ಚಾರ್ಮಾಡಿ: ಮಿನಿ ಬಸ್ ಓಡಾಟಕ್ಕೆ ಸೂಕ್ತ ಸಮಯ
ಪರೀಕ್ಷೆ ನಡೆದರೂ ಆರಂಭವಾಗದ ಸಂಚಾರ
Team Udayavani, Nov 24, 2019, 12:00 AM IST
ಕೊಟ್ಟಿಗೆಹಾರದಲ್ಲಿ ನಿಂತಿರುವ ವಾಹನಗಳ ಸರತಿ ಸಾಲು.
ಬೆಳ್ತಂಗಡಿ: ಪ್ರವಾಹ ಹೊಡೆತದಿಂದ ನಿಧಾನವಾಗಿ ಚೇತರಿಸುತ್ತಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಮಿನಿ ಬಸ್ ಓಡಾಟ ಆರಂಭಿಸಲು ಸಾರ್ವಜನಿಕರ ಆಗ್ರಹ ಕೇಳಿಬರುತ್ತಿದೆ. ಆದರೆ ಪ್ರಾಯೋಗಿಕ ಸಂಚಾರ ನಡೆಸಲಾಗಿದ್ದರೂ ಸಂಚಾರ ಇನ್ನೂ ಆರಂಭವಾಗಿಲ್ಲ. ಈ ನಡುವೆ ಸಮಯ ನಿರ್ಬಂಧದಿಂದಾಗಿ ಪ್ರತಿದಿನ ಇಲ್ಲಿ ವಾಹನಗಳು ಸರತಿ ಸಾಲಿನಲ್ಲಿ ಕಾಯುವಂತಾಗಿದೆ.
ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಿರುವುದರಿಂದ ದೂರದೂರುಗಳಿಂದ ಬರುವ ವಾಹನಗಳು ರಸ್ತೆಯಲ್ಲೇ ರಾತ್ರಿ ಕಳೆಯುವಂತಾಗಿದೆ. ತುರ್ತು ಸಂಚಾರಕ್ಕಾಗಿ ಮಿನಿ ಬಸ್ ಓಡಾಟ ನಡೆಸುವ ಅವಕಾಶವಿದ್ದರೂ ಚಿಕ್ಕಮಗಳೂರು ಮತ್ತು ದ.ಕ. ಜಿಲ್ಲಾಧಿಕಾರಿಗಳು ಮೌನ ವಹಿಸಿರುವ ವಿರುದ್ಧ ಸಾರ್ವಜನಿಕರಿಂದ ಅಸಮಾಧಾನದ ಮಾತು ಕೇಳಿಬರುತ್ತಿದೆ.
ಧರ್ಮಸ್ಥಳ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಮಿನಿ ಬಸ್ ಓಡಾಟ ಆರಂಭಿಸುವ ನಿರೀಕ್ಷೆ ಇತ್ತಾದರೂ ಅದು ಈಡೇರಿಲ್ಲ.
ಪ್ರಾಯೋಗಿಕ ಪರೀಕ್ಷೆ
ಮಂಗಳೂರು ಹೊರತುಪಡಿಸಿ ಧರ್ಮಸ್ಥಳ, ಪುತ್ತೂರು, ಬಿ.ಸಿ. ರೋಡ್, ಚಿಕ್ಕಮಗಳೂರು ಸೇರಿದಂತೆ ಯಾವುದೇ ಕೆಎಸ್ಸಾರ್ಟಿಸಿ ಡಿಪೋದಲ್ಲಿ ಮಿನಿ ಬಸ್‌ಗಳಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಚಿಕ್ಕಮಗಳೂರು ಕೆಎಸ್ಸಾರ್ಟಿಸಿ ಅಧಿಕಾರಿಗಳು ಶಿವಮೊಗ್ಗ ಡಿಪೋ ಸಹಾಯದಿಂದ ಮಿನಿ ಬಸ್ ತರಿಸಿ ನ.19ರಂದು ಪ್ರಾಯೋಗಿಕ ಪರೀಕ್ಷೆ ನಡೆಸಿದ್ದರು.
ಪ್ರಾಯೋಗಿಕ ಸಂಚಾರ
ರಾ.ಹೆ. ಅಧಿಕಾರಿಗಳ ಉಪಸ್ಥಿತಿಯಲ್ಲಿ ಈಚೆಗೆ 35 ಸೀಟರ್‌ನ ಬಸ್ ಮೂಡಿಗೆರೆಯಿಂದ ಅಣ್ಣಪ್ಪ ಬೆಟ್ಟದವರೆಗೆ ಸುಮಾರು 13 ಕಿ.ಮೀ. ದೂರ ಪ್ರಾಯೋಗಿಕ ಸಂಚಾರ ನಡೆಸಿದೆ. ಸಂಚಾರ ಭದ್ರತೆ ಅನುಗುಣವಾಗಿ ರಾ.ಹೆ. ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಸಮಕ್ಷಮ ಒಪ್ಪಿಗೆ ಸಿಕ್ಕಲ್ಲಿ ಮೂಡಿಗೆರೆಯಿಂದ ಉಜಿರೆಯ ವರೆಗೆ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಆವಶ್ಯಕತೆಗೆ ಅನುಗುಣವಾಗಿ ಮಿನಿ ಬಸ್ ಓಡಾಟ ನಡೆಸಲು ಸಿದ್ಧರಿರುವುದಾಗಿ ಚಿಕ್ಕಮಗಳೂರು ಡಿಪೋ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಆದೇಶ ಇನ್ನೂ ಸಿಕ್ಕಿಲ್ಲ.
ರಸ್ತೆಯಲ್ಲಿ ನಿದ್ದೆ, ಉಪವಾಸ
ದಕ್ಷಿಣ ಕನ್ನಡ, ಉಡುಪಿಯ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರು ಮಾತ್ರವಲ್ಲದೆ ಆಸ್ಪತ್ರೆಗೆ ದಾಖಲಾಗು ವಂತಹ ತುರ್ತು ಸಂದರ್ಭ ಗಳಲ್ಲಿ ಕೂಡ ರಾತ್ರಿ 6ರ ಬಳಿಕ ತೆರಳಲು ಅವಕಾಶ ಇಲ್ಲದಿರುವುದರಿಂದ ಚಾರ್ಮಾಡಿ ಆರಂಭ ಮತ್ತು ಕೊಟ್ಟಿಗೆರೆ ಚೆಕ್‌ಪೋಸ್ಟ್ ಗಳಲ್ಲಿ ವಾಹನಗಳು ಸರತಿಯ ಸಾಲಿನಲ್ಲಿ ಉಳಿಯುತ್ತಿವೆ. ಶನಿವಾರ ಬೆಳಗ್ಗೆ ಕೊಟ್ಟಿಗೆಹಾರದಲ್ಲಿ ಸುಮಾರು 200ಕ್ಕೂ ಅಧಿಕ ವಾಹನಗಳು ಕಂಡುಬಂದಿದ್ದವು. ಇತ್ತ ಸಂಜೆ 6ರ ಬಳಿಕ ಲಘುವಾಹನ ಓಡಾಟಕ್ಕೂ ಜಿಲ್ಲಾಡಳಿತ ಅವಕಾಶ ನೀಡದಿರುವುದರಿಂದ ಶೌಚಾಲಯ ಸೇರಿದಂತೆ ವಸತಿ ಸೌಲಭ್ಯವಿಲ್ಲದೆ ಕಾಡಿನ ಮಧ್ಯೆ ದಿನ ಕಳೆಯುವಂತಾಗಿದೆ. ಡಿಸಿಗಳು ತುರ್ತು ಕ್ರಮಕ್ಕೆ ಮುಂದಾದಲ್ಲಿ ಜನರ ವನವಾಸ ತಪ್ಪಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.