ಕಲಾವಿದರ ಸಮೀಕ್ಷೆಗೆ ಕೇಂದ್ರದಿಂದ ಕ್ರಮ: ನಾಯ್ಕರ್
Team Udayavani, Dec 20, 2021, 5:40 AM IST
ಮಂಗಳೂರು: ದೇಶದಲ್ಲಿರುವ ಎಲ್ಲ ಪ್ರಕಾರಗಳ ಕಲಾವಿದರ ಸರ್ವೆ ಹಾಗೂ ಅಸಂಘಟಿತ ಕಲಾವಿದರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಲು ಕೇಂದ್ರ ಸರಕಾರ ಕ್ರಮ ಕೈಗೊಂಡಿದ್ದು ಕಲಾವಿದರ ಪಾಲಿಗೆ ಇದು ಉಪಯುಕ್ತ ಕ್ರಮವಾಗಲಿದೆ ಎಂದು ಬಿಜೆಪಿಯ ಕಲೆ ಮತ್ತು ಸಂಸ್ಕೃತಿ ಪ್ರಕೋಷ್ಠ ರಾಜ್ಯ ಸಹ ಸಂಚಾಲಕ ರಮೇಶ್ ಪರವಿ ನಾಯ್ಕರ್ ಹೇಳಿದ್ದಾರೆ.
ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ರವಿವಾರ ಜರ ಗಿದ ಬಿಜೆಪಿ ಜಿಲ್ಲಾ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಜಿಲ್ಲಾ 9 ಮಂಡಲಗಳನ್ನೊಳಗೊಂಡ ಜಿಲ್ಲಾ ಸಮಿತಿಯ ಪದಗ್ರಹಣ ಹಾಗೂ ವಿಶಿಷ್ಠ ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದರಿಗೆ ಹಾಗೂ ಅವರ ಕುಟುಂಬಕ್ಕೆ ನೆರವಾಗುವ ದಿಶೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಅಸಂಘ ಟಿತ ಕಾರ್ಮಿಕರ ನೆಲೆಯಲ್ಲಿ ನೋಂದಾವಣೆ ನಡೆಯುತ್ತಿದೆ. ಕಲಾವಿದರ ಸರ್ವೆ ಕಾರ್ಯದಿಂದ ಅವ ರಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಲು ಸುಲಭವಾಗಲಿದೆ. ಈಗಾಗಲೇ ಕರ್ನಾಟಕದ ಶಿವಮೊಗ್ಗ ದಲ್ಲಿ ಕಲಾವಿದರ ನೋಂದಣಿ ಸಂಪೂರ್ಣಗೊಂಡಿದೆ. ಉಳಿದ ಜಿಲ್ಲೆಗಳಲ್ಲೂ ತ್ವರಿತವಾಗಿ ಕಲಾವಿದರ ನೋಂದಣಿ ಕಾರ್ಯ ನಡೆಯಲಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ ಕಲೆ, ಸಂಸ್ಕೃತಿಯ ಸಂರಕ್ಷಣೆಯಲ್ಲಿ ಕಲಾವಿದರ ಕೊಡುಗೆ ಮಹತ್ತರವಾಗಿದ್ದು ಅವರಿಗೆ ಹೆಚ್ಚಿನ ರೀತಿಯ ಪ್ರೋತ್ಸಾಹ ಹಾಗೂ ಸವಲತ್ತುಗಳು ನೀಡುವುದು ಅಗತ್ಯ. ಬಿಜೆಪಿ ಸರಕಾರ ಕಲೆ, ಸಂಸ್ಕೃತಿಗೆ ಹೆಚ್ಚಿನಪ್ರೋತ್ಸಾಹ ನೀಡು ತ್ತಿದ್ದು ಈ ನಿಟ್ಟಿನಲ್ಲಿ ಹಲ ವಾರು ಯೋಜನೆಗಳನ್ನು ಅನುಷ್ಠಾನ ಗೊಳಿಸಿದೆ ಎಂದರು.
ಇದನ್ನೂ ಓದಿ:ಆಸ್ಪತ್ರೆಗಳಿಗೆ ಸಿಗಲಿದೆ “ಸ್ತನ್ಯಪಾನ ಸ್ನೇಹಿ’ ಟ್ಯಾಗ್
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡು ಬಿದಿರೆ ಯವರು ಮಾತನಾಡಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಪರಿಕಲ್ಪನೆಯಾಗಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ರೂಪು ಗೊಂಡಿದೆ ಎಂದರು. ಜಿಲ್ಲಾ ಪ್ರಕೋಷ್ಠದ ಸಂಚಾಲಕ ಸರಪಾಡಿ ಆಶೋಕ್ ಶೆಟ್ಟಿ ಪ್ರಸ್ತಾವನೆಗೈದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ , ತಿಲಕ್‌ರಾಜ್ ಕೃಷ್ಣಾಪುರ, ರೂಪಾ ಡಿ.ಬಂಗೇರ, ಸಹಸಂಚಾಲಕ ಚೇತಕ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು.
ಸಮ್ಮಾನ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ವಾದ್ಯ ಕಲಾವಿದ ರಾಘು ಸುವರ್ಣ,ಯಕ್ಷಗಾನ ಕಲಾವಿದ ಎಡಪದವು ಶ್ರೀನಿವಾಸ ಆಚಾರ್ಯ, ತುಳುನಾಟಕ ರಂಗದ ಸದಾಶಿವ ಅಮೀನ್ ಹಾಗೂ ಕಲಾವಿದ ಭುಜಬಲಿ ಧರ್ಮಸ್ಥಳ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಚಂದರ್ ಬೈಕಂಪಾಡಿ ಅವರನ್ನು ಸಮ್ಮಾನಿಸಿ ಅಭಿನಂದಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.