ಕುಂದುಕೊರತೆ ಸಭೆಯಲ್ಲಿ ಬಾಲ್ಯವಿವಾಹ ತಡೆಗೆ ಕರೆ
Team Udayavani, Oct 29, 2017, 3:39 PM IST
ಸುಳ್ಯ: ತಾಲೂಕಿನಲ್ಲಿ ಇತ್ತೀಚೆಗೆ ಪರಿಶಿಷ್ಟ ಜಾತಿ ಮತ್ತು ವರ್ಗದ ಸಮುದಾಯದಲ್ಲಿ ಬಾಲ್ಯವಿವಾಹ ಪ್ರಕರಣಗಳ ಬಗ್ಗೆ ಹೆಚ್ಚು ದೂರು ಬರುತ್ತಿವೆ. ಸ್ಥಳೀಯ ಮುಖಂಡರು ಬಾಲ್ಯವಿವಾಹ ಪ್ರಕರಣಗಳು ನಡೆಯದಂತೆ ಸರಕಾರದೊಂದಿಗೆ ಕೈಜೋಡಿಸುವಂತೆ ಸುಳ್ಯ ತಾಲೂಕು ಸಮಾಜ ಕಲ್ಯಾಣ ಇಲಾ ಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಪೇರಾಲು ಮನವಿ ಮಾಡಿದರು.
ಶನಿವಾರ ಸುಳ್ಯ ತಾ.ಪಂ. ಸಭಾಂಗಣದಲ್ಲಿ ಜರಗಿದ ಪ.ಜಾತಿ ಮತ್ತು ಪ.ಪಂಗಡಗಳ ಕುಂದು-ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ವರ್ಗ ಸಮುದಾಯದ ವಿಧವೆಯರ ಪುನರ್ ವಿವಾಹ ಮತ್ತು ಒಳ ಪಂಗಡಗಳ ನಡುವಿನ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಧನ ನೀಡಲು ಅರ್ಜಿ ಸಲ್ಲಿಕೆಗೆ ಸರಕಾರ ಸುತ್ತೋಲೆ ಕಳುಹಿಸಿದೆ ಎಂದು ತಿಳಿಸಿದರು. ಈ ಸಂದರ್ಭ ಪ್ರೋತ್ಸಾಹ ಧನ ಮೊತ್ತದ ಕುರಿತು ಪ್ರಶ್ನಿಸಿದಾಗ ಸರಕಾರ ಸುತ್ತೋಲೆ ಮಾತ್ರ ಕಳುಹಿಸಿದೆ. ಮೊತ್ತದ ಕುರಿತು ಮಾಹಿತಿ ನೀಡಿಲ್ಲ ಎಂದು ಪೇರಾಲು ತಿಳಿಸಿದರು.
ಕುಂದುಕೊರತೆ ಸಭೆಯನ್ನು ಎರಡು ತಿಂಗಳಿಗೊಮ್ಮೆ ನಡೆಸಬೇಕು. 3 ತಿಂಗಳಿಗೊಮ್ಮೆ ಮಾಡುವುದಾದಲ್ಲಿ
ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಆಯೋಜಿಸುವಂತೆ ಶಂಕರ್ ಪೆರಾಜೆ, ಬಾಬು ಜಾಲ್ಸೂರು ಆಗ್ರಹಿಸಿದರು.
ಸರ್ವೆ ನಂಬರ್ ಸಮಸ್ಯೆ
ಆರ್‌ಟಿಸಿಯಲ್ಲಿನ ಸರ್ವೆ ನಂಬರ್ ಬದಲಾವಣೆಯ ಸಮಸ್ಯೆ ಸರಿಪಡಿಸುವಂತೆ ಮತ್ತು ಸುಬ್ರಹ್ಮಣ್ಯದ ಭಾಗೀರಥಿ ಅವರು ಕಳೆದ 15 ವರ್ಷಗಳಿಂದ ಕುಲ್ಕುಂದದಲ್ಲಿ ನೆಲೆಸಿದ್ದರು. ಪಡಿತರ ಚೀಟಿ ಮೊದಲಾದ ಅಗತ್ಯ ದಾಖಲೆಗಳಿಲ್ಲ ಎಂದು ತಹಶೀಲ್ದಾರ್ ಅವರಿಗೆ ಪ್ರಕಾಶ್ ಬಂಗ್ಲೆಗುಡ್ಡೆ ತಿಳಿಸಿದರು.
ಸುಳ್ಯ ಕೇರ್ಪಳದಲ್ಲಿರುವ ಶ್ಮಶಾನದಲ್ಲಿ ಶವಸಂಸ್ಕಾರಕ್ಕೆ ಅಗತ್ಯ ಮೂಲ ಸೌಕರ್ಯಗಳಿಲ್ಲ ಎಂದು ಮುಖಂಡ
ದಾಸಪ್ಪ ಅವರು ದೂರಿದರು. ಇದಕ್ಕುತ್ತರಿಸಿದ ತಹಶೀಲ್ದಾರ್ ನ.ಪಂ. ಮುಖ್ಯಾಧಿಕಾರಿಗಳಿಗೆ ಮನವಿ ನೀಡಲು
ಸಲಹೆಯಿತ್ತರು.
ಉಪಯೋಗವಿಲ್ಲ
ಇತ್ತಿಚೆಗೆ ನಡೆದ ಸುಳ್ಯ ಜನಸಂಪರ್ಕ ಸಭೆಯಲ್ಲಿ ನೀಡಲಾದ ಅನಿಲ ಸಂಪರ್ಕಕ್ಕೆ ಸಂಬಂಧಿಸಿ ರೆಗ್ಯುಲೇಟರ್, ಗ್ಯಾಸ್ ಸಿಲಿಂಡರ್ ಮೊದಲಾದವನ್ನು ನೀಡಿಲ್ಲ. ಒಂದಿದ್ದರೆ ಮತ್ತೂಂದಿಲ್ಲ. ಅನಿಲ ಸಂಪರ್ಕ ನೀಡಿದರೂ ಕಾಟಾಚಾರಕ್ಕೆ ಎಂಬಂತಾಗಿದೆ ಎಂದು ಶೀನಪ್ಪ ಬಯಂಬು ಪ್ರಸ್ತಾಪಿಸಿದರು. ಈ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿ
ಪ್ರತಿಕ್ರಿಯಿಸಿ ಮಾಹಿತಿ ನೀಡಿದರು.
ತಾಲೂಕಿನ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆನಂದ ಬೆಳ್ಳಾರೆ ಹೇಳಿದಾಗ,
ಅಧಿಕಾರಿ ಚಂದ್ರಶೇಖರ ಪೇರಾಲು ಪ್ರಸ್ತಾವನೆ ಕಳುಹಿಸಲಾಗಿದೆ. ಸಭೆಯ ಪಾಲನ ವರದಿಯನ್ನೇ ಪ್ರಸ್ತಾವನೆಯಾಗಿ ಸ್ವೀಕರಿಸಿ ಪರಿಗಣಿಸಲು ನ.ಪಂ. ಮುಖ್ಯಾಧಿಕಾರಿಗೆ ಸೂಚಿಸಿದರು.
ವಿವಿಧ ಇಲಾಖೆ, ಅಭಿವೃದ್ಧಿ ಕಾಮಗಾರಿ, ಮೂಲ ಸೌಕರ್ಯ ಕೊರತೆ, ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು. ತಾಲೂಕು ಪಂಚಾಯತ್ ಪ್ರಭಾರ ಇಒ ಭವಾನಿಶಂಕರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜನಸಂಪರ್ಕ ಸಭೆ ಬಗ್ಗೆ ಆಕ್ರೋಶ
ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲು ಕೌಂಟರ್ ವ್ಯವಸ್ಥೆ ಮಾಡಿಲ್ಲ. ನೇರ ಸಭಾವೇದಿಕೆಗೆ ತೆರಳಿ ಅರ್ಜಿ, ಮನವಿ ನೀಡಿದಾಗ ಪಕ್ಷದ ಮುಖಂಡರು ಅವರು ಬಿಜೆಪಿಯವರು ನಮ್ಮವರಲ್ಲ ಎಂದು ಸ್ವೀಕರಿಸಲು ಹಿಂದೇಟು ಹಾಕುತ್ತಾರೆ. ಅದೇನು ಕಾಂಗ್ರೆಸ್ ಪಕ್ಷದ ಸಭೆಯೇ ? ಹಾಗಿದ್ದರೆ ಅವರು ಸಭೆಯನ್ನು
ಅವರಷ್ಟಕ್ಕೆ ಮಾಡಿಕೊಳ್ಳಲಿ. ತಾಲೂಕು ಆಡಳಿತ ಸಭೆಯ ರೂಪರೇಖೆ ನಡೆಸಿಲ್ಲವೇ ಎಂದು ಅಚ್ಯುತ ಗುತ್ತಿಗಾರು ಪ್ರಶ್ನಿಸಿದರು. ಉತ್ತರಿಸಿದ ತಹಶೀಲ್ದಾರ್ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ತಾಲೂಕು ಆಡಳಿತವೇ ವ್ಯವಸ್ಥೆ ಕೈಗೊಂಡಿತ್ತು. ಅರ್ಜಿ ನೀಡಲು ಸಾಧ್ಯವಾಗದಿದ್ದಾಗ ಸಭೆಯಲ್ಲಿ ಆಗಲೇ ತನ್ನ ಗಮನಕ್ಕೆ ತರಬೇಕಾಗಿತ್ತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ
ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್ ಪ್ರತಿಭಟನೆ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Train; ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆಗೆ ಅಸಮ್ಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.