ಮೊಡಂಕಾಪು: ಬೇಕಾಗಿದೆ ಪ್ರಯಾಣಿಕರ ತಂಗುದಾಣ
Team Udayavani, Jun 30, 2018, 2:00 AM IST
ಬಂಟ್ವಾಳ: ಮೊಡಂಕಾಪು ಸುಸಜ್ಜಿತ ಪ್ರಯಾಣಿಕರ ತಂಗುದಾಣ ಸೌಕರ್ಯ ಒದಗಿ ಬರಬೇಕಾಗಿದೆ. ಸುಮಾರು 300 ವರ್ಷಗಳ ಹಿಂದೆಯೇ ಈ ಊರಿನಲ್ಲಿ ಶೈಕ್ಷಣಿಕ ಕೇಂದ್ರ ಆರಂಭಗೊಂಡಿತ್ತು ಎಂಬುದು ಇತಿಹಾಸದ ದಾಖಲೆಯಿಂದ ತಿಳಿದು ಬರುತ್ತದೆ. ಪಲ್ಲಮಜಲು, ಪರಾರಿ, ಮಿತ್ತಪರಾರಿ, ರಾಜೀವಪಳಿಕೆ, ಕಾಮಾಜೆ, ಕುಪ್ಪಿಲ, ದುಗನಕೋಡಿ, ಬೆದ್ರಗುಡ್ಡೆ, ಗೋಲಿನೆಲ ಊರುಗಳನ್ನು ಸುತ್ತುವರಿದ ಪ್ರದೇಶ ಮೊಡಂಕಾಪು. ಸಾಕಷ್ಟು ಜನಸಂಖ್ಯೆ ಹೊಂದಿರುವ ಈ ಊರಿನ ಜನರಿಗೆ ಮೂಲ ಸೌಕರ್ಯಗಳಲ್ಲಿ ಒಂದಾದ ಪ್ರಯಾಣಿಕರ ತಂಗುದಾಣವನ್ನು ಪುರಸಭೆ ಇನ್ನೂ ಒದಗಿಸಿಲ್ಲ. ಬಂಟ್ವಾಳ ಲಯನ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಬಂಟ್ವಾಳ ಅನಂತ ಮಲ್ಯ ಚಾರಿಟೆಬಲ್ ಟ್ರಸ್ಟ್ ಕೊಡುಗೆಯಾಗಿ ನೀಡಿದ ಚಿಕ್ಕ ಪ್ರಯಾಣಿಕರ ತಂಗುದಾಣ ಪೊಳಲಿ-ಬೆಂಜನಪದವು ಕಡೆಗೆ ಹೋಗುವ ಜನರಿಗೆ ಆಶ್ರಯವಾಗಿದೆ.
ಶೈಕ್ಷಣಿಕ ಕೇಂದ್ರ
ದೀಪಿಕಾ ಪ್ರೌಢಶಾಲೆ, ಇನ್ಫೆಂಟ್ ಜೀಸಸ್ ಇಂಗ್ಲಿಷ್ ಮಾಧ್ಯಮ ಶಾಲೆ, ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆ, ಕಾರ್ಮೆಲ್ ಪದವಿಪೂರ್ವ ಕಾಲೇಜು, ಕಾರ್ಮೆಲ್ ಕಾನ್ವೆಂಟ್ ಪದವಿ ಕಾಲೇಜು ಹೀಗೆ ಹಲವು ಶಾಲಾ-ಕಾಲೇಜಿರುವ ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಸ್ ಗಾಗಿ ಕಾಯಲು ಸೂಕ್ತವಾದ ತಂಗುದಾಣವೇ ಇಲ್ಲ. ಬಿಸಿಲಲ್ಲಿ ಒಣಗಿ ಮಳೆಗಾಲದಲ್ಲಿ ಒದ್ದೆಯಾಗಿ ಬಸ್ಸನ್ನು ಕಾಯಬೇಕಾದ ಸ್ಥಿತಿ ಇದೆ. ಇಷ್ಟೊಂದು ಜನರು ಓಡಾಡುವ ಮೊಡಂಕಾಪಿನಲ್ಲಿ ಪುರಸಭೆಯು ಪ್ರಯಾಣಿಕರ ತಂಗುದಾಣವನ್ನು ನಿರ್ಮಾಣ ಮಾಡಿದರೆ ಜನರಿಗೆ ತುಂಬಾ ಅನುಕೂಲವಾಗುವುದು.
ರಸ್ತೆಯೇ ಬಸ್ ನಿಲ್ದಾಣ
ಮೊಂಡಂಕಾಪಿನಿಂದ ಬಿ.ಸಿ. ರೋಡ್‌ಗೆ ಅಥವಾ ಬೇರೆ ಕಡೆ ಹೋಗಬೇಕಾದರೆ ಜನರಿಗೆ ರಾಜೀವಪಳಿಕೆ ಪರಿಸರದವರು ಮೊಡಂಕಾಪು ಹಾಸ್ಟೆಲ್ ಬಳಿ, ದುಗನಕೋಡಿ ಪರಿಸರದವರು ಪಕ್ಕದಲ್ಲಿರುವ ಹೊಟೇಲ್ ಬಳಿ, ಕಾರ್ಮೆಲ್ ಕಾಲೇಜು ಪದವಿ ವಿದ್ಯಾರ್ಥಿಗಳು ಹಾಗೂ ಚರ್ಚ್‌ಗೆ ಬರುವವರು ಪಕ್ಕದಲ್ಲಿರುವ ಎಂ.ಜೆ.ಎಂ. ಕಾಂಪ್ಲೆಕ್ಸ್‌ನ ಎದುರು, ಪಲ್ಲಮಜಲು ಪರಿಸರದವರು ಅಯ್ಯಪ್ಪ ಮಂದಿರದ ಬಳಿ, ಕಾರ್ಮೆಲ್ ಕಾನ್ವೆಂಟಿನ ಎದುರು ಅಲ್ಲಿನ ಮಕ್ಕಳು, ಕುಪ್ಪಿಲ -ಪರಾರಿ-ಮಿತ್ತಪರಾರಿ ಪರಿಸರದವರು ರೈಲ್ವೇ ಬ್ರಿಡ್ಜ್ ಬಳಿ ನಿಂತು ಬಸ್ ಹಿಡಿಯುತ್ತಾರೆ.
ಬಸ್ ಬೇ ಅವಶ್ಯ
ಸಾರ್ವಜನಿಕರ ಅಪೇಕ್ಷೆಯನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ನಿರ್ದಿಷ್ಟ ಸ್ಥಳದಲ್ಲಿ ಬಸ್ ನಿಲುಗಡೆ ಸೆಂಟರ್ ಈ ಪ್ರದೇಶದಲ್ಲಿ ಬೇಕಾಗಿದೆ. ಶಾಲಾ ವಿದ್ಯಾರ್ಥಿಗಳು ಆಯಾಯ ಕೇಂದ್ರ ಸನಿಹ ನಿಲ್ಲುವುದರಿಂದ ವಾಹನ ಚಾಲಕರೂ ಅಲ್ಲಿಂದ ಬಸ್ಸಿಗೆ ಹತ್ತಿಸಿ, ಇಳಿಸಿಕೊಂಡು ಹೋಗುವುದು ನಡೆದಿದೆ. ಮಳೆ ಮತ್ತು ಬಿಸಿಲಿನ ಹೊತ್ತಿಗೆ ಇಂತಹ ಪ್ರಯಾಣಿಕರ ನಿಲುಗಡೆಗೆ ಬಸ್ ಬೇ ಸೌಕರ್ಯ ಅವಶ್ಯವಾಗಿದ್ದು, ಆಡಳಿತವು ಪ್ರಸ್ತಾವವನ್ನು ಗಮನಿಸುವುದು.
– ಪಿ. ರಾಮಕೃಷ್ಣ ಆಳ್ವ, ಅಧ್ಯಕ್ಷರು, ಬಂಟ್ವಾಳ ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.