ಶತಾಯುಷಿ ಶಾಲೆಯ ಛಾವಣಿ ಶಿಥಿಲ
Team Udayavani, Oct 25, 2017, 4:26 PM IST
ಕಂಬಳಬೆಟ್ಟು: ವಿಟ್ಲಮುಟ್ನೂರು ಗ್ರಾಮದ ಕಂಬಳಬೆಟ್ಟು ಹಿ.ಪ್ರಾ. ಶಾಲೆಯು ಶತಮಾನೋತ್ಸವ ಆಚರಿಸುವ ಸಿದ್ಧತೆಯಲ್ಲಿದೆ. ಆದರೆ ಶಾಲೆಯ ಒಂದು ಕಟ್ಟಡದ ಛಾವಣಿ ಅಪಾಯಕಾರಿ ಸ್ಥಿತಿಯಲ್ಲಿದೆ. ಮಕ್ಕಳು, ಶಿಕ್ಷಕರು ಇದರೊಳಗೆ ಇರುವುದೇ ಅಪಾಯ ಎಂದು ಹೆತ್ತವರು ಭಯ ವ್ಯಕ್ತಪಡಿಸಿದ್ದಾರೆ.
ಛಾವಣಿಯ ಒಂದು ಮರದ ಪಕ್ಕಾಸು ಕೆಳಗೆ ಬಿದ್ದಿದೆ. ಇನ್ನೂ ಒಂದು ಬೀಳುವ ಹಂತದಲ್ಲಿದೆ. ಛಾವಣಿ ಪೂರ್ತಿಯಾಗಿ ಬೀಳುವ ಸಾಧ್ಯತೆಯಿದ್ದು, ಸದ್ಯ ಅಲ್ಲಿನ ತರಗತಿಯನ್ನು ಅದೇ ಕಟ್ಟಡದ ಮತ್ತೂಂದು ಭಾಗಕ್ಕೆ ವರ್ಗಾಯಿಸಲಾಗಿದೆ.
ಶಾಲೆಯ ಪ್ರವೇಶ ದ್ವಾರದ ಎಡ ಭಾಗದಲ್ಲಿರುವ ಕಟ್ಟಡ, ಛಾವಣಿ ಶಿಥಿಲಗೊಂಡಿದೆ. ಈ ಕಟ್ಟಡಕ್ಕೆ ಸುಮಾರು 40-50
ವರ್ಷಗಳಾಗಿರಬಹುದು. ಛಾವಣಿ ಮೇಲ್ಭಾಗದಲ್ಲಿ ಉಂಟಾಗಿರುವ ಏರುತಗ್ಗು ಗಳು ಅಪಾಯವನ್ನು ಸೂಚಿಸುತ್ತವೆ. ಪಕ್ಕಾಸುಗಳು ಶಿಥಿಲಗೊಂಡಿವೆ. ಗೋಡೆಯೂ ಸುಭದ್ರವಾಗಿಲ್ಲ. ಆದ್ದರಿಂದ ಅಪಾಯವನ್ನು ಅರಿತು, ಇಲಾಖೆಯ ಅಧಿಕಾರಿಗಳು ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಕ್ಕಳ ಹೆತ್ತವರು ಮತ್ತು ಪೋಷಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.