ದೇವರ ಮೇಲಿನ ನಂಬಿಕೆಯಿಂದ ಬದುಕು ಸುಂದರ
Team Udayavani, May 4, 2017, 11:44 AM IST
ವಿಟ್ಲ: ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದು ಸಂಸ್ಕಾರ. ಸಂಸ್ಕಾರದ ಕೊರತೆಯಿರು ವವರು ಬೆಳಕಿನಿಂದ ಕತ್ತಲಿನೆಡೆಗೆ ಸಾಗುತ್ತಾರೆ.
ಸಂಸ್ಕಾರ, ಭಕ್ತಿ, ನಂಬಿಕೆ, ವಿಶ್ವಾಸಗಳು ಮೂಢನಂಬಿಕೆಗಳಲ್ಲ. ಅವು ಮೂಲನಂಬಿಕೆಗಳು. ದೇವರನ್ನು ನಂಬಿದರೆ ನಾಳೆಯ ಬದುಕು ಸುಂದರವಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಮಂಗಳವಾರ ವಿಟ್ಲ ಸಮೀಪದ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶ್ರೀ ಉಮಾಮಹೇಶ್ವರ ದೇವರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ, ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದರು.
ಭಗವಂತ ನಿರಾಕಾರ. ಭಗವಂತನನ್ನು ತೋರಿಸುವ ಸಾಧನ ದೇವಸ್ಥಾನ. ದೇವಸ್ಥಾನಗಳು ಅಜೀರ್ಣಾವಸ್ಥೆಗೆ ಹೋದಾಗ ಜೀರ್ಣೋದ್ಧಾರಗೊಳಿಸುವುದು ಶ್ರೇಷ್ಠ ಕಾರ್ಯ ಎಂದರು.
ಕನ್ಯಾನ ಬಾಳೆಕೋಡಿ ಶ್ರೀ ಕಾಶಿಕಾಳಭೈರ ವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚಿಸಿ,ಉತ್ತಮ ಮನಸ್ಸುಗಳು ಸಂಘಟಿಸಲ್ಪಟ್ಟಾಗ ಆಧ್ಯಾತ್ಮಿಕ ಕ್ಷೇತ್ರಗಳು ಬೆಳವಣಿಗೆ ಕಾಣುತ್ತವೆ ಎಂದರು.
ಸಂಸ್ಕಾರ ಭಾರತಿ ಜಿಲ್ಲಾ ಸಂಚಾಲಕ ಕಶೆಕೋಡಿ ಸೂರ್ಯನಾರಾಯಣ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೊಂಕೋಡಿ ಪದ್ಮನಾಭ ಅಧ್ಯಕ್ಷತೆ ವಹಿಸಿ ದ್ದರು. ಬೆಂಗಳೂರಿನ ನಿವೃತ್ತ ನ್ಯಾಯವಾದಿ ಪದ್ಮನಾಭ ಕೆದಿಲಾಯ, ವಿಟ್ಲದ ಉದ್ಯಮಿ ರಾಧಾಕೃಷ್ಣ ನಾಯಕ್, ವಿಟ್ಲ ಶ್ರೀಕೃಷ್ಣ ಧನ್ವಂತರಿ ಮಂದಿರದ ಜ್ಯೋತಿಷಿ ಕೇಶವ ಭಟ್ ಕೆ., ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕ.ಶಿ. ವಿಶ್ವನಾಥ, ಬೊಳಂತಿಮೊಗರು ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಅನಿಲ್ ವಡಗೇರಿ, ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಾಯ ಸಂಜೀವನಾಯ್ಕ ಎಚ್. ಮಾತನಾಡಿದರು.
ರೈ ಎಸ್ಟೇಟ್ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ. ವಿಟ್ಲ, ಶ್ರೀ ಉಮಾ ಮಹೇಶ್ವರ ಸೇವಾ ವಿಶ್ವಸ್ತ ಮಂಡಳಿ ಅಧ್ಯಕ್ಷ ಕೆ.ಎಸ್. ಸಂಕಪ್ಪ ಗೌಡ ಕೈಂತಿಲ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೃಷ್ಣಪ್ರಕಾಶ್ ಒಕ್ಕೆತ್ತೂರು, ಪ್ರಧಾನ ಸಂಚಾಲಕ ವೀರಪ್ಪ ಗೌಡ ರಾಯರಬೆಟ್ಟು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಸದಾಶಿವ ಆಚಾರ್ಯ ಕೈಂತಿಲ, ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಒಕ್ಕೆತ್ತೂರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿ ವಿಶ್ವನಾಥ ನಾಯೊ¤àಟು ಅನಿಸಿಕೆ ವ್ಯಕ್ತ ಪಡಿಸಿದರು.
ಸಮ್ಮಾನ: ಗರ್ಭಗುಡಿ ತಾಮ್ರದ ಹೊದಿಕೆಗೆ 5 ಲಕ್ಷ ರೂ ದೇಣಿಗೆ ನೀಡಿದ ಮೇನಾಲಗುತ್ತು ಜಲಧರ ಶೆಟ್ಟಿ ಕೆಮ್ಮಲೆ ಪರವಾಗಿ ಅವರ ಪುತ್ರ ಕಿಶನ್ ಶೆಟ್ಟಿ ಅವರಿಗೆ, ಒಂದು ಲಕ್ಷ ರೂ.ಗಿಂತ ಮೇಲ್ಪಟ್ಟು ದೇಣಿಗೆ ನೀಡಿದ ಪದ್ಮನಾಭ ಕೆದಿಲಾಯ ಬೆಂಗಳೂರು, ಸದಾಶಿವ ಆಚಾರ್ಯಕೈಂತಿಲ, ತಾರಾನಾಥ ಶೆಟ್ಟಿ ದುಬಾೖ ಅವರ ಪರವಾಗಿ ಒಕ್ಕೆತ್ತೂರು ಸೀತಾರಾಮ ಶೆಟ್ಟಿ ಹಾಗೂ 50,000 ರೂ.ಗಿಂತ ಮೇಲ್ಪಟ್ಟು ದೇಣಿಗೆ ನೀಡಿದ ಪುತ್ತೂರು ಎಸ್‌ಆರ್‌ಕೆ ಮಾಲಕ ಕೇಶವ ಗೌಡ, ಜಿನ್ನಪ್ಪ ಗೌಡ ಕೈಂತಿಲ, ಬಟ್ಯಗೌಡ ಮತ್ತು ಮಕ್ಕಳು ಕೋಚೋಡಿ, ನಾಂಞ ಗೌಡ ಅವರ ಸ್ಮರಣಾರ್ಥ ಮಕ್ಕಳು, ರೋಹಿತ್ ಪೂಜಾರಿ ನಡುವಡ್ಕ ಹಾಗೂ ದೇವಾಲಯದ ಮರದ ಕೆಲಸ ಮಾಡಿದ ಪದ್ಮನಾಭ ಗೇರುಕಟ್ಟೆ, ವಸಂತ ಕರಿಂಕ, ತಾಮ್ರದ ಹೊದಿಕೆಯ ಕೆಲಸ ಮಾಡಿದ ಸುಂದರ ದಾರಂದಕುಕ್ಕು, ಮೇಸ್ತ್ರಿ ಕೆಲಸ ಮಾಡಿದ ದರ್ಣಪ್ಪ ಗೌಡ ಮಾಮೇಶ್ವರ ಹಾಗೂ ಬೊಳಂತಿಮೊಗರು ಸ.ಪ್ರೌ. ಶಾಲೆ ಮುಖ್ಯೋಪಾಧ್ಯಾಯ ಅನಿಲ್ ವಡಗೇರಿ, ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯ ಸಂಜೀವ ನಾಯ್ಕ ಎಚ್, ವಿಟ್ಲದ ಉದ್ಯಮಿ ಎಂ. ರಾಧಾಕೃಷ್ಣ ನಾಯಕ್, ವಿಟ್ಲ ಶ್ರೀಕೃಷ್ಣ ಧನ್ವಂತರಿ ಮಂದಿರದ ಜ್ಯೋತಿಷಿ ಕೇಶವ ಭಟ್ ಕೆ. ಅವರನ್ನು ಸಮ್ಮಾನಿಸಲಾಯಿತು.
ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ ಮಾಮೇಶ್ವರ ಸ್ವಾಗತಿಸಿದರು. ವೆಂಕಟೇಶ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ರಾಜಶೇಖರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
MUST WATCH
ಹೊಸ ಸೇರ್ಪಡೆ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.