BSNL ಪಿಂಚಣಿದಾರರ ಪರ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ ತೀರ್ಪು
Team Udayavani, Oct 8, 2023, 10:56 PM IST
ಮಂಗಳೂರು: ಕೇಂದ್ರ ಸರಕಾರದ ನಿಯಮದಂತೆ ಸರಕಾರಿ ನಿವೃತ್ತ ನೌಕರರಿಗೆ ಪ್ರತೀ 10 ವರ್ಷಕ್ಕೊಮ್ಮೆ ಪಿಂಚಣಿ ಪರಿಷ್ಕರಣೆಯಾಗುತ್ತದೆ. ಅದರಂತೆ ಬಿಎಸ್ಸೆನ್ನೆಲ್ ನಿವೃತ್ತರು 2017ರಿಂದ ಪಿಂಚಣಿ ನಿಷ್ಕರ್ಷೆಗೆ ಅರ್ಹರಾಗಿರುತ್ತಾರೆ. ಆದರೆ ಕೇಂದ್ರ ಸರಕಾರ ತನ್ನ ನಿವೃತ್ತರಿಗೆ 7ನೇ ವೇತನ ಆಯೋಗದ ಶಿಫಾರಸಿನಂತೆ ಪಿಂಚಣಿ ಪರಿಷ್ಕರಣೆ ಮಾಡಿದ್ದರೂ ಬಿಎಸ್ಸೆನ್ನೆಲ್ ನಿವೃತ್ತರಿಗೆ ಅದನ್ನು ಕೊಡಮಾಡದೆ ವಿಳಂಬ ನೀತಿ ಮತ್ತು ಸೌಲಭ್ಯದಿಂದ ವಂಚಿತರನ್ನಾಗುವಂತೆ ಮಾಡಿತ್ತು.
ಈ ಕುರಿತ ಮನವಿಗೆ ಕೇಂದ್ರ ಸ್ಪಂದಿಸದೇ ಇದ್ದ ಹಿನ್ನೆಲೆಯಲ್ಲಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ ಪಿಬಿ ಹೊಸ ದಿಲ್ಲಿ)ಯ ಪ್ರಧಾನ ಪೀಠಕ್ಕೆ ಪಿಂಚಣಿದಾರರ ಸಂಘ ಮೊರೆ ಹೋಗಿದ್ದು, ಸುದೀರ್ಘ 3 ವರ್ಷಗಳ ವಿಚಾರಣೆ ಬಳಿಕ ಮಂಡಳಿ ನಿರ್ಣಯ ಪ್ರಕಟಿಸಿದೆ. ಅದರಂತೆ ಬಿಎಸ್ಸೆನ್ನೆಲ್ ಪಿಂಚಣಿದಾರರೂ ಕೇಂದ್ರ ಸರಕಾರಿ ಪಿಂಚಣಿದಾರರಿಗೆ ಸಲ್ಲಬೇಕಾದ ಎಲ್ಲ ಸವಲತ್ತುಗಳಿಗೆ ಅರ್ಹರು. ಈ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ಸರಕಾರ 2007ರ ಜ. 1ರಿಂದ ಬಿಎಸ್ಸೆನ್ನೆಲ್ ನಿವೃತ್ತರಿಗೆ ಆರನೇ ವೇತನ ಆಯೋಗದಂತೆ ಪಿಂಚಣಿಯನ್ನು ಪರಿಷ್ಕರಿಸಿತ್ತು. ಬಿಎಸ್ಸೆನ್ನೆಲ್ ಸೇವೆಯನ್ನು ಕೇಂದ್ರ ಸರಕಾರಿ ಸೇವೆಯಾಗಿ ಪರಿಗಣಿಸಲು ಕೇಂದ್ರ ಸರಕಾರ ಪಿಂಚಣಿ ದೇಣಿಗೆಯನ್ನು ನಿಗದಿಪಡಿಸಿ, ನೌಕರರ ವೇತನ ಶ್ರೇಣಿಯ ಗರಿಷ್ಠ ಮೊತ್ತದ ಮೇಲೆ ವಸೂಲು ಮಾಡಿದೆ. ಇದರ ಹೊರತಾಗಿ ಗರಿಷ್ಠ ಸೇವೆಯು 33 ವರ್ಷವಾಗಿದ್ದರೂ ಸರಕಾರ ನೌಕರರು ನಿವೃತ್ತರಾಗುವ ವರೆಗೆ ಅಂದರೆ 36-38 ವರ್ಷದ ವರೆಗೆ ಸೇರಿ ಸುಮಾರು 2,500 ಕೋ.ರೂ.ಗೂ ಮಿಕ್ಕಿ ದ ಮೊತ್ತವನ್ನು ಬಿಎಸ್ಸೆನ್ನೆಲ್ ಸಂಸ್ಥೆಯಿಂದ ಸಂಗ್ರಹ ಮಾಡಲಾಗಿದೆ ಎಂದು ಅಸೋಸಿಯೇಶನ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.