ಪೆರ್ಮನ್ನೂರು ಚರ್ಚ್ ಶತಮಾನೋತ್ಸವ ಸೌಹಾರ್ದ ಸಮ್ಮಿಲನ
Team Udayavani, Jan 21, 2018, 10:45 AM IST
ಮಹಾನಗರ: ಉಳ್ಳಾಲದ ಪೆರ್ಮನ್ನೂರಿನ ಸಂತ ಸೆಬೆಸ್ಟಿಯನ್ ಚರ್ಚ್ ಶತಮಾನೋತ್ಸವ ಅಂಗವಾಗಿ ನಡೆಯುತ್ತಿರುವ ಸೌಹಾರ್ದ ಸಮ್ಮಿಲನವು ಸರ್ವ ಜನಾಂಗವನ್ನು ಬೆಸೆಯುವ ಕಾರ್ಯಕ್ರಮವಾಗಿದೆ.
ಕೋಮು ಸೂಕ್ಷ್ಮ ಪರಿಸರ ಎಂದು ಗುರುತಿಸಲ್ಪಟ್ಟರೂ ಉಳ್ಳಾಲ ಪ್ರದೇಶದಲ್ಲಿ ಸರ್ವ ಧರ್ಮದವರು ಸಮಬಾಳ್ವೆಯಿಂದ ನೆಲೆಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಚರ್ಚ್ ನ ಶತಮಾನೋತ್ಸವ ಸಮಾರಂಭದ ಅಂಗವಾಗಿ ತೊಕ್ಕೊಟ್ಟು ಒಳಪೇಟೆಯ ಬಳಿ ಹಿಂದೂ ಮುಖಂಡರು ದ್ವಾರ ವೊಂದನ್ನು ಹಾಕಿದ್ದಾರೆ. ಅಂದಹಾಗೆ ಈ ದ್ವಾರವು ಸೌಹಾರ್ದ ಸಮ್ಮಿಲನದ ಸಂಕೇತ ದಂತಿದ್ದು, ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದ ಸಂಕೇತವನ್ನು ಹಾಕಲಾಗಿದೆ. ಇದು ಎಲ್ಲರ ಪ್ರಶಂಸೆಗೂ ಪಾತ್ರವಾಗುತ್ತಿದೆ.
ದ್ವಾರದ ವಿಶೇಷ
ಈ ದ್ವಾರದ ಎಡ ಭಾಗದಲ್ಲಿ ಚರ್ಚ್ ಗಂಟೆ, ಬಲ ಭಾಗದಲ್ಲಿ ಮಸೀದಿಯ ಬಾಂಕ್ ಕೊಡುವ ಜಾಗ ಮತ್ತು ಮಧ್ಯದ ಭಾಗದಲ್ಲಿ ದೇವಸ್ಥಾನದ ಗೋಪುರವಿದೆ. ಈ ದ್ವಾರವನ್ನು ಚೀರುಂಭ ಭಗವತಿ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಭಟ್ನಗರ
ಅವರು ಸ್ವಂತ ಆಸಕ್ತಿಯಿಂದ ಹಾಕಿ ಸಮಾಜಕ್ಕೆ ಸಂದೇಶ ಸಾರಿದ್ದಾರೆ.
ಸಹಬಾಳ್ವೆಯ ಸಂದೇಶ
ನಮ್ಮೆಲ್ಲರ ದೃಢಚಿತ್ತ ಸಹಬಾಳ್ವೆಯ ಎಂಬ ಸಂದೇಶವನ್ನು ಸಾರುವ ಈ ದ್ವಾರ ಎಲ್ಲ ಧರ್ಮದವರು ಒಂದೇ ಎಂಬ ಕಲ್ಪನೆ ಮೂಡಿಸುತ್ತದೆ. ಹೊಸ ಪ್ರಯೋಗ, ಪರಿಕಲ್ಪನೆಗೆ ಮಾದರಿಯಾದಂತಿರುವ ಈ ದ್ವಾರ ಏಕತೆಯನ್ನು ಸಾಧಿಸುವುದರ ಜತೆಗೆ ಜನರಲ್ಲಿ ಒಗ್ಗಟ್ಟು ಮೂಡಿಸುವ ದೃಷ್ಟಿಯಿಂದ ಮಾಡಲಾಗಿದೆ.
ಜಾತಿ ಮತ ಮೀರಿ ಸೇವೆ
ಅಂದಹಾಗೆ ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ ಕೂಡ ಎಲ್ಲ ಧರ್ಮಗಳ ಸೌಹಾರ್ದ ಸಂಗಮ ಸ್ಥಳ. ಉಳ್ಳಾಲ ದರ್ಗಾ ಹಾಗೂ ಸೋಮನಾಥೇಶ್ವರ ದೇವಾಲಯ ಪಕ್ಕದಲ್ಲಿಯೇ ಇರುವುದರಿಂದ ಇಲ್ಲಿಗೆ ಆಗಮಿಸುವ ಎಲ್ಲ ಧರ್ಮದವರು ಚರ್ಚ್‌ಗೆ ಭೇಟಿ ನೀಡುತ್ತಾರೆ. ಅಲ್ಲದೆ ಇಲ್ಲಿ ನಡೆದ ಸೌಹಾರ್ದ ಸಮ್ಮಿಲನದಲ್ಲಿಯೂ ಜಾತಿ ಭೇದವಿಲ್ಲದೆ ಸ್ವಯಂಸೇವಕರಾಗಿ ಕೆಲಸ ನಿರ್ವಹಿಸಿದ್ದಾರೆ.
ಸಂತಸದ ಸಂಗತಿ
ದೇವರಿಗೆ ಎಲ್ಲರೂ ಒಂದೇ ಎಂಬ ಭಾವನೆ ಇದೆ. ಭಕ್ತರಾದ ನಾವು ಕೂಡ ಯಾವುದೇ ತಾರತಮ್ಯ ಮಾಡಬಾರದು. ಎಲ್ಲ ಜಾತಿ, ವರ್ಗಕ್ಕೆ ಗೌರವ ಕೊಟ್ಟು ದ್ವಾರ ನಿರ್ಮಾಣ ಮಾಡಿದ್ದು ಸಂತಸದ ಸಂಗತಿ. ಇದು ಸಮಾಜಕ್ಕೆ ಸಂದೇಶವನ್ನು
ನೀಡುತ್ತದೆ.
– ಯು.ಟಿ. ಖಾದರ್, ಸಚಿವ
ಸೌಹಾರ್ದ ಸಮ್ಮಿಲನ
ಸೌಹಾರ್ದ ಸಮ್ಮಿಲನ ಸಮಾರಂಭದಲ್ಲಿ ಎಲ್ಲ ಧರ್ಮದವರಿಗೂ ಪ್ರಾಶಸ್ತ್ಯ ನೀಡಲಾಗಿದೆ. ಶಾಂತಿ ಮತ್ತು ಸಹಬಾಳ್ವೆಯಿಂದ ಬಾಳಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಈ ಕಾರ್ಯರ್ಕಮದಲ್ಲಿ ಹೆಚ್ಚಾಗಿ ಹಿಂದೂ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು.
–ಕೆ. ಜಯರಾಮ ಶೆಟ್ಟಿ, ,
ಮಾಜಿ ಶಾಸಕ, ಉಳ್ಳಾಲ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Train; ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯಕ್ಕೆ?
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.