ಭಾರೀ ಮಳೆ: ಚಾರ್ಮಾಡಿ ಘಾಟಿ ಸಂಚಾರ ಸ್ಥಗಿತ
Team Udayavani, Jun 13, 2018, 1:40 AM IST
ಬೆಳ್ತಂಗಡಿ: ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದ್ದು, ಚಾರ್ಮಾಡಿ ಘಾಟಿ ಸಂಚಾರ ಸ್ಥಗಿತಗೊಂಡಿದೆ. ಮಂಗಳವಾರ ಬೆಳಗ್ಗಿನಿಂದ ಜನತೆ ಸಮಸ್ಯೆಯಲ್ಲಿ ನರಳುವಂತಾಯಿತು. ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದ್ದು, ನದಿ-ತೊರೆಗಳು ತುಂಬಿ ಹರಿಯುತ್ತಿವೆ. ಉಜಿರೆಯಲ್ಲಿ ಚರಂಡಿ ಸಮಸ್ಯೆ ಸೋಮವಾರ ನಿವಾರಿಸಿದ್ದು, ಚರಂಡಿಯಿಂದ ತೆಗೆದು ರಸ್ತೆ ಬದಿಗೆ ಹಾಕಲಾಗಿದ್ದ ಹೂಳು ಮತ್ತೆ ರಸ್ತೆಯಲ್ಲಿ ಹರಿದು ಅಪಾಯಕಾರಿಯಾಗಿ ಕಂಡುಬಂತು. ಸಮಸ್ಯೆ ನಿವಾರಣೆಗಾಗಿ ಕಾರ್ಮಿಕರು ಮತ್ತೆ ರಸ್ತೆಯಿಂದ ಬದಿಗೆ ಹಾಕುವಂತಾಯಿತು.
ರಸ್ತೆಯಲ್ಲೇ ನೀರು
ಉಜಿರೆ ಬಳಿ ನೀರು ಚರಂಡಿಯಲ್ಲಿ ತುಂಬಿ ಸತತ ಐದನೇ ದಿನವೂ ರಸ್ತೆಯಲ್ಲಿ ಹರಿಯಿತು. ಮಧ್ಯಾಹ್ನ ಬಳಿಕ ಮತ್ತೆ
ಚರಂಡಿ ಅಳವಡಿಕೆ ಕಾರ್ಯ ಮುಂದುವರಿದಿದೆ. ಸಾರ್ವಜನಿಕರು ಸತತ ಸಮಸ್ಯೆ ಅನುಭವಿಸುವಂತಾಗಿದೆ.
ನದಿಗಳಲ್ಲಿ ನೀರು ಹೆಚ್ಚಳ
ಸೋಮಾವತಿ ಹಾಗೂ ನೇತ್ರಾವತಿ ನದಿಗಳಲ್ಲಿ ಮಂಗಳವಾರವೂ ನೀರಿನ ಹರಿವು ಹೆಚ್ಚಾಗಿದ್ದು ಕಂಡುಬಂತು. ನದಿ – ತೊರೆಗಳಲ್ಲೂ ನೀರಿನ ಹರಿವು ಹೆಚ್ಚಾಗಿದೆ. ಕಕ್ಕಿಂಜೆ ಬಳಿಯ ಕತ್ತರಿಗುಡ್ಡ ರಸ್ತೆ ಕುಸಿಯುವ ಹಂತದಲ್ಲಿದೆ.
ಜಲಪಾತದ ಸೊಬಗು
ಚಾರ್ಮಾಡಿ ಘಾಟಿಯಲ್ಲಿ ಜಲಪಾತಗಳು ಗರಿಗೆದರಿದ್ದು, ಪ್ರಯಾಣಿಕರನ್ನು ಆಕರ್ಷಿಸುತ್ತಿವೆ. ಆದರೆ ನಿರ್ವಹಣ ಕಾಮಗಾರಿ ನಡೆಯಲಿರುವುದರಿಂದ ಕೆಲವು ದಿನ ಪ್ರವಾಸಿಗರು ಕಾಯಬೇಕಾದ ಪರಿಸ್ಥಿತಿ ಉಂಟಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.