ಪಂಪ್‌ವೆಲ್‌ನಲ್ಲಿ ಬಸ್ ಟರ್ಮಿನಲ್
Team Udayavani, Nov 29, 2017, 10:09 AM IST
ಲಾಲ್‌ಬಾಗ್: ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಪಂಪ್‌ವೆಲ್ ಬಳಿ 7.23 ಎಕರೆ ಪ್ರದೇಶದಲ್ಲಿ ಬಸ್ ಟರ್ಮಿನಲ್ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಮಂಜೂರಾತಿಗಾಗಿ ಸ್ಮಾರ್ಟ್ ಸಿಟಿಯ ಎಸ್‌ಪಿವಿಗೆ (ಸ್ಪೆಷಲ್ ಪರ್ಪಸ್ ವೆಹಿಕಲ್) ಕಳುಹಿಸಲು ಮಂಗಳವಾರ ನಡೆದ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಕಾರ್ಯಸೂಚಿ ಸಂಬಂಧಿಸಿ ಮೇಯರ್ ನೀಡಿದ ಪೂರ್ವಭಾವಿ ಮಂಜೂರಾತಿಯನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು.
ಬುಧವಾರ ಎಸ್‌ವಿಪಿ ಸಭೆ
ಉದ್ದೇಶಿತ ಬಸ್ ನಿಲ್ದಾಣವನ್ನು ಪಿಪಿಪಿ ಮಾದರಿಯ ವಿನ್ಯಾಸ – ನಿರ್ಮಾಣ – ಹಣಕಾಸು – ನಿರ್ವಹಣೆ ಮತ್ತು ವರ್ಗಾವಣೆ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಬುಧವಾರ ಬೆಂಗಳೂರಿನಲ್ಲಿ ಎಸ್‌ವಿಪಿ ಮಂಡಳಿ ಸಭೆ ನಡೆಯಲಿದ್ದು, ಬಸ್ ನಿಲ್ದಾಣ ಸಂಬಂಧಿಸಿದ ಪ್ರಸ್ತಾವನೆಯನ್ನು ಆ ಸಭೆಯ ಮುಂದಿಡಲಾಗುವುದು. ಉದ್ದೇಶಿತ ಬಸ್ ನಿಲ್ದಾಣದ ಪ್ರಥಮ ಹಾಗೂ ದ್ವಿತೀಯ ಮಹಡಿಗಳಲ್ಲಿ ಖಾಸಗಿ ಹಾಗೂ ಸರಕಾರಿ ಬಸ್‌ಗಳ ನಿಲುಗಡೆ ಮತ್ತು ನಿರ್ವಹಣೆ, ಅನಂತರದ ಮಹಡಿಗಳಲ್ಲಿ ವಾಣಿಜ್ಯ ಮಳಿಗೆಗಳು, ಥಿಯೇಟರ್, ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ಮುಂತಾದ ವ್ಯವಸ್ಥೆಗಳು ಲಭ್ಯವಾಗಲಿವೆ ಎಂದು ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್ ವಿವರಿಸಿದರು.
ಈ ಬಸ್ ಟರ್ಮಿನಲ್‌ಗೆ ಪಂಪ್ ವೆಲ್ ಜಂಕ್ಷನ್‌ನಿಂದ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್‌ಪಾಸ್ ನಿರ್ಮಾಣ ಸಹಿತ ಸುಸಜ್ಜಿತ ಬಸ್ಸು ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸುವ ಪ್ರಸ್ತಾಪವಿದೆ. 33 ವರ್ಷಗಳಲ್ಲಿ ಸಂಪೂರ್ಣ ವಾಣಿಜ್ಯ ಸಂಕೀರ್ಣವನ್ನು ಪಾಲಿಕೆಗೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ಯೋಜನೆ ಹೊಂದಿರುವುದನ್ನು ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಎಸ್‌ಪಿವಿ ಅನುಮೋದನೆ ಪಡೆದ ಬಳಿಕ ಪ್ರಕ್ರಿಯೆ ಶೀಘ್ರಗೊಳ್ಳುವುದು ಕಷ್ಟವೇನಲ್ಲ. ನಗರಾಭಿವೃದ್ಧಿ ಇಲಾಖೆ, ಸಚಿವ ಸಂಪುಟದ ಒಪ್ಪಿಗೆ ಪಡೆಯುವುದೂ ಶೀಘ್ರವಾಗುತ್ತದೆ ಎಂದು ಮುಖ್ಯ ಸಚೇತಕ ಶಶಿಧರ ಹೆಗ್ಡೆ ತಿಳಿಸಿದರು.
49.50 ಕೋ.ರೂ. ವೆಚ್ಚದಲ್ಲಿ ಕಂಕನಾಡಿ ಬಸ್ ನಿಲ್ದಾಣ
ಕಂಕನಾಡಿಯಲ್ಲಿ 49.50 ಕೋ. ರೂ. ವೆಚ್ಚದಲ್ಲಿ ಮಾರುಕಟ್ಟೆ/ ವಾಣಿಜ್ಯ ಸಂಕೀರ್ಣ ನಿರ್ಮಾಣ ಸಲುವಾಗಿ ಮೇಯರ್ ನೀಡಿದ ಪೂರ್ವಭಾವಿ ಮಂಜೂರಾತಿಯನ್ನು ಈ ವೇಳೆ ಅಂಗೀಕರಿಸಲಾಯಿತು.
ಕೆಯುಡಿಐಫ್ ಸಿ ವತಿಯಿಂದ 22.50 ಕೋ.ರೂ. ಹಾಗೂ ರಾಷ್ಟ್ರೀಕೃತ ಬ್ಯಾಂಕಿನಿಂದ 17 ಕೋ.ರೂ. ಸಾಲಪಡೆಯಲಾಗುತ್ತಿದೆ. ಹೆಚ್ಚುವರಿ 10 ಕೋ. ರೂ. ಬೇಕಾಗಿದ್ದು, ನಗರೋತ್ಥಾನದಿಂದ 3 ಕೋ. ರೂ. ಮೀಸಲಿಡಲಾಗಿದ್ದು, 7 ಕೋ. ರೂ.ಗಳನ್ನು ಪಾಲಿಕೆಯ ಉದ್ಯಮ ನಿಧಿಯಿಂದ ಭರಿಸಿ ಯೋಜನೆ ಅನುಷ್ಠಾನಕ್ಕೆ ಎಸ್‌ಪಿವಿಗೆ ಕಳುಹಿಸಲು ನಿರ್ಧರಿಸಲಾಯಿತು.
ಅಕ್ಟೋಬರ್ ಬಿಲ್ ಪಾವತಿ ಬಾಕಿ
ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಕಂಪೆನಿಯು ಕಸ ವಿಲೇವಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಬಿಲ್ ಪಾವತಿ ಬಾಕಿ ಇರಿಸಿರುವುದರಿಂದ ಕಸ ವಿಲೇವಾರಿ ನಿಲ್ಲಿಸಲಾಗಿದೆ ಎಂದು ಕಂಪೆನಿ ಹೇಳುತ್ತಿದ್ದು, ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ವಿಪಕ್ಷ ಸದಸ್ಯ ಪ್ರೇಮಾನಂದ ಶೆಟ್ಟಿ ಆರೋಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಈಗಾಗಲೇ ಸೆಪ್ಟಂಬರ್ ತಿಂಗಳವರೆಗಿನ ಬಿಲ್ ಪಾವತಿಸಲಾಗಿದ್ದು, ಅಕ್ಟೋಬರ್‌ನ ಮೊತ್ತ ಬಾಕಿ ಇದೆ. ಕೆಲವು ಸಂಧಾನ ಪ್ರಕ್ರಿಯೆಗಳು ನಡೆಯುತ್ತಿದ್ದು, ಅದು ಸರಿಯಾದ ಬಳಿಕವೇ ಬಾಕಿ ಮೊತ್ತ ಪಾವತಿಸಲಾಗುವುದು ಎಂದರು.
ಕಪ್ಪು ಪಟ್ಟಿಗೆ ಸೇರಿಸಿ
ಸದಸ್ಯ ದಯಾನಂದ ಶೆಟ್ಟಿ ಮಾತನಾಡಿ, ಕಸ ವಿಲೇವಾರಿಯಲ್ಲಿ ಎಡವಿದ ಆ್ಯಂಟನಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಸಂಸ್ಥೆ ನಾಲ್ಕು ವರ್ಷಗಳಿಂದ ಕಸ ಸಂಗ್ರಹಿಸುತ್ತಿದ್ದು, ಅದರ ನಿರ್ವಹಣ ಜವಾಬ್ದಾರಿ ತೀರಾ ಕಳಪೆಯಾಗಿದೆ. ಸಂಗ್ರ ಹಿಸಿದ ಕಸ ಆಗಾಗ ರಸ್ತೆ ಮಧ್ಯೆಯೇ ಬೀಳುತ್ತಿರುವುದು ಕಂಡು ಬರುತ್ತಿದೆ ಎಂದರು. ಸ್ವಚ್ಛ ಭಾರತ್ ಮಿಷನ್ ಅಭಿಯಾನದ ಅಂಗವಾಗಿ ದೇಶದ 4041 ನಗರ/ ಪಟ್ಟಣಗಳಲ್ಲಿ ಸ್ವಚ್ಛ ಸರ್ವೇಕ್ಷಣ್ ಕೈಗೊ ಳ್ಳಲು ನಿರ್ಧರಿಸಲಾಗಿದೆ. ಪಾಲಿಕೆಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ವತಿಯಿಂದ ಸಮೀಕ್ಷಾ ತಂಡ ಜ.4ರಿಂದ ಫೆ. 4ರ ನಡುವೆ ಭೇಟಿ ನೀಡಲಿದೆ. ಸ್ಥಳ ಪರಿಶೀಲನೆ ನಡೆಸಿ, ಮನಪಾ ಅಧಿಕಾರಿಗಳು, ಸಾರ್ವಜನಿಕರು, ಇತರ ಸಂಸ್ಥೆ ಜತೆ ಈ ವೇಳೆ ಚರ್ಚೆ ನಡೆಸಲಿದೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಕೈಪಿಡಿಯನ್ನು ಬಿಡುಗಡೆಗೊಳಿಸಿ, ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಸ್ವಚ್ಛತಾ ರಾಯಭಾರಿ ನೇಮಕಕ್ಕೆ ಸೂಚಿಸಿದೆ ಎಂದರು. ಉಪ ಮೇಯರ್ ರಜನೀಶ್ ಕಾಪಿಕಾಡ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ನಾಗವೇಣಿ, ಅಬ್ದುಲ್ ರವೂಫ್, ಸಬಿತಾ ಮಿಸ್ಕಿತ್, ಪ್ರತಿಭಾ ಕುಳಾಯಿ ಉಪಸ್ಥಿತರಿದ್ದರು.
ನವೀನ್ ಸ್ವಚ್ಛತಾ ರಾಯಭಾರಿ
ಸ್ವಚ್ಛ ಭಾರತ್ ಮಿಶನ್ ಅಭಿಯಾನದಡಿ ಸ್ವತ್ಛ ಸರ್ವೇಕ್ಷಣ್ ಕುರಿತು ಮನಪಾ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸ್ವಚ್ಛತಾ ರಾಯಭಾರಿಯಾಗಿ ನಟ ನವೀನ್ ಡಿ. ಪಡೀಲ್ ಅವರನ್ನು ನೇಮಿಸಲಾಗಿದೆ.
ಡಿ. 6ರಂದು ಕಸ ವಿಲೇವಾರಿ ಸಭೆ
ಕಸ ಸಂಗ್ರಹ ವಿಲೇವಾರಿಯಿಂದ ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆ ಮುಂತಾದವುಗಳ ಕುರಿತು ಸಮಗ್ರವಾಗಿ ಚರ್ಚಿಸುವ ಸಲುವಾಗಿ ಡಿ. 6ರಂದು ಸಂಜೆ 5 ಗಂಟೆಗೆ ಸಭೆ ಕರೆಯಲಾಗುವುದು.
– ಕವಿತಾ ಸನಿಲ್, ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.