ಸಾಮಾಜಿಕ ತಾಣಗಳಲ್ಲಿ ಸಂಭ್ರಮ; ಅಭ್ಯರ್ಥಿಗಳ ಕಿವಿ ಹಿಂಡುವ ಟ್ರೋಲ್
Team Udayavani, May 24, 2019, 6:00 AM IST
ಗೆಲುವು ಸಾಧಿಸಿದ ಬಳಿಕ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲು ತಮ್ಮ ಫೇಸುºಕ್ ಪೇಜ್‌ನಲ್ಲಿ ಮತದಾರರಿಗೆ ಕೃತnತೆ ಸಲ್ಲಿಸಿದರು.
ಮಹಾನಗರ: ದೇಶಾದ್ಯಂತ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಸೋಲು-ಗೆಲುವು ಖಚಿತವಾಗುತ್ತಿದ್ದಂತೆ ಇತ್ತ ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡು ಅಭಿಮಾನಿಗಳು ಸಂಭ್ರಮಿಸಿದರು.
ಇನ್ನೊಂದೆಡೆ ಟ್ರೋಲ್‌ಗಳ ಮೂಲಕ ಅಭ್ಯರ್ಥಿಗಳಗೆ ಕಿವಿ ಹಿಂಡುವ ಕೆಲಸವೂ ನಡೆಯಿತು.
ದ.ಕ. ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರಿಗೆ “ಈ ಬಾರಿ ಗೆದ್ದಿದ್ದೀರಿ. ಮುಂದೆ ಆ ಮನುಷ್ಯನನ್ನು ಬಿಟ್ಟು ನಿಮ್ಮದೇ ವರ್ಚಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಕೆಲಸ ಮಾಡಿ…’ಎಂದು ಸಾಮಾಜಿಕ ತಾಣ ಬಳಕೆದಾರರೊಬ್ಬರು ಸಲಹೆ ನೀಡಿದರು.
ಈ ನಡುವೆ “ನಳಿನ್ ಮುನ್ನಡೆ; ಮಿಥುನ್ ಇಲ್ಲಡೆ’ ಎಂಬ ಟ್ರೋಲ್‌ಗಳೂ ಹರಿದಾಡಿದವು. ನಳಿನ್ ಕುಮಾರ್ ಭಾರೀ ಅಂತರದಿಂದ ಗೆಲುವು ಸಾಧಿಸುತ್ತಿದ್ದಂತೆ ಫೇಸುºಕ್, ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ನಳಿನ್‌ಕುಮಾರ್ ಕಟೀಲು, ನರೇಂದ್ರ ಮೋದಿ ಫೋಟೋ ಹಾಕಿ ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮಿಸಿದರು.
ಹ್ಯಾಟ್ರಿಕ್ ಹೀರೋಗೆ ಅಭಿಮಾನಿಗಳ ಜೋಶ್
ಸತತ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಹೀರೋ ಎನಿಸಿಕೊಂಡ ನಳಿನ್‌ಕುಮಾರ್ ಕಟೀಲು ಅವರಿಗೆ “ಗೆಂದ್ಯೆರಪಾ ಗೆಂದಿಯೆರ್..ನಳಿನಣ್ಣೆ ಗೆಂದಿಯೆರ್..’ ಎಂದು ಘೋಷಣೆ ಕೂಗುವ ಮೂಲಕ ಅಭಿಮಾನಿಗಳು ಪ್ರೋತ್ಸಾಹಿಸಿದರು. ಸಾಮಾಜಿಕ ತಾಣಗಳಲ್ಲಿಯೂ ಈ ವಾಕ್ಯ ಬರೆದು ಖುಷಿಪಟ್ಟರು.
ಮದುವೆ ಹಾಲ್‌ನಲ್ಲೂ ಫಲಿತಾಂಶ ಕಾತರ!
ಮೇ 23ರಂದು ನಗರದ ಕೆಲವು ಹಾಲ್‌ಗಳಲ್ಲಿ ಮದುವೆ ಸಮಾರಂಭಗಳು ನಡೆದವು. ಮದುವೆಗೆ ಬಂದ ಅತಿಥಿಗಳೆಲ್ಲರೂ ವಧೂ-ವರರನ್ನು ನೋಡುವುದು, ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಳ್ಳುವುದನ್ನು ಬಿಟ್ಟು ಮೊಬೈಲ್‌ನಲ್ಲಿ ಟಿವಿ ವೀಕ್ಷಣೆಯಲ್ಲಿ ತೊಡಗಿದ್ದರು. ಬಂದ ಅತಿಥಿಗಳೆಲ್ಲರೂ ದ.ಕ. ಕ್ಷೇತ್ರ ಮಾತ್ರವಲ್ಲದೆ, ಮಂಡ್ಯ, ತುಮಕೂರು, ಹಾಸನ, ಕಲುºರ್ಗಿ, ಅಮೇಠಿ, ವಾರಣಾಸಿ ಕ್ಷೇತ್ರಗಳ ಲೀಡ್ ಬಗ್ಗೆಯೂ ಆಗಾಗ ವಿಚಾರಿಸುತ್ತಿರುವುದು ಕಂಡುಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.