ಕ್ಯಾನ್ಸರ್ ಸಂಶೋಧನ ಕೇಂದ್ರ , ಪ್ರಧಾನಿಗೆ ಶಾಸಕ ಹರೀಶ್ ಪೂಂಜ ಟ್ವೀಟ್
Team Udayavani, Nov 15, 2018, 11:59 AM IST
ಬೆಳ್ತಂಗಡಿ : ಪ್ರಸ್ತುತ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ನಮ್ಮವರನ್ನು ಕಳೆದುಕೊಳ್ಳುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕ್ಯಾನ್ಸರ್ ಸಂಶೋಧನ ಕೇಂದ್ರವನ್ನು ತೆರೆಯಬೇಕು ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದಾರೆ. ಈ ಕಾಯಿಲೆಯಿಂದ ನಮ್ಮ ಸ್ನೇಹಿತರು, ಕುಟುಂಬದವರನ್ನು ಕಳೆದುಕೊಳ್ಳುತ್ತಿದ್ದು, ಪ್ರಸ್ತುತ ಕೇಂದ್ರ ಸಚಿವ ಅನಂತ ಕುಮಾರ್ ಅವರನ್ನೂ ಕ್ಯಾನ್ಸರ್ ಕಾಯಿಲೆ ಯಿಂದ ಕಳೆದುಕೊಂಡಿದ್ದೇವೆ. ಹೀಗಾಗಿ ಅವರದ್ದೇ ಹೆಸರಿನಲ್ಲಿ ಸಂಶೋಧನ ಕೇಂದ್ರವನ್ನು ತೆರೆಯಲು ಅವರು ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ.
ಈಗ ಬೇರೆ ಬೇರೆ ರೀತಿಗಳ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದ್ದು, ಮೊದಲ ಹಂತದಲ್ಲಿ ಗೊತ್ತಾದರೆ ಅದಕ್ಕೆ ಚಿಕಿತ್ಸೆ ಇದೆ ಎನ್ನಲಾಗುತ್ತಿದೆ. ಆದರೆ ಈ ಕಾಯಿಲೆ ಬಂದಿರುವುದು ಹೆಚ್ಚಿನವರಿಗೆ ಗೊತ್ತೇ ಆಗುವುದಿಲ್ಲ. ಹೀಗಾಗಿ ಕ್ಯಾನ್ಸರ್ ಸಂಶೋಧನ ಕೇಂದ್ರ ತೆರೆಯಬೇಕಿದೆ ಎಂದು ಟ್ವೀಟ್ ಮಾಡಿದ್ದೇನೆ. ಇದರ ಜತೆಗೆ ಇತರ ಕಾಯಿಲೆಗಳ ಕುರಿತು ಸಂಶೋಧನೆಗಳು ನಡೆಯಬೇಕಿದೆ ಎಂದು ಹರೀಶ್ ಪೂಂಜ ‘ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.