ಅಹಂಕಾರಿ ಬೆಳವಣಿಗೆ ಹೊಂದಲಾರ: ಡಾ| ರವಿ
Team Udayavani, Feb 17, 2018, 1:45 PM IST
ಪುತ್ತೂರು: ತಾನು ಎಲ್ಲವನ್ನೂ ತಿಳಿದುಕೊಂಡಿದ್ದೇನೆ ಎಂದು ಅಹಂಕಾರ ಪಡುವವನು ಯಾವುದೇ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲಾರ. ನಿರಂತರ ಕಲಿಕೆಯ ಹುಮ್ಮಸ್ಸು, ಮನಸ್ಸು ಹೊಂದಿರುವವ ಮಾತ್ರ ಸಾರ್ವತ್ರಿಕ ಗೌರವ ಪಡೆಯುವ ಸಾಧನೆ ಮಾಡಲು ಸಾಧ್ಯ ಎಂದು ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್. ರವಿ ಅವರು ಹೇಳಿದರು.
ಸಂತ ಫಿಲೋಮಿನಾ ಪ್ರೌಢಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ದ.ಕ. ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ಮತ್ತು ಶೇ. 100 ಎಸೆಸೆಲ್ಸಿ ಫಲಿತಾಂಶ ದಾಖಲಿಸಿದ ಶಾಲೆಗಳಿಗೆ ಅಭಿನಂದನೆ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ನಾಯಕತ್ವದ ಕೊರತೆ
ನಮ್ಮ ದೇಶದಲ್ಲಿ ನಾಯಕರಿಗೆ ಕೊರತೆ ಇಲ್ಲ. ಆದರೆ ಪರಿಣಾಮಕಾರಿ ನಾಯಕತ್ವದ ಕೊರತೆ ಇದೆ. ನಾಯಕತ್ವದ ಗುಣಪರಿಣಾಮಕಾರಿಯಾಗಿ ಬೆಳೆಯುವ ಆವಶ್ಯಕತೆ ಇದೆ. ದೇಶದಲ್ಲಿ ಕ್ರಾಂತಿ ನಡೆಯುತ್ತದೆ ಎಂಬ ನಂಬಿಕೆಯಿಲ್ಲ. ಇದು ಬದಲಾವಣೆಯ ಮೂಲಕ ಪ್ರಗತಿ ಕಂಡ ದೇಶ. ಇಲ್ಲಿ ಕ್ರಾಂತಿ ಯಾವತ್ತೂ ನಡೆದಿಲ್ಲ. ಕ್ರಾಂತಿ ನಡೆಯುವುದಿದ್ದರೆ ಅದು ಶಿಕ್ಷಣ ಕ್ಷೇತ್ರದಿಂದ ಮಾತ್ರ ಸಾಧ್ಯ. ಅತಿರೇಕಗಳಿಂದ ಜರ್ಝರಿತಗೊಂಡಿರುವ ಈ ದೇಶದಲ್ಲಿ ಶಿಕ್ಷಕ ಕೂಡ ಸದಾ ಕಲಿಯುವ ಮನಸ್ಸು ಹೊಂದುವ ಮೂಲಕ ಏನಾದರೂ ಬದಲಾವಣೆ ತರಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ರಾಂತ ಪ್ರಾಂಶುಪಾಲ ಪ್ರೊ| ಮಾಧವ ಭಟ್ ಮಾತನಾಡಿ, ಬುದ್ಧಿವಂತ ವಿದ್ಯಾರ್ಥಿಗಿಂತಲೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗೆ ಶಿಕ್ಷಕನ ಆವಶ್ಯಕತೆ ಇದೆ. ವಿಷಯವನ್ನು ಅರ್ಥ ಮಾಡಿಕೊಳ್ಳಲು ಹೋರಾಟ ಮಾಡುವ ಮಕ್ಕಳ ಜತೆ ಶಿಕ್ಷಕರು ನಿಲ್ಲಬೇಕು. ಸೋತಾಗಲೂ ಬದುಕು ಕಟ್ಟಿಕೊಳ್ಳುವುದನ್ನು, ಸೋಲಿನ ನಡುವೆಯೂ ಆತ್ಮವಿಶ್ವಾಸ ಕುಸಿಯದಂತೆ ನೋಡಿಕೊಳ್ಳುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.
ಸಮಾಜದ ನೋವು ಕಡಿಮೆ ಮಾಡುವ, ಸಂಪತ್ತಿನ ಸಮಾನ ಹಂಚಿಕೆ ಮಾಡುವ ಕೆಲಸವನ್ನು ನಿಜಕ್ಕೂ ಶಿಕ್ಷಣ ಮಾಡಬೇಕಿತ್ತು. ಅಂಕಗಳು, ವ್ಯಕ್ತಿತ್ವದ ಗೌರವಕ್ಕಿಂತಲೂ ವ್ಯಕ್ತಿ ಮುಖ್ಯ ಎಂಬುದನ್ನು ನೋಡಿಕೊಂಡು ನಮ್ಮ ಶಿಕ್ಷಣ ಸಾಗಬೇಕು ಎಂದು ಅಭಿಪ್ರಾಯಪಟ್ಟರು.
ಗೌರವಾರ್ಪಣೆ
ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ಜಿಲ್ಲೆಯ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳನ್ನು ರಾಜ್ಯ ಶಿಕ್ಷಕ ಕಲ್ಯಾಣನಿಧಿ ಬೆಂಗಳೂರು ಮತ್ತು ಶಿಕ್ಷಣ ಇಲಾಖೆ ವತಿಯಿಂದ ಗೌರವಿಸಲಾಯಿತು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ, ಮೂಡುಬಿದ್ರೆ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ, ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗೇ ಗೌಡ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್, ಮಂಗಳೂರು ಉತ್ತರ ಮತ್ತು ದಕ್ಷಿಣದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುಳಾ ಮತ್ತು ಲೋಕೇಶ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಮಂಗಳೂರು ಡಯಟ್ ಪ್ರಾಂಶೂಪಾಲರಾದ ಸಿಪ್ರಿಯಾನ್ ಮೊಂತೇರೊ, ಸರ್ವ ಶಿಕ್ಷಣ ಅಭಿಯಾನದ ಗೀತಾ, ಜೇಮ್ಸ್ ಕುಟಿನ್ಹೋ, ವಿಷಯ ಪರಿವೀಕ್ಷಕರಾದ ರಾಧಾಕೃಷ್ಣ, ಪುರುಷೋತ್ತಮ ಮತ್ತು ಶಂಕರಪ್ಪ ಬುದ್ನಾಳ್ ಉಪಸ್ಥಿತರಿದ್ದರು.
ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ವೈ. ಶಿವರಾಮಯ್ಯ ಸ್ವಾಗತಿಸಿ, ವಿಷಯ ಪರಿವೀಕ್ಷಕರಾದ ಸಮಂತ್ ಕಾರ್ಯಕ್ರಮ ನಿರ್ವಹಿಸಿದರು. ದ.ಕ. ಜಿ.ಪಂ., ಶಿಕ್ಷಣ ಇಲಾಖೆ, ಜಿಲ್ಲಾ ಉಪನಿರ್ದೇಶಕರ ಕಚೇರಿ ಮಂಗಳೂರು ಇವುಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅದೃಷದ ಕಾಲದಲ್ಲಿ
ಇಂದು ತಂತ್ರಜ್ಞಾನದ ಕಾರಣದಿಂದ ಎಲ್ಲ ಮಾಹಿತಿಗಳು ವಿದ್ಯಾರ್ಥಿಗಳಿಗೆ ಬೆರಳ ತುದಿಯಲ್ಲಿ ಸಿಗುತ್ತಿವೆ. ಇಂಥ
ಸಂದರ್ಭದಲ್ಲಿ ಮಕ್ಕಳಿಗೆ ಹೊಸದಾಗಿ ಏನು ನೀಡಬಹುದು ಎಂಬುದರ ಕಡೆಗೆ ಗಮನಹರಿಸಬೇಕು. ತಮ್ಮ ಮುಂದಿರುವುದು ವಿದ್ಯಾರ್ಥಿಗಳಲ್ಲ, ಅವರು ಕೂಡ ಶಿಕ್ಷಕರೇ ಎಂಬುದನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು ಎಂದು ಡಾ| ಮಾಧವ ಭಟ್ ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.