ಕೈ ಬೆರಳಲ್ಲೆ ಸಮಯ ನೋಡಿ!
Team Udayavani, May 18, 2018, 3:09 PM IST
ದೊಡ್ಡ ವಿನ್ಯಾಸದ ದುಬಾರಿ ಬೆಲೆಯ ಆಭರಣಗಳಿಗಿಂತ ಆಕರ್ಷಕವಾಗಿ ಕಾಣುವ ಫಿಂಗರ್ ರಿಂಗ್‌ಗಳೆಂದರೆ ಬಹುತೇಕ ಯುವತಿಯರು ಹಾಗೂ ಮಹಿಳೆಯರು ಇಷ್ಟಪಡುತ್ತಾರೆ. ಕೆಲವು ಮಂದಿ ಷ್ಯಾಷನ್ ಗಾಗಿ ಉಂಗುರಗಳನ್ನು ಬಳಸಿದರೆ ಇನ್ನೂ ಕೆಲವರು ಸ್ನೇಹ, ಪ್ರೀತಿಯ ಸಂಕೇತವಾಗಿ ಉಂಗುರ ಧರಿಸಿಕೊಳ್ಳುತ್ತಾರೆ.
ಬ್ರೇಸ್‌ಲೇಟ್ ಹಾಗೂ ಇನ್ನಿತರ ಆ್ಯಕ್ಸೆಸರಿಗಳೊಂದಿಗೆ ಫಿಂಗರ್ ರಿಂಗ್ಸ್ ಕೂಡ ಕೈಗಳ ಸೌಂದರ್ಯವನ್ನು ಹೆಚ್ಚಿಸುವುದರ ಮೂಲಕ ನಿಮ್ಮ ಪರ್ಸನಾಲಿಟಿಗೂ ಮೆರುಗು ನೀಡುತ್ತದೆ. ಬದ್ಧತೆಯ ಸಂಕೇತ ಎಂದು ಕರೆಸಿಕೊಳ್ಳುವ ಉಂಗುರಗಳು ಈಗ ಫ್ಯಾಷನ್ ಲೋಕದಲ್ಲಿ ಗಮನ ಸೆಳೆಯುತ್ತಿದೆ.
ಬೋಲ್ಡ್ ಲುಕ್ಸ್‌ಗಳಿಗಾಗಿ ಅತಿ ದೊಡ್ಡ ಅಳತೆಯ ಉಂಗುರ ಧರಿಸುವುದು ಸಾಮಾನ್ಯ. ಆದರೆ ಈಗ ಬೋಲ್ಡ್ ರಿಂಗ್‌ನೊಳಗೊಂದು ಪುಟ್ಟ ಗಡಿಯಾರ ಎಲ್ಲರ ಗಮನ ಸೆಳೆಯುತ್ತಿದೆ. ಹೊರಗಿನ ಜನಗಳಿಗೆ ಅದು ಆಕರ್ಷಕ ಉಂಗುರವಾದರೂ ಅದರೊಳಗೊಂದು ಗಡಿಯಾರವಿದೆ ಎನ್ನುವ ಯೋಚನೆ ಯಾರಿಗೂ ಬರಲಾರದು. ಪ್ರಸ್ತುತ ಈ ರಿಂಗ್‌ಗಳಲ್ಲೇ ಯುವತಿಯರು ಮಿಂಚುತ್ತಿದ್ದಾರೆ.
ಆಕರ್ಷಕ ಡಿಸೈನ್‌ಗಳಲ್ಲಿ ಫಿಂಗರ್ ರಿಂಗ್ ವಾಚ್
ಸಮಯ ನೋಡಲು ಗಡಿಯಾರ ಬಳಕೆಯಾಗುತ್ತಿದ್ದ ಕಾಲ ಬದಲಾಗಿ ಅದೆಷ್ಟೋ ದಶಕಗಳು ಕಳೆಯಿತು. ಈಗೇನಿದ್ದರೂ ವಾಚ್, ಮೊಬೈಲ್ ಹವಾ. ಅದರಲ್ಲೇ ಸಮಯ ನೋಡಿಕೊಂಡು ಜನ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ತಂತ್ರಜ್ಞಾನ, ಆಲೋಚನೆಗಳು ವೇಗವಾಗಿ ಬದಲಾಗುತ್ತಿವೆ. ನಮ್ಮ ಕೆಲಸಗಳನ್ನು ವೇಗವಾಗಿ ಮಾಡಲು ಮಿಷಿನ್‌ಗಳು ಕಾಲಿಟ್ಟಿವೆ. ಸಮಯ ನೋಡಲು ವಾಚ್ ಗಳನ್ನು ಬಳಸುತ್ತಿದ್ದ ಜನರು ಬದಲಾವಣೆ ಬೇಕು ಎಂದು ಹೊಸ ತಂತ್ರಜ್ಞಾನ, ಫ್ಯಾಷನ್‌ಗೆ ಮೊರೆ ಹೋಗುತ್ತಿದ್ದಾರೆ. ಅದಕ್ಕಾಗಿಯೇ ಉಂಗುರದಷ್ಟೇ ಚಿಕ್ಕದಾದ ಗಡಿಯಾರವನ್ನು ಬೆರಳಿಗೆ ಧರಿಸಿಕೊಂಡು ಸಮಯ ನೋಡುತ್ತಿದ್ದಾರೆ. ಅದು ಗಡಿಯಾರ ಎಂದು ತಿಳಿಯದಿರಲು ಉಂಗುರದಂತೆ ಸುಂದರವಾಗಿ ವಿನ್ಯಾಸ ಮಾಡಲಾಗುತ್ತದೆ. ಮೇಲ್ನೋಟಕ್ಕೆ ಅದು ಉಂಗುರದಂತೆ ಭಾಸವಾದರೂ ಅದರೊಳಗೆ ಗಡಿಯಾರ ಇರುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಇದು ಸಮಯ ನೋಡುವ ವಸ್ತುವಿಗಿಂತಲೂ ಹೆಚ್ಚಾಗಿ ಟ್ರೆಂಡಿಯಾಗಿ ಕಾಣುತ್ತದೆ ಎಂಬುದಕ್ಕಾಗಿ ಯುವತಿಯರು, ಮಹಿಳೆಯರು ಫಿಂಗರ್ ರಿಂಗ್ ವಾಚ್‌ಗೆ ಆಕರ್ಷಿತರಾಗುತ್ತಿದ್ದಾರೆ.
ಫಿಂಗರ್ ರಿಂಗ್ ವಾಚ್ ದುಬಾರಿಯಲ್ಲ
ನೋಡಲು ಸುಂದರವಾಗಿ ಕಾಣುವ ಫಿಂಗರ್ ರಿಂಗ್ ವಾಚ್ ದುಬಾರಿ ಇಲ್ಲ. ವಿವಿಧ ಬ್ರ್ಯಾಂಡ್ ಗಳಲ್ಲಿ ಲಭ್ಯವಾಗುವ ವಾಚ್ ಬೆಲೆ 300 ರೂ. ನಿಂದ ಆರಂಭವಾಗುತ್ತದೆ.
ಕಾಲೇಜು ಯುವತಿಯರು ಫಿದಾ
ಫಿಂಗರ್ ರಿಂಗ್ ವಾಚ್‌ಗಳನ್ನು ಹೆಚ್ಚಾಗಿ ಕಾಲೇಜು ಯುವತಿಯರೆ ಬಳಸುತ್ತಿದ್ದು, ತಮಗೆ ಇಷ್ಟವಾಗುವ ಹಾಗೂ ಧರಿಸುವ ಬಟ್ಟೆಗಳಿಗೆ ಒಪ್ಪುವ ಬಣ್ಣದ ರಿಂಗ್‌ಗಳನ್ನು ಧರಿಸಿ ಮಿಂಚುತ್ತಿದ್ದಾರೆ. ಈಗಾಗಲೇ ದೊಡ್ಡ ಗಾತ್ರದ ರಿಂಗ್ ಧರಿಸುವುದು ಟ್ರೆಂಡ್ ಆಗಿರುವುದರಿಂದ ಈ ರಿಂಗ್ ವಾಚ್ ದೊಡ್ಡ ವಿಷಯವಾಗುವುದಿಲ್ಲ. ಆದರೆ ವಾಚ್, ರಿಂಗ್ ಬೇರೆ ಬೇರೆಯಾಗಿ ಧರಿಸಲು ಹಿಂದೆ ಮುಂದೆ ನೋಡುವ ಯುವತಿಯರು ಈಗ ರಿಂಗ್ ವಾಚ್ ಮೂಲಕ ಸುಲಭ ದಾರಿ ಕಂಡುಹಿಡಿದಿದ್ದಾರೆ.
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.