![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Sep 3, 2023, 11:54 PM IST
ಪಣಂಬೂರು: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು-ಉಡುಪಿ ರಸ್ತೆಯ ಬೈಕಂಪಾಡಿ ಬಳಿ ವೃಷಭ ಪೆಟ್ರೋಲಿಯಂನವರ ನೂತನ ಸಹಸಂಸ್ಥೆ ನಯರಾ ಫ್ಯೂಯೆಲ್ ಸ್ಟೇಶನನ್ನು ರವಿವಾರ ಸಂಸದ ನಳಿನ್ ಕುಮಾರ್ ಉದ್ಘಾಟಿಸಿದರು.
ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟ, ಗ್ರಾಹಕ ಸ್ನೇಹಿ ಸೇವೆ ನೀಡಿದಾಗ ಯಶಸ್ಸು ಸಾಧ್ಯ. ವಿವೇಕ್ ಶೆಟ್ಟಿ ಅವರು ಸಾಧನಶೀಲ ಉದ್ಯಮಪತಿಯಾಗಿ ಸಮಾಜಕ್ಕೂ ತನ್ನಿಂದಾದ ಕೊಡುಗೆ ನೀಡುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಹಲವರಿಗೆ ಉದ್ಯೋಗ ನೀಡಿದ್ದಾರೆ. ಅವರ ಹೊಸ ಉದ್ಯಮಕ್ಕೆ ಶುಭವಾಗಲಿ ಎಂದು ಹಾರೈಸಿದರು.
ನಯರಾ ಎನರ್ಜಿ ಲಿ. ಸಿಆರ್‌ಒ ನಾರಾಯಣ್ ಭಾತ್ರಾ ಮಾತನಾಡಿ, ಕರ್ನಾಟಕದಲ್ಲಿ 508 ಪ್ಯುಯೆಲ್ ಸ್ಟೇಶನ್‌ಗಳು ಕಾರ್ಯಾಚರಿಸುತ್ತಿದ್ದು, ಭವಿಷ್ಯದಲ್ಲಿ ಸಾವಿರಕ್ಕೆ ಹೆಚ್ಚಿಸುವ ಗುರಿಯಿದೆ. ಎಲ್ಲ ಕೇಂದ್ರದಲ್ಲೂ ಶೌಚಾಲಯ, ಶುದ್ಧ ಕುಡಿಯುವ ನೀರು ಸಹಿತ ಮೂಲಸೌಕರ್ಯವಿರುತ್ತದೆ. ನಯರಾ ಒಂದು ಕುಟುಂಬದಂತೆ ಸಂಸ್ಥೆಯ ಏಳಿಗೆಗೆ ಕರ್ತವ್ಯ ನಿರ್ವಹಿಸುತ್ತಾ ಬರಲಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಅವರು ಶುಭ ಹಾರೈಸಿ ಇನ್ನಷ್ಟು ಇಂತಹ ಕೇಂದ್ರ ವಿವೇಕ್ ಶೆಟ್ಟಿ ಮುಂದಾಳತ್ವದಲ್ಲಿ ಆರಂಭವಾಗಿ ಯಶಸ್ವಿಯಾಗಲಿ ಎಂದರು.
ಸಂಸ್ಥೆಯ ಅಧಿಕಾರಿ ಅನಿರುದ್ಧ ನೌರಾಲ ಮಾತನಾಡಿ, ರತ್ನಗಿರಿಯಲ್ಲಿ ಮೊದಲ ಸ್ಟೇಶನ್ ಆರಂಭವಾದ ಬಳಿಕ ಇಂದು 6,500 ಸ್ಟೇಷನ್‌ಗಳನ್ನು ನಯರಾ ಹೊಂದಿದೆ. ಭವಿಷ್ಯದಲ್ಲಿ ದೇಶದಾದ್ಯಂತ 10 ಸಾವಿರ ಫ್ಯೂಯೆಲ್ ಸ್ಟೇಶನ್ ಹೊಂದುವ ಗುರಿಯಿದೆ ಎಂದರು.
ವೃಷಭ ಪೆಟ್ರೋಲಿಯಂ ಮಾಲಕ ವಿವೇಕ್ ಶೆಟ್ಟಿ ನಗ್ರಿಗುತ್ತು ಪ್ರಸ್ತಾವನೆಗೈದು, ಉದ್ಯಮ ಸ್ಥಾಪಿಸಲು ಸರಕಾರದ ಅನುಮತಿ ಸರಳಗೊಳ್ಳಬೇಕಾದ ಅಗತ್ಯವಿದೆ. ಉತ್ತಮ ಸೇವೆಯನ್ನು ನಮ್ಮ ಗ್ರಾಹಕರಿಗೆ ನೀಡಲು ಬದ್ಧರಾಗಿದ್ದೇವೆ ಎಂದರು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಆಗಮಿಸಿ ಶುಭ ಕೋರಿದರು. ಸಂಧ್ಯಾ ವಿ. ಶೆಟ್ಟಿ, ನಯರಾ ಎನರ್ಜಿಯ ಅಧಿಕಾರಿಗಳು, ವಿವಿಧ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು. ನಂದಿತ ಸುನಿಲ್ ಕಾರ್ಯಕ್ರಮ ನಿರೂಪಿಸಿದರು.
You seem to have an Ad Blocker on.
To continue reading, please turn it off or whitelist Udayavani.