ಮಂಗಳೂರು ಸರ್ಕಿಟ್ ಹೌಸ್ನಲ್ಲಿ ಸಿಎಂ ವಾಸ್ತವ್ಯ
Team Udayavani, Jan 8, 2018, 6:40 AM IST
ಮಂಗಳೂರು: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ರವಿವಾರ ದ.ಕ. ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಗಳನ್ನು ಮುಗಿಸಿ ರಾತ್ರಿ ನಗರದ ಸಕೀìಟ್ ಹೌಸ್ನಲ್ಲಿ ವ್ಯಾಸ್ತವ್ಯ ಹೂಡಿದರು.
ಮುಖ್ಯಮಂತ್ರಿಯಾದ ಬಳಿಕ ಸಿದ್ಧ ರಾಮಯ್ಯ ಅವರದು ಇದೇ ಮೊದಲ ಮಂಗಳೂರು ವಾಸ್ತವ್ಯ. ವೇಳಾಪಟ್ಟಿ ಪ್ರಕಾರ ಸಿಎಂ 7.50ಕ್ಕೆ ಸಕೀìಟ್ ಹೌಸ್ಗೆ ಆಗಮಿಸ ಬೇಕಿತ್ತಾದರೂ ಕಾರ್ಯಕ್ರಮ ಗಳು ತಡವಾದುದು ಹಾಗೂ ಮೃತರ ಮನೆ ಭೇಟಿಯಿಂದ ವಿಳಂಬವಾಗಿತ್ತು.
ಸಿಎಂ ಭೋಜನ: ಸಿಎಂ ಅವರಿಗೆ ಮಂಗಳೂರಿನ ಪ್ರತಿಷ್ಠಿತ ತುಳುನಾಡ ಫುಡ್ ಕ್ಯಾಟರಿಂಗ್ ಅವರ ಖಾದ್ಯಗಳ ವ್ಯವಸ್ಥೆ ಮಾಡಲಾಗಿತ್ತು. ಸಕೀìಟ್ ಹೌಸ್ನಲ್ಲಿ ಅಪ್ಪೆ ಮಿಡಿ ಉಪ್ಪಿನಕಾಯಿ, ತೊಂಡೆ ಹಾಗೂ ಗೇರುಬೀಜ ಪಲ್ಯ, ನೀರು ದೋಸೆ-ನಾಟಿಕೋಳಿಯ ಗಸಿ, ಚಪಾತಿ-ಎಟ್ಟಿ ಗಸಿ, ಬೆಂಡೆಕಾಯಿ ಪುಳಿಮುಂಚಿ, ಅಂಜಲ್ ತವಾ, ಚಿಕನ್ ಬಿರಿಯಾನಿ, ಸಲಾಡ್, ಬಾಸ್ಮತಿ ಅನ್ನ, ಕುಚ್ಚಲಕ್ಕಿ ಅನ್ನ, ಸಾರು, ತೋವೆ, ಮೊಸರು, ಪಾಯಸ, ಐಸ್ಕ್ರೀಮ್, ಹಣ್ಣಿನ ಹೋಳುಗಳು, ಲೆಮನ್ ಟೀ ವ್ಯವಸ್ಥೆ ಮಾಡಲಾಗಿತ್ತು.
ಜ. 8ರಂದು ಬೆಳಗ್ಗೆ ಸಿಎಂ ಅವರ ಉಪಾಹಾರಕ್ಕೆ ಇಡ್ಲಿ ವಡಾ, ಶೀರಾ ಉಪ್ಪಿಟ್ಟು , ನೀರ್ದೋಸೆ, ಚಹಾ-ಕಾಫಿ ವ್ಯವಸ್ಥೆ ಮಾಡ ಲಾಗಿದೆ. ಬೆಳಗ್ಗೆ 10ಕ್ಕೆ ಸಿಎಂ ಅವರು ಹೆಲಿಕಾಪ್ಟರ್ ಮೂಲಕ ಉಡುಪಿ ಜಿಲ್ಲೆಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.