![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 31, 2018, 10:06 AM IST
ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಘನ ವಾಹನ ಸಂಚಾರದ ಕುರಿತು ಹಲವು ಗೊಂದಲಗಳಿದ್ದು, ಆರು ಚಕ್ರಗಳ ಸರಕು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಗುರುವಾರ ದ.ಕ. ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಎರಡು ಆ್ಯಕ್ಸೆಲ್ ಇರುವ 6 ಚಕ್ರದ ಲಾರಿಗಳು, ಗರಿಷ್ಠ 20 ಅಡಿ ಉದ್ದ ಹಾಗೂ 16 ಟನ್‌ಗಿಂತ ಕಡಿಮೆ ಇರುವ ಸರಕು ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡುವಂತೆ ಆದೇಶ ನೀಡಿದ್ದಾರೆ. ಪೊಲೀಸರು ಘಾಟಿ ರಸ್ತೆಯಲ್ಲಿ ತೆರಳದಂತೆ ಗುರುವಾಯನಕೆರೆಯಲ್ಲಿ ಲಾರಿಗಳನ್ನು ತಡೆದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಈ ಭಾಗದಲ್ಲಿ ಪೂರ್ತಿ ಲಾರಿಗಳು ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬೆಳ್ತಂಗಡಿ ತಹಶೀಲ್ದಾರ್ ಮದನ್ ಮೋಹನ್ ಸ್ಥಳಕ್ಕೆ ತೆರಳಿ ಲಾರಿಗಳಿಗೆ ಘಾಟಿ ರಸ್ತೆಯ ಮೂಲಕ ತೆರ ಳುವುದಕ್ಕೆ ಸೂಚನೆ ನೀಡಿದರು. ಬಳಿಕ 6 ಚಕ್ರಗಳ ಸರಕು ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಹೊಸ ಆದೇಶ ನೀಡಿದ್ದಾರೆ.
ಗುರುವಾರವೂ ಲಾರಿಗಳು ಸಹಿತ ಹೆಚ್ಚಿನ ವಾಹನಗಳು ಚಾರ್ಮಾಡಿ ಘಾಟಿಯಲ್ಲಿ ಸಂಚರಿ ಸಿದ್ದು, ಕೊಂಚ ಟ್ರಾಫಿಕ್ ಸಮಸ್ಯೆ ಉಂಟಾ ಗಿತ್ತು. ವಾಹನಗಳ ನಿಧಾನ ಗತಿಯ ಸಂಚಾರ ದಿಂದಲೂ ತೊಂದರೆಯಾಗಿತ್ತು.
You seem to have an Ad Blocker on.
To continue reading, please turn it off or whitelist Udayavani.