ಜು. 16ರಂದು ಚಂದ್ರಗ್ರಹಣ ದೇವಸ್ಥಾನಗಳ ಸೇವೆಯಲ್ಲಿ ವ್ಯತ್ಯಯ
Team Udayavani, Jul 15, 2019, 5:39 AM IST
ಸುಬ್ರಹ್ಮಣ್ಯ: ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು. 16ರಂದು ಪೂಜಾ ಅವಧಿಯಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.
ರಾತ್ರಿ 7ಕ್ಕೆ ನಡೆಯುವ ಮಹಾಪೂಜೆಯನ್ನು ಸಂಜೆ 6.30ಕ್ಕೆ ನಡೆಸಲಾಗುತ್ತದೆ. 7 ಗಂಟೆಯ ಬಳಿಕ ಭಕ್ತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲ. ಸಂಜೆಯ ಆಶ್ಲೇಷಾ ಬಲಿ ಸೇವೆ ಹಾಗೂ ರಾತ್ರಿಯ ಭೋಜನ ವ್ಯವಸ್ಥೆಯೂ ಇರುವುದಿಲ್ಲ. ಬೆಳಗ್ಗಿನಿಂದ ಮಧ್ಯಾಹದ ವರೆಗಿನ ಪೂಜಾ ಅವಧಿ ಮತ್ತು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಬದಲಾವಣೆಯನ್ನು ಅರಿತು ಭಕ್ತರು
ಸಹಕರಿಸ ಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಕಟೀಲು
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾತ್ರಿಯ ಹೂವಿನ ಪೂಜೆ, ರಂಗಪೂಜೆ ಇತ್ಯಾದಿ ಯಾವುದೇ ವಿಶೇಷ ಸೇವೆಗಳು ಮತ್ತು ರಾತ್ರಿ ಅನ್ನದಾನ ಇರುವುದಿಲ್ಲ. ಮಹಾಪೂಜೆ ಎಂದಿನಂತೆ ರಾತ್ರಿ 8 ಗಂಟೆಗೇ ನಡೆಯಲಿದೆ.
ಕೊಲ್ಲೂರು
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಗ್ರಹಣ ಕಾಲದಲ್ಲಿ ದೇವರಿಗೆ ಶತರುದ್ರಾಭಿಷೇಕ ನಡೆಯಲಿದೆ. ರಾತ್ರಿ ಮಹಾಪೂಜೆ ಎಂದಿನಂತೆ 9 ಗಂಟೆಗೆ ನಡೆಯಲಿದೆ.
ಭಕ್ತರಿಗೆ ಅನ್ನಪ್ರಸಾದದ ಬದಲು ಫಲಾಹಾರ ವಿತರಣೆ ನಡೆಯಲಿದೆ. ಗ್ರಹಣಕಾಲದಲ್ಲೂ ದೇವರದರ್ಶನಕ್ಕೆ ಅವಕಾಶವಿದೆ.
ಉಡುಪಿ ಶ್ರೀಕೃಷ್ಣ ಮಠ
ಉಡುಪಿ: ಮಂಗಳವಾರ ರಾತ್ರಿ 1.33ರಿಂದ ಮುಂಜಾವ 4.32ರ ವರೆಗೆ ನಡೆಯುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠ, ಅನಂತೇಶ್ವರ ಹಾಗೂ ಚೌಂದ್ರಮೌಳೇಶ್ವರ ದೇವಸ್ಥಾನಗಳು ಆ ಹೊತ್ತಿನಲ್ಲಿಯೂ ತೆರೆದಿರಲಿವೆ. ಗ್ರಹಣದ ವೇಳೆ ಜಪ, ಸ್ತೋತ್ರ ಪಠಣ ಇತ್ಯಾದಿ ನಿರಂತರವಾಗಿ ನಡೆಯಲಿವೆ. ಭಕ್ತರು ದೇವರ ದರುಶನ ಪಡೆಯಬಹುದಾಗಿದೆ. ಗ್ರಹಣ ಮೋಕ್ಷದ ಬಳಿಕ ಅಭಿಷೇಕ, ಪೂಜೆ ನೆರವೇರಲಿದೆ.
ಧರ್ಮಸ್ಥಳದಲ್ಲಿ ಬದಲಾವಣೆ ಇಲ್ಲ
ಬೆಳ್ತಂಗಡಿ: ಚಂದ್ರಗ್ರಹಣ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ಪೂಜೆ ಮತ್ತು ದೇವರ ದರ್ಶನ ಇರುತ್ತದೆ. ಚಂದ್ರಗ್ರಹಣ ಮಧ್ಯರಾತ್ರಿ ಆಗುವುದರಿಂದ ರಾತ್ರಿ 9 ಗಂಟೆ ತನಕವೂ ಅನ್ನಛತ್ರದಲ್ಲಿ ಎಂದಿನಂತೆ ಅನ್ನ ದಾಸೋಹವಿರಲಿದೆ.
“ನೂರು ಪಟ್ಟು ಫಲ ಪ್ರಾಪ್ತಿ’
ಗ್ರಹಣ ವೇಳೆ ದೇವರ ಧ್ಯಾನ, ಜಪ, ದೇವರ ದರುಶನ ಮಾಡಿದರೆ ಇದರಿಂದ ದೊರೆಯುವ ಫಲ ಬೇರೆ ದಿನಗಳಿಗಿಂತ ನೂರುಪಟ್ಟು ಅಧಿಕ. ಸಂಜೆ 6 ಗಂಟೆಯ ಅನಂತರ ಗ್ರಹಣ ಮೋಕ್ಷದವರೆಗೆ ಆಹಾರ ಸೇವಿಸದಿದ್ದರೆ ಉತ್ತಮ ಎಂದು ಉಡುಪಿ ಅನಂತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ ಐತಾಳ ಅವರು ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.