾತ್ ಬಸ್ಸು ಡಿವೈಡರ್ ಜಂಪ್ ಮಾಡುವ ಸಂದರ್ಭದಲ್ಲಿ ಎದರುಗಡೆಯಿಂದ ಯಾವುದೇ ವಾಹನಗಳು ಬರುತ್ತಿರಲಿಲ್ಲ. ಮತ್ತು ಬಸ್ಸು ಉರುಳದೇ ನೇರವಾಗಿಯೇ ಗದ್ದೆಗೆ ಜಾರಿದ ಕಾರಣ ಹೆಚ್ಚಿನ ಅಪಾಯಗಳು ಉಂಟಾಗಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.