ಮೋದಿಯಿಂದಾಗಿ ದೇಶಕ್ಕೆ ಉನ್ನತ ಸ್ಥಾನ: ಸಂಸದ ನಳಿನ್
Team Udayavani, May 28, 2018, 1:01 PM IST
ಸವಣೂರು: ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯುವಂತಾಗಿದೆ.ಅಭಿವೃದ್ದಿಯ ದೂರದೃಷ್ಟಿಯುಳ್ಳ ಚಿಂತನೆಯಿಂದ ದೇಶದಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ.
ಪಾರಂಪರ್ಯ ಆಡಳಿತಕ್ಕೆ ಬಿಜೆಪಿ ಕೊನೆ ಹಾಡಿದ್ದು ದೇಶಕ್ಕಾಗಿ 18 ಗಂಟೆ ಕೆಲಸ ಮಾಡುವ ಪ್ರಧಾನಿ ಸಿಕ್ಕಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಪಾಲ್ತಾಡಿಯ ಕುಂಜಾಡಿಯಲ್ಲಿ ನಡೆದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 4ನೇ ವರ್ಷಾಚರಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರಣಕರ್ತರಾದ ಕಾರ್ಯಕರ್ತರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಟ್ಟಿಗೆ ಚುನಾವಣೆ
ಗ್ರಾ.ಪಂ.ನಿಂದ ಹಿಡಿದು ಲೋಕಸಭೆಯವರೆಗೂ ಅತೀ ಹೆಚ್ಚು ಬಿಜೆಪಿ ಬೆಂಬಲಿರು ಜನಪ್ರತಿನಿಧಿಗಳಿದ್ದಾರೆ. ಆರೋಗ್ಯ ವಿಮೆ, ಜೀವ ವಿಮೆ, ಜನಧನ್ ಯೋಜನೆ, ಉಜ್ವಲ ಯೋಜನೆ ಮೊದಲಾದ ಯೋಜನೆಗಳು ಕಟ್ಟಕಡೆಯ ನಾಗರಿಕನಿಗೂ ತಲುಪಿವೆ. ಎಲ್ಲ ಹಳ್ಳಿಗಳೂ ವಿದ್ಯುದಿಕರಣಗೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಹುದಿನ ಉಳಿಯುವುದಿಲ್ಲ. ಮುಂದೆ ಲೋಕಸಭೆ-ವಿಧಾನಸಭೆಗೆ ಜತೆಯಲ್ಲೇ ಚುನಾವಣೆ ನಡೆಯಲಿದೆ ಎಂದರು.
ನಾಯಕರ ಶ್ರಮ
ಜಿಲ್ಲಾ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಇಂದು ಬಿಜೆಪಿ ಬಲಿಷ್ಠವಾಗಿದ್ದರೆ ಅದಕ್ಕೆ ಹಿರಿಯ ಬಿಜೆಪಿ ಕಾರ್ಯಕರ್ತರ ಶ್ರಮ ಹಾಗೂ ತ್ಯಾಗದ ಫಲ. ಪಾಲ್ತಾಡಿಯಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸಿದ ಹಿರಿಯರಾದ ಬಿ.ಕೆ. ರಮೇಶ್ ಮೊದಲಾದವರ ಶ್ರಮದ ಪ್ರತಿಫಲ ನಾವು ಈಗ ಪಡೆಯುತ್ತಿದ್ದೇವೆ ಎಂದರು. ದಿನೇಶ್ ಮೆದು, ಹಿರಿಯ ಮುಂದಾಳು ಬಿ.ಕೆ. ರಮೇಶ್ ಶುಭ ಹಾರೈಸಿದರು.
ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್, ಸದಸ್ಯರಾದ ಸತೀಶ್ ಅಂಗಡಿಮೂಲೆ, ಸತೀಶ್ ಬಲ್ಯಾಯ, ಪ್ರಕಾಶ್ ಕುದ್ಮನಮಜಲು, ಗಿರಿಶಂಕರ ಸುಲಾಯ, ಪಾಲ್ತಾಡಿ ಬೂತ್ ಸಮಿತಿ ಕಾರ್ಯದರ್ಶಿ ಸುಧೀರ್ ಕುಮಾರ್ ರೈ ಕುಂಜಾಡಿ, ಸುಕೇಶ್ ಕುಮಾರ್ ರೈ ಕುಂಜಾಡಿ, ಹರೀಶ್ ರೈ ಮಂಜುನಾಥನಗರ, ಉದಯ ಬಿ.ಆರ್., ತಾರೇಶ್ ರೈ ಕುಂಜಾಡಿ, ಸತ್ಯಪ್ರಕಾಶ್ ಶೆಟ್ಟಿ, ನಿತ್ಯಪ್ರಸಾದ್, ಸಂತೋಷ್ ಕುಮಾರ್, ಸುರೇಶ್ ದೋಳ, ಶ್ರೇಯಸ್ ರೈ ಬರೆಮೇಲು, ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ದೀಕ್ಷಿತ್ ಜೈನ್, ಪದ್ಮಪ್ರಸಾದ್ ಆರಿಗ ಪಂಚೋಡಿ, ಶೋಭಾ ಗಣೇಶ್ ಶೆಟ್ಟಿ,ಸುಧಾಕರ ರೈ ಕುಂಜಾಡಿ, ಪ್ರವೀಣ್ ಪಾಲ್ತಾಡಿ, ರೋಹಿತ್ ರೈ ಕುಂಜಾಡಿ ಮೊದಲಾದವರಿದ್ದರು.
ಮಲ್ಲಿಕಾ ಎಲ್. ಶೆಟ್ಟಿ ಪ್ರಾರ್ಥಿಸಿದರು. ಪಾಲ್ತಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ಸ್ವಾಗತಿಸಿ, ಬೂತ್ 70ರ ಅಧ್ಯಕ್ಷ ಪ್ರಸಾದ್ ರೈ ಬೈಲಾಡಿ ವಂದಿಸಿದರು. ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ. ಅವರು ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.