ಬಸ್ ನಿಲ್ದಾಣಗಳಿಗೆ ಬೇಕು ಕಾಯಿನ್ ವಾಟರ್ ವ್ಯವಸ್ಥೆ
Team Udayavani, May 20, 2018, 3:38 PM IST
ಈಗಾಗಲೇ ಕೆಲವು ಬೃಹತ್ ನಗರಗಳ ಬಸ್ ನಿಲ್ದಾಣಗಳಲ್ಲಿ ಕಾಯಿನ್ ವಾಟರ್ ಯಂತ್ರವನ್ನು ಅಳವಡಿಸಲಾಗಿದೆ. ಎಟಿಎಂನಂತಿರುವ ಈ ಯಂತ್ರದೊಳಗೆ ಒಂದು ರೂ. ನಾಣ್ಯವನ್ನು ಹಾಕಿ ಒಂದು ಲೋಟ ನೀರು ಪಡೆಯುವಂತ ವ್ಯವಸ್ಥೆ ಇದು. ಬಹುಶಃ ಬಸ್ ನಿಲ್ದಾಣಗಳಲ್ಲಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಇರಿಸಲಾಗಿದೆ. ಆದರೆ ಅದರ ಪರಿಶುದ್ಧತೆಯ ಬಗ್ಗೆ ಗೊತ್ತಿಲ್ಲ. ಆದರೆ ಕಾಯಿನ್ ವಾಟರ್ ಮೆಶಿನ್ ಬೃಹತ್ ಯಂತ್ರವಾಗಿರುವುದರಿಂದ ವಿವಿಧ ಘಟಕಗಳಲ್ಲಿ ನೀರು ಶುದ್ಧೀಕರಣಗೊಂಡೇ ಕುಡಿಯುವ ನೀರಾಗಿ ಪರಿವರ್ತಿತಗೊಳ್ಳುತ್ತದೆ. ಇದರಿಂದಾಗಿ ಇದರ ಪರಿಶುದ್ಧತೆಯ ಬಗ್ಗೆ ಯಾವುದೇ ಸಂದೇಹ ಪಡುವ ಅವಶ್ಯಕತೆಯೂ ಬರುವುದಿಲ್ಲ.
ಇತರ ನಗರಗಳಂತೆ ಮಂಗಳೂರಿನ ಕೆಎಸ್‌ಆರ್ ಟಿರ್ಟಿಸಿ ಬಸ್ ನಿಲ್ದಾಣದಲ್ಲಿಯೂ ಕಾಯಿನ್ ವಾಟರ್ ಯಂತ್ರ ಅಳವಡಿಸುವ ಸಂಬಂಧ ಈ ಹಿಂದೆ ಒಮ್ಮೆ ಚಿಂತನೆ ನಡೆದಿತ್ತಾದರೂ, ಬಳಿಕ ಅದು ಕಾರ್ಯರೂಪಕ್ಕೆ ಬಂದಿಲ್ಲ. ಮಂಗಳೂರಿನ ಬಸ್ ನಿಲ್ದಾಣದಲ್ಲಿ ಇದನ್ನು ಅಳವಡಿಸಿದರೆ ಪ್ರಯಾಣಿಕರ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾಗಬಹುದು. ಕೆಲವು ಬಸ್ ನಿಲ್ದಾಣಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದಿದ್ದರೆ, ಅಥವಾ ಇದ್ದರೂ ಅದರಲ್ಲಿ ನೀರಿಲ್ಲದಿದ್ದರೆ ಅಂಗಡಿಗಳಿಂದ ನೀರು ಕೊಳ್ಳಲು ಅನಗತ್ಯ ಖರ್ಚು ಮಾಡುವುದನ್ನೂ ಇದರಿಂದ ತಪ್ಪಿಸಬಹುದು. ಒಂದು ಲೋಟ ನೀರಿಗಾಗಿ ಹತ್ತಾರು ರೂಪಾಯಿ ವ್ಯಯಿಸುವುದು ತಪ್ಪುತ್ತದೆ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
Siddapura: ಟ್ರಾಯ್‌ನಿಂದ ಕರೆ ಮಾಡುವುದಾಗಿ 10.39 ಲಕ್ಷ ರೂ. ವಂಚನೆ
Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.