ಸಂತ ಸೆಬಾಸ್ಟಿಯನ್ ಧರ್ಮಕೇಂದ್ರದ ಶತಮಾನೋತ್ಸವ
Team Udayavani, Jan 13, 2018, 11:50 AM IST
ಉಳ್ಳಾಲ: ಸಂತ ಸೆಬಾಸ್ಟಿಯನ್ ಧರ್ಮಕೇಂದ್ರದ ಶತಮನೋತ್ಸವದ ಪೂರ್ವ ತಯಾರಿಯಾಗಿ 9 ದಿವಸಗಳ
ನೋವೆನ್ನಾ ಪ್ರಾರ್ಥನೆಗಳ ಮೊದಲ ದಿನದ ಅಂಗವಾಗಿ ಸಂತ ಸೆಬಾಸ್ಟಿಯನ್ ಧರ್ಮಕೇಂದ್ರದ ಧರ್ಮಗುರು ಫಾ| ಜೆ.ಬಿ. ಸಲ್ದಾನ್ಹ ಅವರ ಮಾರ್ಗದರ್ಶನದಲ್ಲಿ ಪ್ರಾರ್ಥನೆಯನ್ನು ಪ್ರಾರಂಭಿಸಲಾಯಿತು.
ಶತಮಾನೋತ್ಸವದ ಅಂಗವಾಗಿ ಒಂದು ವರ್ಷಗಳ ಕಾಲ ನಡೆದ ಕಾರ್ಯಕ್ರಮಗಳ ಸಮಾರೋಪದ ಧ್ವಜಾರೋಹಣವನ್ನು ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ|ಡೆನಿಸ್ ಮೊರಸ್ ಪ್ರಭು ನೇರವೇರಿಸಿದರು.
ಕಾರ್ಯಕ್ರಮದ ಪೂರ್ವ ಭಾವಿಯಾಗಿ ಪವಿತ್ರ ಸ್ಥಳದ ಪಾಲಕರಾದ ಸಂತ ಸೆಬಾಸ್ಟಿಯನ್ನರ ಪವಿತ್ರ ಮೂರ್ತಿಯನ್ನು ಧರ್ಮಕೇಂದ್ರಕ್ಕೆ ಒಳಪಟ್ಟ ಪ್ರತಿಯೊಂದು ಮನೆಗೆ ಭಕ್ತಿಪೂರ್ಣವಾಗಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕಾರ್ಯಮುಗಿಸಿ ಮೆರವಣಿಗೆಯಲ್ಲಿ ವಾಹನ ಜಾಥಾದ ಮೂಲಕ ಸೊಮೇಶ್ವರದಿಂದ ತೊಕ್ಕೊಟ್ಟು ಧರ್ಮಕೇಂದ್ರದ ತನಕ ತರಲಾಯಿತು.
ಸಂತ ಸೆಬಾಸ್ಟಿಯನ್ ಧರ್ಮಕೇಂದ್ರದ ಸಹಾಯಕ ಧರ್ಮಗುರುಗಳಾದ ಫಾ| ಸ್ಟಾನಿ ಪಿಂಟೋ, ಫಾ| ಲೈಝಿಲ್
ಡಿ’ಸೋಜಾ, ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಪ್ರಾಂಶುಪಾಲ ಫಾ| ಎಡ್ವಿನ್ ಮಸ್ಕರೇನ್ಹಸ್, ತೊಕ್ಕೊಟ್ಟು
ವಾಣಂಯತರ ಡಿವೈನ್ ಸೆಂಟರ್ ಫಾ| ಜೊಸೇಫ್, ಭಗಿನಿ ಬೆನ್ನಿ ಬರೆಟ್ಟೊ, ಸುಫಿರಿಯರ್ ಅಲೋಶಿಯನ್ ಕೊನ್ವೆಂಟ್ ನೆಹರು ನಗರದ ಭಗಿನಿ ಎಮ್ಮ ಜೊಸೇಫ್, ಸುಫಿರಿಯರ್ ನಿರ್ಮಲಾ ಕಾನ್ವೆಂಟ್ ಉಳ್ಳಾಲ, ಭಗಿನಿ ಕಾರ್ಮಿನ್ ಮಿಸ್ಕಿತ್, ಸುಫಿರಿಯರ್ ಬೆತೆಲ್ ಕಾನ್ವೆಂಟ್ ಪೆರ್ಮನ್ನೂರು, ಸಂತ ಸೆಬಾಸ್ಟಿಯನ್ ಧರ್ಮಕೇಂದ್ರದ ಸೇವಾದರ್ಶಿ ಫ್ಲೇವಿಯನ್ ಲೋಬೋ, ಚರ್ಚ್ ಪಾಲನ ಪರಿಷತ್ ಉಪಾಧ್ಯಕ್ಷ ಮೆಲ್ವಿನ್ ಸಿ. ಡಿ’ಸೋಜಾ, ಚರ್ಚ್ ಪಾಲನ ಪರಿಷತ್ ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡಿಸ್, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಡೆಮೆಟ್ರಿಯಸ್ ಡಿ’ಸೋಜಾ, ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಜೋಸ್ಲಿನ್ ಡಿ’ಸೋಜಾ, ಜೆರ್ಮಿ ಮೊಂತೆರೋ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.