ಸಿಇಟಿ: ನಗರದ 13 ಕೇಂದ್ರಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು
Team Udayavani, Apr 19, 2018, 10:12 AM IST
ಮಹಾನಗರ: ಮೆಡಿಕಲ್ ಹಾಗೂ ಎಂಜಿನಿಯರಿಂಗ್ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಪ.ಪೂ. ಶಿಕ್ಷಣ ಇಲಾಖೆಯು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುತ್ತಿದ್ದು, ಬುಧವಾರ ನಗರದ ಒಟ್ಟು 13 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಬೆಳಗ್ಗೆ ಹಾಗೂ ಮಧ್ಯಾಹ್ನ ಎರಡು ವಿಷಯಗಳಲ್ಲಿ ಪರೀಕ್ಷೆ ಬರೆದಿದ್ದಾರೆ.
ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಮೂರು, ಮೂಡಬಿದಿರೆಯಲ್ಲಿ ಎಂಟು ಹಾಗೂ ಉಜಿರೆಯಲ್ಲಿ ಎರಡು ಕೇಂದ್ರಗಳು ಸಹಿತ ಒಟ್ಟು 26 ಕೇಂದ್ರಗಳಲ್ಲಿ ಒಟ್ಟು 14,448 ಮಂದಿ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಎ.19ರಂದು ಕೊನೆಯ ದಿನದ ಪರೀಕ್ಷೆ ನಡೆಯಲಿದೆ.
ಈ ಬಾರಿ ನಗರದಲ್ಲಿ ಬಂಟ್ಸ್ ಹಾಸ್ಟೆಲ್‌ನ ರಾಮಕೃಷ್ಣ ಕಾಲೇಜು ಹೊಸದಾಗಿ ಸೇರ್ಪಡೆಗೊಂಡ ಸಿಇಟಿ ಕೇಂದ್ರ ಆಗಿರುತ್ತದೆ. ಎ. 19ರಂದು ಬೆಳಗ್ಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ ಬುಧವಾರ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ ಎಂದು ಪ್ರಭಾರ ಡಿಡಿಪಿಯು ಎಲ್ವಿರಾ ಫಿಲೋಮಿನಾ ಅವರು ತಿಳಿಸಿದ್ದಾರೆ.
ಹಾಜರಾತಿ
ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಜೀವಶಾಸ್ತ್ರ ಪರೀಕ್ಷೆಗೆ ಒಟ್ಟು 14, 419 ಮಂದಿ ನೋಂದಾಯಿಸಿಕೊಂಡಿದ್ದು, 9, 751 ಮಂದಿ ಪರೀಕ್ಷೆ ಬರೆದು 4, 668 ಮಂದಿ ಗೈರುಹಾಜರಾಗಿದ್ದಾರೆ. ಅಪರಾಹ್ನ ಗಣಿತ ಪರೀಕ್ಷೆಗೆ ಒಟ್ಟು 14, 419 ಮಂದಿ ನೋಂದಾಯಿಸಿಕೊಂಡಿದ್ದು, 13, 984 ಮಂದಿ ಪರೀಕ್ಷೆ ಬರೆದು 435 ಮಂದಿ ಗೈರು ಹಾಜರಾಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.