Sullia: ಕಾರ್ಮಿಕ ಕಲ್ಯಾಣ ಮಂಡಳಿಯ ಶಿಶುಪಾಲನ ಕೇಂದ್ರ ಸ್ಥಗಿತ?


Team Udayavani, Aug 27, 2023, 11:58 AM IST

Sullia: ಕಾರ್ಮಿಕ ಕಲ್ಯಾಣ ಮಂಡಳಿಯ ಶಿಶುಪಾಲನ ಕೇಂದ್ರ ಸ್ಥಗಿತ?

ಸುಳ್ಯ: ಕಾರ್ಮಿಕ ಇಲಾಖೆ ಯಡಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳಿ ಗಾಗಿ ರಾಜ್ಯಾದ್ಯಂತ ಇರುವ ಶಿಶು ಪಾಲನ ಕೇಂದ್ರಗಳು ಆ. 31ರಿಂದ ಕಾರ್ಯ ನಿರ್ವಹಿಸುವುದಿಲ್ಲ. ಇಲಾಖೆಯ ದಿಢೀರ್‌ ತೀರ್ಮಾನಕ್ಕೆ ಕಾರ್ಮಿಕರಿಂದ ಅಸಮಾ ಧಾನ ವ್ಯಕ್ತವಾಗಿದೆ.

ಆಡಳಿತಾತ್ಮಕ ಕೆಲಸಗಳನ್ನು ಪರಿಶೀಲಿ ಸುವ ಉದ್ದೇಶದಿಂದ ಆ. 28ರಂದು ಎಲ್ಲ ಶಿಶು ವಿಹಾರಗಳನ್ನು ಮುಚ್ಚಲಾ ಗುವುದು; ಆ. 31ರಿಂದ ಶಾಶ್ವತ ವಾಗಿ ಮುಚ್ಚಲಾಗುವುದು ಎಂದು ಕೇಂದ್ರಗಳ ನಿರ್ವಹಣ ಸಂಸ್ಥೆಯು ಸುಳ್ಯದ ಶಿಶುಪಾಲನ ಕೇಂದ್ರಕ್ಕೆ ಪತ್ರದ ಮೂಲಕ ಮಾಹಿತಿ ನೀಡಿದೆ. ಉಡುಪಿಯ ಕೇಂದ್ರಗಳಿಗೆ ಯಾವುದೇ ಸೂಚನೆ ಈ ತನಕ ಬಂದಿಲ್ಲ ಎನ್ನಲಾಗುತ್ತಿದೆ.

ಕಳೆದ ವರ್ಷ ಆರಂಭ
ನಿರ್ಮಾಣ ಕಾರ್ಮಿಕರ ಮಕ್ಕಳಿಗಾಗಿ 2022ರ ಜೂನ್‌ 10ರಂದು ಸುಳ್ಯ ಸೇರಿದಂತೆ ರಾಜ್ಯದ ವಿವಿಧೆಡೆ ಶಿಶುಪಾಲನ ಕೇಂದ್ರಗಳನ್ನು ಆರಂಭಿಸಲಾಗಿತ್ತು; 5 ಖಾಸಗಿ ಸಂಸ್ಥೆಗಳು ನಿರ್ವಹಿಸುತ್ತಿದ್ದವು. ಶಿಕ್ಷಕಿ ಹಾಗೂ ಸಹಾಯಕಿ ಅಲ್ಲಿದ್ದು, ಕಾರ್ಮಿಕರ ಮಕ್ಕಳನ್ನು ಅಂಗನವಾಡಿಯ ಮಾದರಿಯಲ್ಲೇ ಇಲ್ಲಿ ಪಾಲನೆ ಮಾಡಲಾಗುತ್ತಿತ್ತು. ರಾಜ್ಯದಲ್ಲಿ ಇಂತಹ 143 ಕೇಂದ್ರಗಳಿವೆ.

ಕಾರ್ಮಿಕರ ಅಸಮಾಧಾನ
ಕೇಂದ್ರಗಳ ದಿಢೀರ್‌ ಸ್ಥಗಿತ ತೀರ್ಮಾನವು ಕಾರ್ಮಿಕರಲ್ಲಿ ಗೊಂದಲ ವನ್ನುಂಟು ಮಾಡಿದ್ದು, “ಎಳೆಯ ಮಕ್ಕಳನ್ನು ಏಕಾಏಕಿ ಬೇರೆ ಕಡೆಗೆ ಕಳುಹಿಸ ಬೇಕೆಂದರೆ ಹೇಗೆ ಸಾಧ್ಯ?’ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಕೇಂದ್ರಗಳ ಸಿಬಂದಿಯೂ ಸರಕಾರದ ನಿರ್ಧಾರದಿಂದ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.

ಆರ್ಥಿಕ ಸಮಸ್ಯೆ ಕಾರಣ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿಗಳಿರುವ ಕಾರಣ ಶಿಶುಪಾಲನ ಕೇಂದ್ರಗಳನ್ನು ಮುಚ್ಚುತ್ತಿದ್ದೇವೆ ಎಂದು ಕಾರ್ಮಿಕ ಇಲಾಖೆ ಸಮಜಾಯಿಶಿ ನೀಡಿದರೂ ಆರ್ಥಿಕ ಸಮಸ್ಯೆ ನೈಜ ಕಾರಣ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಶಿಶುಪಾಲನ ಕೇಂದ್ರಗಳನ್ನು ನಿರ್ವಹಿಸುವ ಸಂಸ್ಥೆಗಳಿಗೆ 8 ತಿಂಗಳಿನಿಂದ ಬಿಲ್‌ ಪಾವತಿಯಾಗಿಲ್ಲ. ಕೆಲವು ಕಡೆ ವರ್ಷದಿಂದ ಬಿಲ್‌ ಪಾವತಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಈಗ ಎಲ್ಲೆಡೆ ಅಂಗನವಾಡಿಗಳಿವೆ. ಆದ್ದರಿಂದ ರಾಜ್ಯ ದಲ್ಲಿನ ಶಿಶುಪಾಲನ ಕೇಂದ್ರಗಳ ಸ್ಥಗಿತಕ್ಕೆ ನಿರ್ಧರಿಸಲಾಗಿದೆ. ಕಾರ್ಮಿಕರ ಮಕ್ಕಳ ಸಂಖ್ಯೆ ಹೆಚ್ಚಿದ್ದು ಅಂಗನವಾಡಿಯ ಬೇಡಿಕೆಯಿದ್ದಲ್ಲಿ, ಅಂತಹ ಕಡೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ಕೇಂದ್ರ ಆರಂಭಿಸುತ್ತೇವೆ.
– ಭಾರತಿ ಡಿ. ಸಿಇಒ ಮತ್ತು ಕಾರ್ಯದರ್ಶಿ, ಕರ್ನಾಟಕ ಕಟ್ಟಡ, ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ

– ದಯಾನಂದ ಕಲ್ನಾರ್

ಟಾಪ್ ನ್ಯೂಸ್

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

BY-Vijayendra

Contracter Case: ಸಚಿನ್‌ ಪಾಂಚಾಳ್‌ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

ud-sp

Udupi ಹೊಸ ವರ್ಷಾಚರಣೆ: ಹಾನಿಕಾರಕ ಸಂದೇಶ ಎಚ್ಚರ ವಹಿಸಲು ಎಸ್‌ಪಿ ಸೂಚನೆ

allu arjun

Theatre stampede case: ಅಲ್ಲು ಅರ್ಜುನ್ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ

BJP-Gov

ಪೊಲೀಸ್‌ ಅಧಿಕಾರಿಗಳ ವರ್ತನೆ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಎಂಎಲ್‌ಸಿ ಸಿ.ಟಿ.ರವಿ

1-vote

Delhi; ನಿರಾಶ್ರಿತರಿಂದ ನಾಗರಿಕರು: ಮೊದಲ ಬಾರಿ ಮತ ಚಲಾಯಿಸಲಿರುವ ಪಾಕಿಸ್ಥಾನಿ ಹಿಂದೂಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vp

Vitla; ಅತಿಕಾರಬೈಲು: ವ್ಯಕ್ತಿ ಆತ್ಮಹ*ತ್ಯೆ

1–dddd

Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು

3

Badagannur: ಆರೋಗ್ಯ ಕೇಂದ್ರ, ಆ್ಯಂಬುಲೆನ್ಸ್‌ಗೆ ಗ್ರಾಮಸ್ಥರ ಬೇಡಿಕೆ

2

Bantwal: ಕಂಬಳದ ತೆರೆಮರೆ ಹೀರೊಗಳ ದಾಖಲೀಕರಣ

1(1

Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ  ಇನ್ನೂ ಮೀನ ಮೇಷ ಎಣಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

BY-Vijayendra

Contracter Case: ಸಚಿನ್‌ ಪಾಂಚಾಳ್‌ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ

1-up

Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು

1-vp

Vitla; ಅತಿಕಾರಬೈಲು: ವ್ಯಕ್ತಿ ಆತ್ಮಹ*ತ್ಯೆ

suicide

Shirva: ಬೈಕ್‌ ಢಿಕ್ಕಿ ಹೊಡೆದು ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.