ದಾರಂದಕುಕ್ಕು -ಕೋಡಿಂಬಾಡಿ ಮಧ್ಯೆಯ ರಸ್ತೆಯಲ್ಲಿ ಹೊಂಡಗಳದ್ದೇ ಕಾರುಬಾರು
Team Udayavani, Jul 16, 2017, 4:00 AM IST
ನಗರ : ಪುತ್ತೂರು -ಉಪ್ಪಿನಂಗಡಿ ರಸ್ತೆ ವಿಸ್ತರಣೆಗೊಳ್ಳುವ ಹಂತದಲ್ಲಿದ್ದರೂ ಇದೀಗ ಹೊಂಡಗಳಿಂದ ತುಂಬಿ ವಾಹನ ಚಾಲಕರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯ ದಾರಂದಕುಕ್ಕುವಿನಿಂದ ಕೋಡಿಂಬಾಡಿ ಗ್ರಾ. ಪಂ. ತನಕ ನಾದುರಸ್ತಿಯಲ್ಲಿದ್ದು, ಸಂಚಾರ ಕಷ್ಟಕರವಾಗಿದೆ.
ಪ್ರತಿದಿನ ಸಾವಿರಾರು ವಾಹನಗಳು ಓಡಾಡುವ ಲೊಕೋಪಯೋಗಿ ಇಲಾಖೆಯ ವ್ಯಾಪ್ತಿ ಸೇರಿದ ಈ ರಸ್ತೆಯ ವಿಸ್ತರಣೆಗಾಗಿ ಈಗಾಗಲೇ 4.20 ಕೋಟಿ ರೂ. ಬಿಡುಗಡೆಯಾಗಿ, ಟೆಂಡರ್ ಕರೆಯಲಾಗಿದೆ. ಆಗಸ್ಟ್ ತಿಂಗಳ ಕೊನೆಗೆ ಈ ಕಾಮಗಾರಿ ಆರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಅಲ್ಲಿಯವರೆಗೆ ಈ ಹೊಂಡಗಳಿಂದ ಸಾರ್ವಜನಿಕರನ್ನು ರಕ್ಷಿಸಲು ಇಲಾಖೆ ಮುಂದಾಗಬೇಕಿದೆ.
ಚರಂಡಿಯೇ ಇಲ್ಲ
ಈ ರಸ್ತೆಯ ಮತ್ತೂಂದು ಮುಖ್ಯ ಸಮಸ್ಯೆ ಎಂದರೆ ಪುತ್ತೂರಿನಿಂದ ಉಪ್ಪಿನಂಗಡಿ ವರೆಗೆ ಚರಂಡಿಗಳೇ ಸಮರ್ಪಕವಾಗಿಲ್ಲ. ಮಳೆ ಬಂದರೆ ಸಾಕು ರಸ್ತೆಯ ಬದಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿಯೇ ಹರಿಯು ತದೆ. ಚರಂಡಿ ಅವ್ಯವಸ್ಥೆ ಅಲ್ಪ ಸರಿಯಾಗಿರುವ ರಸ್ತೆಯನ್ನೂ ಹಾಳುಗೆಡವುತ್ತಿದೆ.
ಮಧ್ಯೆ ಸಮಸ್ಯೆ
ಪುತ್ತೂರು -ಉಪ್ಪಿನಂಗಡಿ ರಸ್ತೆಯಲ್ಲಿ ಪುತ್ತೂರಿನಿಂದ ದಾರಂದಕುಕ್ಕು ರಸ್ತೆಯ ಭಾಗ ಉತ್ತಮವಾಗಿದೆ. ಹಾಗೆಯೇ ಕೋಡಿಂಬಾಡಿಯಿಂದ ಉಪ್ಪಿನಂಗಡಿ ವರೆಗಿನ ರಸ್ತೆಯ ಸ್ಥಿತಿಯೂ ಚೆನ್ನಾಗಿದೆ. ದಾರಂದಕುಕ್ಕುನಿಂದ ಕೋಡಿಂಬಾಡಿ ವರೆಗಿನ ಸುಮಾರು 2 ಕಿ.ಮೀ. ದೂರ ರಸ್ತೆಯಲ್ಲೂ ಸಮರ್ಪಕವಾದ ಚರಂಡಿಗಳಿಲ್ಲ. ಮಳೆ ನೀರು ರಸ್ತೆಯಲ್ಲಿಯೇ ಹರಿದು ಹೊಂಡಗಳು ನಿರ್ಮಾಣವಾದ ಪರಿಣಾಮ ಚಾಲಕರಿಗೆ ಇದೀಗ ತೊಂದರೆಯಾಗುತ್ತಿದೆ.
ಈ ಅಭಿವೃದ್ಧಿಯಾಗದೇ ಉಳಿದ ರಸ್ತೆ ವಿಸ್ತರಣೆಗೆ ಕಾಯುತ್ತಿದೆ. ಸರಕಾರ ದಿಂದ ಹಣವೂ ಬಂದಿದೆ. ಆದರೆ ಕಾಮಗಾರಿ ನಡೆಯ ಬೇಕಾದರೆ ಮಳೆ ಗಾಲ ಮುಗಿಯಬೇಕು. ಅಲ್ಲಿವರೆಗೆ ಹೊಂಡಗಳಿಂದ ಈ ಭಾಗದ ಪ್ರಯಾಣಿ ಕರನ್ನು ರಕ್ಷಿಸಲು ಅಗತ್ಯ ಕೆಲಸ ನಡೆಯಬೇಕಾಗಿದೆ.
ಒಟ್ಟು ಪುತ್ತೂರು -ಉಪ್ಪಿನಂಗಡಿವರೆ ಗಿನ ಈ ರಸ್ತೆಯ ಎಲ್ಲಿಯೂ ಚರಂಡಿ ಸರಿಯಾಗಿಲ್ಲ. ಡಾಮರು ಅಂಚಿನಲ್ಲಿಯೇ ಮಳೆ ನೀರು ಹರಿದುಹೋಗುತ್ತಿದೆ. ಪರಿಣಾಮ ರಸ್ತೆ ಮತ್ತೆ ಹಾಳಾಗುವ ಸ್ಥಿತಿ ಉಂಟಾಗುತ್ತಿದೆ. ಈಗಾಗಲೇ ಅಭಿವೃದ್ಧಿ ಯಾಗಿರುವ ರಸ್ತೆಯ ಅಂಚಿನಲ್ಲಿ ಮಣ್ಣು ಹಾಕಲಾಗಿದ್ದು, ಇದರಲ್ಲಿಯೇ ವಾಹನಗಳು ಸಂಚರಿಸಿದಾಗ ಅಲ್ಲಿಯೇ ಚರಂಡಿ ನಿರ್ಮಾಣವಾಗುತ್ತಿದೆ. ಇನ್ನಾ ದರೂ ಲೋಕೋಪಯೋಗಿ ಇಲಾಖೆ ಇತ್ತ ಕಡೆಗೆ ದೃಷ್ಟಿ ಹರಿಸಲಿ.
ಕೊಂಡ ಮುಚ್ಚಲು ಕ್ರಮ
ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ಅಭಿವೃದ್ಧಿಯಾಗದೆ ಬಾಕಿಯಾಗಿರುವ ಕಡೆ ರಸ್ತೆಯ ವಿಸ್ತರಣೆಗಾಗಿ ಈಗಾಗಲೇ 4.20 ಕೋಟಿ ರೂ. ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಆಗಸ್ಟ್ ತಿಂಗಳ ಅಂತ್ಯದೊಳಗೆ ಕಾಮಗಾರಿ ಆರಂಭವಾಗಲಿದೆ. ಇದೀಗ ವಾಹನ ಚಾಲಕರಿಗೆ ಸಮಸ್ಯೆಯಾಗಿರುವ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚುವ ಕೆಲಸಕ್ಕೆ ತತ್‌ಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ರಸ್ತೆಯ ಬದಿಯ ಚರಂಡಿ ವ್ಯವಸ್ಥೆಗೆ ಸರಿಪಡಿಸಲು ಕ್ರಮ ಕೈಗೊಳ್ಳುವ ಕೆಲಸಕ್ಕೂ ಅಧಿಕಾರಿಗಳಿಗೆ ಸೂಚಿಸುತ್ತೇನೆ
– ಶಕುಂತಳಾ ಟಿ. ಶೆಟ್ಟಿ
ಶಾಸಕರು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.