Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್‌


Team Udayavani, Jan 4, 2025, 6:00 AM IST

UTK

ಮಂಗಳೂರು: ರಾಜ್ಯ ಸರಕಾರದ ಬಸ್‌ ಪ್ರಯಾಣ ದರ ಏರಿಕೆಯನ್ನು ಪರೋಕ್ಷವಾಗಿ ಬೆಂಬಲಿಸಿರುವ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್‌, ಸರಕಾರ ಯಾವಾಗಲೂ ಜನರ ಹಿತದೃಷ್ಟಿ ಯನ್ನು ಇಟ್ಟುಕೊಂಡು ಬೇರೆ ಬೇರೆ ರೀತಿಯ ಕ್ರಮಗಳನ್ನು ಕೈಗೊ ಳ್ಳುತ್ತದೆ. ಸುಮ್ಮನೆ ವಿರೋಧಿಸುವ ಬದಲು ಇದರ ಉದ್ದೇಶಗಳ ಬಗ್ಗೆ ಚರ್ಚಿಸಲಿ ಎಂದು ವಿಪಕ್ಷಗಳಿಗೆ ಕಿವಿಮಾತು ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಹೊಸ ಗೋಶಾಲೆ ನಿರ್ಮಾಣ ಮಾಡುವುದಿಲ್ಲ ಎಂಬ ಸರಕಾರದ ತೀರ್ಮಾನಕ್ಕೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿ ಯಿಸಿ, ನಾನು ರಾಜಕೀಯ ಮಾತನಾಡುವುದಿಲ್ಲ. ಹಿಂದಿನ ಸರ ಕಾರದ ಸಂದರ್ಭ ಈ ಯೋಜನೆ ಘೋಷಣೆಯಾಗಿದೆ. ಎಷ್ಟು ಗೋಶಾಲೆ ಮಾಡಿದ್ದಾರೆ, ಜಿಲ್ಲೆಯಲ್ಲಿ ಎಲ್ಲಿ ಗೋಶಾಲೆ ಆಗಿದೆ ಎಂದು ಪ್ರಶ್ನಿಸಿದರು.

ಗೋಹತ್ಯೆ ನಿಷೇಧ ಇಂದಿರಾ ಗಾಂಧಿ ಕಾಲದ್ದು
ಇದೇ ಸಂದರ್ಭದಲ್ಲಿ ಶಾಸಕ ಹರೀಶ್‌ ಪೂಂಜ ಅವರ ಗೋವುಗಳ ಬದುಕುವ ಹಕ್ಕಿನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಗೋಹತ್ಯೆ ನಿಷೇಧ ಕಾನೂನು ದೇಶದಲ್ಲಿ ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗಲೇ ಜಾರಿಗೆ ಬಂದಿದೆ. ಇಡೀ ದೇಶಕ್ಕೆ ಸಂಬಂಧಪಟ್ಟ ಕಾನೂನು ಅದಾಗಿತ್ತು. ಚುನಾವಣೆ ಉದ್ದೇಶಕ್ಕಾಗಿ ಒಂದೊಂದು ರಾಜ್ಯಗಳಿಗೆ ಒಂದೊಂದು ಕಾನೂನು ಅದಲ್ಲ ಎಂದರು.

ಪೂಂಜ ಅವರ ಆನೆಗಳ ಕುರಿತ ಸದನದಲ್ಲಿನ ಹೇಳಿಕೆ ಬೇಸರ ತಂದಿತ್ತು. ಅದಕ್ಕಾಗಿ “ಆನೆಗಳಿಗೂ ಬದುಕುವ ಹಕ್ಕು ಇದೆ’ ಎಂದಿದ್ದೆ. ಈಗ ಅದಕ್ಕೆ ಪ್ರತಿಯಾಗಿ ಅವರು ಗೋವುಗಳ ಬಗ್ಗೆ ಪ್ರಶ್ನಿಸಿದ್ದಾರೆ. ಪೂಂಜರಂತಹವರಿಗೆ ಗೋವಿಗೂ ಕೂಡ ಬದು ಕುವ ಹಕ್ಕಿದೆ ಎನ್ನುವುದು ಇಲ್ಲಿಯವರೆಗೆ ತಿಳಿದಿಲ್ಲ ಎಂಬುದು ಖೇದಕರ ಸಂಗತಿ. ಹಾಗಾಗಿ ಯಾರಿಗೆಲ್ಲ ಬದುಕುವ ಹಕ್ಕಿದೆ ಎನ್ನುವುದನ್ನು ಅವರಿಗೆ ಪ್ರತ್ಯೇಕವಾಗಿ ಬರೆದು ಕಳುಹಿಸುವೆ ಎಂದು ಕುಟುಕಿದ್ದಾರೆ.

ಜ.17 : ನೂತನ ಡಿಸಿ ಕಚೇರಿ ಉದ್ಘಾಟನೆ
ಪಡೀಲ್‌ನಲ್ಲಿ ದ.ಕ. ಜಿಲ್ಲಾಧಿಕಾರಿಗಳ ನೂತನ ಕಚೇರಿ ಸಂಕೀರ್ಣದ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು, ಜ.17 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ಸಂದರ್ಭ ಉದ್ಘಾಟಿಸಲು ಉದ್ದೇಶಿಸಲಾಗಿದೆ ಎಂದು ಯು.ಟಿ.ಖಾದರ್‌ ಹೇಳಿದರು.

ಕಚೇರಿ ಸಂಕೀರ್ಣಕ್ಕೆ ಶುಕ್ರವಾರ ಭೇಟಿ ನೀಡಿ ಅಂತಿಮ ಹಂತದ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಉದ್ಘಾಟನೆಗೆ ಮೊದಲು ಬಾಕಿ ಇರುವ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ಜತೆ ಚರ್ಚಿಸಲಾಗಿದೆ. ಈ ಕಚೇರಿ ರಾಷ್ಟ್ರದಲ್ಲೇ ಮಾದರಿಯಾಗಲಿದ್ದು, ರಾಜ್ಯದಲ್ಲೇ ಅತ್ಯಂ ತ ವಿಶಾಲವಾದ ಡಿಸಿ ಕಚೇರಿ ಆಗಲಿದೆ ಎಂದರು.

ಗ್ರಾಮೀಣಾಭಿವೃದ್ಧಿ ಹೊರತುಪಡಿಸಿ ಉಳಿದ ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ತರಲಾಗುತ್ತಿದೆ. ಜನಸಾಮಾನ್ಯರಿಗೆ ತಮ್ಮ ಕೆಲಸಗಳಿಗೆ ಬೇರೆ ಬೇರೆ ಕಡೆ ತೆರಳಬೇಕಾದ ಸಮಸ್ಯೆ ತಪ್ಪುತ್ತದೆ. ಅಧಿಕಾರಿಗಳಿಗೂ ವಿವಿಧ ಸಭೆಗಳಲ್ಲಿ ಒಂದೇ ಕಡೆ ಇದ್ದು, ಭಾಗವಹಿಸಲು ಸಾಧ್ಯ. ಸಮಯದ ಉಳಿತಾಯ ಆಗಲಿದೆ. ಉದ್ಘಾಟನೆ ಯಾದ ತತ್‌ಕ್ಷಣ ಎಲ್ಲ ಕಚೇರಿಗಳ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿನ್‌, ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌ ಕುಮಾರ್‌, ಸಹಾಯಕ ಆಯುಕ್ತ ಹರ್ಷವರ್ಧನ್‌ ಹಾಗೂ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

supreme-Court

Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್‌ ರದ್ದು: ಸುಪ್ರೀಂ ಕೋರ್ಟ್‌

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

HDK–Siddu

Alleged: ಇದು 60 ಪರ್ಸೆಂಟ್‌ ಲಂಚದ ಕಾಂಗ್ರೆಸ್‌ ಸರಕಾರ: ಎಚ್‌.ಡಿ.ಕುಮಾರಸ್ವಾಮಿ ಆರೋಪ

Kalpeni Island: ಲಕ್ಷದ್ವೀಪದಲ್ಲಿ ಯುರೋಪ್‌ನ ಯುದ್ಧ ನೌಕೆ ಅವಶೇಷ ಪತ್ತೆ!

Kalpeni Island: ಲಕ್ಷದ್ವೀಪದಲ್ಲಿ ಯುರೋಪ್‌ನ ಯುದ್ಧ ನೌಕೆ ಅವಶೇಷ ಪತ್ತೆ!

Aizawl: ಮಿಜೋರಾಂನಲ್ಲಿ ದೇಶದ ಮೊದಲ ಬೀಟಾ ತಲೆಮಾರಿನ ಮಗು ಜನನ

Aizawl: ಮಿಜೋರಾಂನಲ್ಲಿ ದೇಶದ ಮೊದಲ ಬೀಟಾ ತಲೆಮಾರಿನ ಮಗು ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Bajpe: ಗುರುಪುರ ಪೇಟೆಯ ಹಲವೆಡೆ ಕಳವು

police crime

Crime-follow up;ಇ.ಡಿ. ಅಧಿಕಾರಿಗಳಂತೆ ನಟಿಸಿ 30 ಲ.ರೂ. ದರೋಡೆ: 4 ತಂಡಗಳಿಂದ ತನಿಖೆ

1-yash

Mangaluru: ದಿಢೀರ್‌ ಆಗಿ ಕಾಣಿಸಿಕೊಂಡ ನಟ ಯಶ್‌

1-aaaa

ಬಡ ದಂಪತಿಗೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

1

Udupi: ಇನ್‌ಸ್ಟಾಗ್ರಾಂ ಲಿಂಕ್‌ ಬಳಸಿ 12.46 ಲಕ್ಷ ರೂ. ಕಳೆದುಕೊಂಡ ಯುವತಿ

4

Bajpe: ಗುರುಪುರ ಪೇಟೆಯ ಹಲವೆಡೆ ಕಳವು

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

supreme-Court

Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್‌ ರದ್ದು: ಸುಪ್ರೀಂ ಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.