ಚಾರ್ಮಾಡಿಯಲ್ಲಿ ರಸ್ತೆಗಿಳಿದಿವೆ ಕಲ್ಲುಬಂಡೆ
Team Udayavani, Aug 15, 2019, 6:00 AM IST
ಬೆಳ್ತಂಗಡಿ: ಪಶ್ಚಿಮ ಘಟ್ಟ ಸಾಲಿನಲ್ಲಿ ಮಳೆ – ಪ್ರವಾಹದ ಅವಾಂತರ ಒಂದೊಂದಾಗಿಯೇ ಅನಾವರಣಗೊಳ್ಳುತ್ತಿದೆ. ಘಟ್ಟದ ಸಾಲು ಸಾಲುಗಳಲ್ಲಿ ಜಲಸ್ಫೋಟದಿಂದ ಹೊಸ ಝರಿಗಳು ಸೃಷ್ಟಿಯಾಗಿವೆ.
ಸಾವಿರಾರು ಹೆಕ್ಟೇರ್ ಭೂ ಪ್ರದೇಶದಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಶ್ರೇಣಿಯ ನೂರಕ್ಕೂ ಅಧಿಕ ಸ್ಥಳಗಳಲ್ಲಿ ಕುಸಿತವಾಗಿರುವುದು ಮಾತ್ರವಲ್ಲ; ಈಗಲೂ ಅಲ್ಲಲ್ಲಿ ಸ್ಫೋಟ, ಕಂಪನದ ಅನುಭವಗಳಾಗುತ್ತಿವೆ. ಇದರ ಪ್ರತಿಧ್ವನಿ ಅಲ್ಲಿನ ನಿವಾಸಿಗಳ ಭಯದ ಏದುಸಿರಿನಲ್ಲಿ ಕೇಳಿಸುತ್ತಿದೆ.
ಚಾರ್ಮಾಡಿ ಮತ್ತು ನೆರಿಯ, ಕುಕ್ಕಾವು ಪ್ರದೇಶದಲ್ಲಿ ನಿಂತು ಪಶ್ಚಿಮ ಘಟ್ಟ ಶ್ರೇಣಿಯನ್ನು ವೀಕ್ಷಿಸಿದರೆ ನೂರಕ್ಕೂ ಅಧಿಕ ಹೊಸ ಝರಿಗಳು ಸೃಷ್ಟಿಯಾಗಿರುವುದು ಕಾಣಿಸುತ್ತದೆ. ಈ ಬಗ್ಗೆ ಸ್ಥಳೀಯ ಹಿರಿಯರು ಆತಂಕ ವ್ಯಕ್ತಪಡಿಸುತ್ತಾರೆ, ಇಂಥದ್ದು ಕಂಡುಬಂದಿರುವುದು ಇದೇ ಮೊದಲು ಎಂದು ಉದ್ಗರಿಸುತ್ತಾರೆ.
ಚಾರ್ಮಾಡಿ ರಸ್ತೆಯ 60 ಕಡೆ ಭೂ ಕುಸಿತ
ಚಾರ್ಮಾಡಿ -ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಆಗಿರುವ ಭೂಕುಸಿತದ ಪ್ರಮಾಣ ಈ ರಸ್ತೆಯ ಇತಿಹಾಸದಲ್ಲಿಯೇ ಅತಿ ದೊಡ್ಡದು. ಘಾಟಿ ಆರಂಭವಾಗುವಲ್ಲಿಂದ ಕೊಟ್ಟಿಗೆಹಾರದ ವರೆಗೆ ಸುಮಾರು 60ಕ್ಕೂ ಅಧಿಕ ಕಡೆ ರಸ್ತೆಯೇ ಕುಸಿದಿದೆ ಅಥವಾ ಅದರ ಮೇಲೆ ಗುಡ್ಡ ಬಿದ್ದಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಾಗಿರುವುದು ಪ್ರವಾಹವಲ್ಲ; ಜಲಸ್ಫೋಟ ಅನ್ನುತ್ತಾರೆ ಪರಿಸರ ತಜ್ಞ ದಿನೇಶ್ ಹೊಳ್ಳ. ಮುನ್ನುಗ್ಗಿದ ನೀರಿನ ರಭಸಕ್ಕೆ ರಸ್ತೆಯ ಅಲ್ಲಲ್ಲಿ ಹೊಸ ಝರಿಗಳು ಸೃಷ್ಟಿಯಾಗಿವೆ. ನೀರಿನ ಒತ್ತಡವನ್ನು ತಾಳಲಾರದೆ ಘಟ್ಟದ ಮೇಲ್ಮೈ ಒಡೆದು ರಸ್ತೆಯ ಅಲ್ಲಲ್ಲಿ ಹೊಸ ದಾರಿ ಹುಡುಕಿ ಹರಿಯುತ್ತಿದೆ.
11ನೇ ತಿರುವಿನಲ್ಲಿ ಅಪ್ಪಳಿಸಿದೆ ಬಂಡೆ
ಬಣಕಲ್ ಮತ್ತು ಚಾರ್ಮಾಡಿಯ ಮಧ್ಯ ಭಾಗದ 11ನೇ ತಿರುವಿನ ಝರಿ ಪ್ರದೇಶದಲ್ಲಿ ಬೃಹತ್ ಬಂಡೆ ಮೇಲಿನಿಂದ ಉರುಳಿ ಬಂದು ಅಪ್ಪಳಿಸಿದ್ದರಿಂದ ರಸ್ತೆ ಸುಮಾರು 20 ಅಡಿ ಆಳಕ್ಕೆ ಜಗ್ಗಿ ಛಿದ್ರವಾಗಿದೆ. ಬಂಡೆ ಅಪ್ಪಳಿಸಿದ ರಭಸಕ್ಕೆ ರಸ್ತೆಯ ಅಂಚಿನ ಮೋರಿಗಳ ಕಲ್ಲುಗಳೆಲ್ಲ ಕಳೆದು ಹೋಗಿವೆ. ಬಣಕಲ್ ವ್ಯಾಪ್ತಿಯ ಅಣ್ಣಪ್ಪ ಬೆಟ್ಟ ಮತ್ತು ಇತರೆಡೆಯೂ ಗಂಭೀರ ಹಾನಿಯಾಗಿದೆ.
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.