ತೋಡಿಗೆ ಬಿದ್ದ ಬಾಲಕನ ರಕ್ಷಿಸಿದ ಆಮ್ನಿ ಚಾಲಕ
Team Udayavani, Jun 28, 2018, 4:00 AM IST
ಉಪ್ಪಿನಂಗಡಿ: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ 10ರ ಹರೆಯದ ಬಾಲಕನೋರ್ವ ಅಯತಪ್ಪಿ ತೋಡಿಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಸಂದರ್ಭ ಸಮಯ ಪ್ರಜ್ಞೆ ಮೆರೆದ ಆಮ್ನಿ ಚಾಲಕನೋರ್ವ ತೋಡಿಗೆ ಧುಮುಕಿ ಬಾಲಕನನ್ನು ರಕ್ಷಿಸಿದ ಘಟನೆ ಬುಧವಾರ ಸಂಜೆ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಕುಪ್ಪೆಟ್ಟಿ ಭೋವುಮಜಲು ಎಂಬಲ್ಲಿ ಸಂಭವಿಸಿದೆ.
ಕುಪ್ಪೆಟ್ಟಿ ಭೋವುಮಜಲು ನಿವಾಸಿ ಸಲೀಂ ಅವರ ಮಗ ಉಪ್ಪಿನಂಗಡಿ ಜ್ಞಾನಭಾರತಿ ವಿದ್ಯಾ ಸಂಸ್ಥೆಯಲ್ಲಿ 5ನೇ ತರಗತಿಯಲ್ಲಿ ಕಲಿಯುತ್ತಿರುವ ಅಫ್ನಾನ್ (10) ರಕ್ಷಣೆಗೆ ಒಳಗಾದ ಬಾಲಕನಾಗಿದ್ದಾನೆ. ಈತ ಎಂದಿನಂತೆ ಶಾಲೆ ಬಿಟ್ಟು ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವಾಹನದಿಂದ ಇಳಿಯುತ್ತಿದ್ದಂತೆ ರಸ್ತೆಯಂಚಿಗೆ ಬಂದ ಇನ್ನೊಂದು ವಾಹನದಿಂದ ಢಿಕ್ಕಿಯಾಗುವುದನ್ನು ತಪ್ಪಿಸುವ ಯತ್ನದ ವೇಳೆ ಬಾಲಕ ರಸ್ತೆ ಬದಿಯ ತೋಡಿಗೆ ಬಿದ್ದಿದ್ದಾನೆ. ಆ ಸಮಯದಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ತೋಡಿನಲ್ಲಿ ನೀರಿನ ಹರಿವು ತೀವ್ರವಾಗಿದ್ದು ಬಾಲಕ ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಈ ದೃಶ್ಯ ಕಂಡ ಆಮ್ನಿ ಚಾಲಕ ಕುಪ್ಪೆಟ್ಟಿ ನಿವಾಸಿ ಅರ್ಫಾನ್ ತತ್ ಕ್ಷಣ ತೋಡಿಗೆ ಧುಮುಕಿ ಬಾಲಕನನ್ನು ಹಿಡಿದು ಮೇಲಕ್ಕೆತ್ತಿ ಕುಡಿದ ನೀರನ್ನು ವಾಂತಿ ಮಾಡಿಸುವ ಮೂಲಕ ಬಾಲಕನ್ನು ರಕ್ಷಿಸಿದ್ದಾರೆ. ಆಮ್ನಿ ಚಾಲಕನ ಸಮಯ ಪ್ರಜ್ಞೆ ಬಾಲಕನ ಜೀವ ರಕ್ಷಣೆಗೆ ಕಾರಣವಾಗಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.