ಎಸೆಸೆಲ್ಸಿ ಪರೀಕ್ಷೆಗೆ ಸಿಸಿ ಕಣ್ಗಾವಲು
Team Udayavani, Mar 22, 2018, 11:51 AM IST
ಬೆಳ್ತಂಗಡಿ: ತಾಲೂಕಿನಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಿದ್ದು, 13 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ನಡೆಯಲಿರುವ ಎಲ್ಲ ಕೇಂದ್ರಗಳಲ್ಲೂ ಸಿಸಿ ಕೆಮರಾ ಅಳವಡಿಸುವ ಮೂಲಕ ಭದ್ರತೆಗೆ ಅದ್ಯತೆ ನೀಡಲಾಗಿದೆ.
ಸದ್ಯ ತಾಲೂಕಿನಲ್ಲಿ ಯಾವುದೇ ಸೂಕ್ಷ್ಮ/ಅತಿಸೂಕ್ಷ್ಮ ಪ್ರದೇಶಗಳು ಇಲ್ಲವಾದ್ದರಿಂದ ಸುಸೂತ್ರವಾಗಿ ನಡೆಯಲು ಕ್ರಮಕೈಗೊಳ್ಳಲಾಗಿದೆ. ತಾ| ಖಜಾನೆಯಲ್ಲಿ ಪ್ರಶ್ನೆಪತ್ರಿಕೆ ಸಂಗ್ರಹಿಸಿ, ಪರೀಕ್ಷೆ ದಿನ ಪರೀಕ್ಷಾ ಕೇಂದ್ರಗಳಿಗೆ ಸಾಗಿಸಲು ವ್ಯವಸ್ಥೆ ರೂಪಿಸಲಾಗಿದೆ. ಅಧಿಕಾರಿಗಳು ಪರೀಕ್ಷೆ ದಿನ ಆಯಾ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಸಾಗಿಸಲಿದ್ದಾರೆ. ಈಗಾಗಲೇ ಶಿಕ್ಷಕರ ಸಭೆ ನಡೆಸಿ, ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ಬಗ್ಗೆ ಸಲಹೆ, ಸೂಚನೆ ನೀಡಲಾಗಿದೆ.
3,887 ವಿದ್ಯಾರ್ಥಿಗಳು
ತಾ|ನಲ್ಲಿ ಈ ಬಾರಿ ಒಟ್ಟು 3,887 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 1,890 ಬಾಲಕರು, 1,997 ಬಾಲಕಿಯರು ಪರೀಕ್ಷೆ ಎದುರಿಸಲು ನೋಂದಣಿ ನಡೆಸಿದ್ದಾರೆ. ಇದರಲ್ಲಿ ಸ. ಶಾಲೆಯ 2,073 ವಿದ್ಯಾರ್ಥಿ ಗಳು, ಅನುದಾನಿತ ಶಾಲೆಯ 870, ಅನುದಾನ ರಹಿತ ಶಾಲೆಯ 944 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
ಪರೀಕ್ಷಾ ಕೇಂದ್ರಗಳು
ತಾಲೂಕಿನ ಒಟ್ಟು 22 ಪ್ರೌಢಶಾಲೆ ಹಾಗೂ ಪಪೂ ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, ತಾ|ನ 13 ಕೇಂದ್ರಗಳಲ್ಲಿ ಸಿದ್ಧತೆ ನಡೆಸಲಾಗಿದೆ.
ಬೆಳ್ತಂಗಡಿ ಸಂತ ತೆರೆಸಾ ಅನುದಾನಿತ ಪ್ರೌಢಶಾಲೆ, ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಉಜಿರೆ ಎಸ್. ಡಿ.ಎಂ. ಸೆಕೆಂಡರಿ ಶಾಲೆ, ಮುಂಡಾಜೆ ಅನುದಾನಿತ ಪ್ರೌಢಶಾಲೆ, ಪುಂಜಾಲಕಟ್ಟೆ ಸರಕಾರಿ ಪಪೂ ಕಾಲೇಜು, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕನ್ನಡ ಮಾಧ್ಯಮ ಪ್ರೌಢಶಾಲೆ, ವೇಣೂರು ಸರಕಾರಿ ಪಪೂ ಕಾಲೇಜು, ಅಳದಂಗಡಿ ಸ. ಪಪೂ ಕಾಲೇಜು, ಕಣಿಯೂರು – ಪದ್ಮುಂಜ ಸ. ಪ್ರೌಢಶಾಲೆ, ಕರಾಯ ಸರಕಾರಿ ಪ್ರೌಢಶಾಲೆ, ಧರ್ಮಸ್ಥಳ ಅನುದಾನಿತ ಪ್ರೌಢಶಾಲೆ, ಕೊಕ್ಕಡ ಸ. ಪ್ರೌಢಶಾಲೆಗಳಲ್ಲಿ ಪರೀಕ್ಷೆ ನಡೆಯಲಿದೆ.
ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಕೇಂದ್ರದ ಸಂಕೇತಗಳನ್ನು ನೀಡಿ, ಪರೀಕ್ಷಾ ಕೇಂದ್ರದ ಒಟ್ಟು ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಕೇಂದ್ರಗಳನ್ನು ಹಂಚಲಾಗಿದೆ.
ಸಕಲ ಸಿದ್ಧತೆ
ತಾಲೂಕಿನ ಎಲ್ಲ ಕೇಂದ್ರಗಳೂ ಸಾಮಾನ್ಯ ಕೇಂದ್ರಗಳಾಗಿದೆ. ಸ್ಕ್ವಾಡ್ ಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಲಿದ್ದಾರೆ. ತಾಲೂಕು ಕೇಂದ್ರದಿಂದ ದೂರದಲ್ಲಿರುವ ಕರಾಯ, ಪದ್ಮುಂಜ ಹಾಗೂ ಕೊಕ್ಕಡ ಕೇಂದ್ರಗಳಿಗೆ ನಿಗದಿತ ಸಮಯದಲ್ಲಿ ಪ್ರಶ್ನೆಪತ್ರಿಕೆ ತಲುಪಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ತಾಲೂಕು ಖಜಾನೆಯಿಯಿಂದ ಪ್ರಶ್ನೆ ಪತ್ರಿಕೆ, ಹಾಗೂ ಉತ್ತರ ಪತ್ರಿಕೆಗಳನ್ನು ಕೇಂದ್ರಗಳಿಗೆ ತಲುಪಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ.
ಸಮಯಕ್ಕೆ ಆದ್ಯತೆ ಆಗತ್ಯ
ಬೆಳಗ್ಗೆ 9.30ರಿಂದ ಪರೀಕ್ಷೆ ಆರಂಭವಾಗಲಿದೆ. ಮಕ್ಕಳು 9 ಗಂಟೆಗೇ ಪರೀಕ್ಷಾ ಕೇಂದ್ರದಲ್ಲಿರಬೇಕು. ನಿರಾಳರಾಗಿ, ಶಾಂತಚಿತ್ತದಿಂದ, ಉದ್ವೇಗವಿಲ್ಲದೆ. ಪರೀಕ್ಷೆ ನಿಯಮ ಆರಿತುಕೊಂಡು ಅನಗತ್ಯ ಸಮಯ ಹರಣ ಮಾಡದೆ ಸರಳ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಬೇಕು. ಬಹು ಆಯ್ಕೆ ಪ್ರಶ್ನೆಗಳ ಬಗ್ಗೆಯೂ ಗಮನ ಹರಿಸಬೇಕು. ಈ ಬಗ್ಗೆ ಈಗಾಗಲೇ ಮಾರ್ಗದರ್ಶನ ನೀಡಲಾಗಿದೆ. ಪ್ರಶ್ನೆಪತ್ರಿಕೆ ಓದಲು 1 ನಿಮಿಷ ನೀಡಲಾಗಿದೆ. ಆದ್ದರಿಂದ ಮಾನಸಿಕವಾಗಿ ಸಿದ್ಧರಾಗಲು ಸಮಯಾವಕಾಶ ಸಿಗುತ್ತದೆ. ಮೊದಲು ಓದಿಕೊಂಡು ಉತ್ತರ ಖಾತ್ರಿ ಪಡಿಸಿಕೊಂಡು ಉತ್ತರ ಬರೆಯಬಹುದು ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಭಯ ಬೇಡ
ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಶಿಕ್ಷಕರು ಹಾಗೂ ಅಧಿಕಾರಿಗಳು ಈಗಾಗಲೇ ಪರೀಕ್ಷೆ ಎದುರಿಸುವ ಬಗೆ ತಿಳಿಸಿದ್ದಾರೆ. ಅದರಂತೆ ಕಾರ್ಯನಿರ್ವಹಿಸಿದರೆ ಸಾಕು. ಅಲೋಚಿಸಿ ಉತ್ತರ ಬರೆಯುವುದು ಸೂಕ್ತ. ಎಲ್ಲರೂ ಚೆನ್ನಾಗಿ ಪರೀಕ್ಷೆ ಬರೆಯಿರಿ. ಎಲ್ಲರಿಗೂ ಉತ್ತಮ ಅಂಕಗಳಿಸುವ ಸಾಮರ್ಥ್ಯವಿದೆ. ಎಲ್ಲ ಮಕ್ಕಳಿಗೂ ಶುಭಹಾರೈಕೆಗಳು.
– ತಾರಾ ಕೇಸರಿ
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ
ಹರ್ಷಿತ್ ಪಿಂಡಿವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.