ಚಾರ್ಮಾಡಿ: 2 ದಿನ ಬಂದ್, ಮಂಗಳವಾರ ಸಂಜೆಯಿಂದಲೇ ಕಾಮಗಾರಿಗೆ ಚಾಲನೆ
Team Udayavani, Jun 13, 2018, 8:52 AM IST
ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿದ್ದರೂ ನಿರ್ವಹಣ ಕಾಮಗಾರಿ ನಡೆಸಲು ಬುಧವಾರ, ಗುರುವಾರ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಸೋಮವಾರ ಸಂಜೆ ಗುಡ್ಡ ಕುಸಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಾತ್ರಿ ಮತ್ತೆ ಭಾರೀ ಪ್ರಮಾಣದಲ್ಲಿ ಒಟ್ಟು 9 ಕಡೆ ಕುಸಿದ ಕಾರಣ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಮಂಗಳವಾರ ಸಂಜೆ ವೇಳೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಿ ಬಳಿಕ ಬಂದ್ ಮಾಡಲಾಯಿತು.
ಕಗ್ಗತ್ತಲ ರಾತ್ರಿಯಲ್ಲಿ ಸುರಿಯುತ್ತಿರುವ ಮಳೆ, ಆಗಾಗ ಸಿಗುತ್ತಿರುವ ಮರ ಬಿದ್ದ, ಗುಡ್ಡ ಕುಸಿತದ ಸುದ್ದಿ. ವಾಹನಗಳಲ್ಲೇ ಬಾಕಿಯಾದ ಜನರಿಗೆ ಮೊಬೈಲ್ ಮೂಲಕ ಸಂಪರ್ಕಿಸಲು ನೆಟ್‌ವರ್ಕ್ ಸಮಸ್ಯೆ, ಹಸಿವು ನೀಗಿಸಲು ಆಹಾರವೂ ಇಲ್ಲದಂತಾಗಿತ್ತು. ಒಟ್ಟು 18 ಗಂಟೆಗಳ ಕಾಲ ಚಾರ್ಮಾಡಿ ಘಾಟ್‌ನಲ್ಲಿ ಕಳೆಯುವಂತಾಯಿತು. ಬೆಳಗ್ಗೆ ಸುಮಾರು 5 ಗಂಟೆಗೆ ಕುಸಿದ ಗುಡ್ಡದಲ್ಲಿದ್ದ ಮರಗಳನ್ನು ಕಡಿದು, 4 ಜೆಸಿಬಿಗಳಿಂದ ಕಾರ್ಯಾಚರಣೆ ನಡೆಸಲಾಯಿತು. ದೊಡ್ಡ ಬಂಡೆ ಕುಸಿದಿದ್ದು, ತೆರವು ಮಾಡಲಾಗಿದೆ. ಸುಮಾರು 1.30ರ ವೇಳೆಗೆ ರಸ್ತೆ ಬಳಕೆಗೆ ಲಭ್ಯವಾದರೂ ಮತ್ತೆ ಸಣ್ಣ ಮಟ್ಟಿನ ಕುಸಿತವಾಯಿತು. ಬಳಿಕ ಜೆಸಿಬಿ ಬಳಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.