ಮುರಿದ ಸೇತುವೆಯಲ್ಲೇ ಮಕ್ಕಳ ಸಂಚಾರ
Team Udayavani, Jun 18, 2018, 2:20 AM IST
ಕೊಕ್ಕಡ: ಇದು ಸಣ್ಣ ಹೊಳೆಯಾದರೂ ವರ್ಷಪೂರ್ತಿ ನೀರು ಹರಿಯುತ್ತದೆ. ಕೃಷಿಕರಿಗೆ ಜೀವನಾಡಿಯೂ ಆಗಿದೆ. ಆದರೆ, ಇದಕ್ಕೆ ಕಟ್ಟಿದ ಸೇತುವೆ ಎರಡನೇ ಸಲವೂ ಮುರಿದು ಬಿದ್ದಿದ್ದು, ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡೇ ಸೇತುವೆ ದಾಟಿ ಶಾಲೆಗೆ ಹೋಗುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಅಂಚಿನಲ್ಲಿರುವ ಕುಗ್ರಾಮ ಶಿಶಿಲ. ಇಲ್ಲಿನ ಮಕ್ಕಳಿಗೆ ಪ್ರಾ. ಶಿಕ್ಷಣಕ್ಕೆ ಕನಿಷ್ಠ 2 ಕಿ.ಮೀ. ದೂರ ತೆರಳಬೇಕು. ಪ್ರೌಢ ಶಿಕ್ಷಣ ಬೇಕೆಂದರೆ 12 ಕಿ.ಮೀ. ದೂರದ ಅರಸಿನಮಕ್ಕಿಗೇ ಬರಬೇಕು. ಕಾಲೇಜು ಕಲಿಯಬೇಕೆಂದರೆ ನೆಲ್ಯಾಡಿ/ಉಜಿರೆಗೆ 35 ಕಿ.ಮೀ. ದೂರ ಕ್ರಮಿಸಬೇಕು. ಬಸ್ ಗಳೂ ಬೆರಳೆಣಿಕೆ ಸಂಖ್ಯೆಯಲ್ಲಿ ಬರುತ್ತವೆ. ಕಾಯಿಲೆ ಬಿದ್ದರೆ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕು. ವಿದ್ಯುತ್, ದೂರವಾಣಿ ಇದ್ದೂ ಇಲ್ಲದಂತಹ ಸ್ಥಿತಿ.
ಕೃಷಿ ಕುಟುಂಬಗಳು
ಶಿಶಿಲ ಗ್ರಾಮದ ಬಡ್ಲ, ಒಟ್ಲ, ದೇವಸ, ಗುತ್ತು, ಕೋಟೆಬಾಗಿಲು ಪ್ರದೇಶಗಳಲ್ಲಿ 100ಕ್ಕೂ ಹೆಚ್ಚು ಕೃಷಿ ಕುಟುಂಬಗಳಿವೆ. ಹಲವರಿಗೆ ಕೂಲಿ ಕೆಲಸವೇ ಜೀವನಾಧಾರ. ಈ ಕುಟುಂಬಗಳಿಗೆ ಮಳೆಗಾಲ ಬಂದರೆ ಎಷ್ಟು ಖುಷಿಯೇ ಅಷ್ಟೇ ಆತಂಕವೂ ಎದುರಾಗುತ್ತದೆ. ಇದಕ್ಕೆ ಕಾರಣ, ಇಲ್ಲಿ ಹರಿಯುವ ಹೊಳೆ. ವರ್ಷ ಪೂರ್ತಿ ನೀರು ಹರಿಯುವುದರಿಂದ ಹಾಗೂ ಈ ಪ್ರದೇಶದಲ್ಲಿ ಆಳವಾದ ಗುಂಡಿ ಇರುವುದರಿಂದ ಹೊಳೆಯನ್ನು ದಾಟುವುದು ಸಾಧ್ಯವಿಲ್ಲ. ಹೀಗಾಗಿ, ಈ ಹೊಳೆಗೆ ಬಡ್ಲ ಎಂಬಲ್ಲಿ ಏಳೆಂಟು ವರ್ಷಗಳಷ್ಟು ಹಿಂದೆ ಜಿ.ಪಂ. ಅನುದಾನದಲ್ಲಿ ಒಂದು ಕಾಲುಸಂಕ ನಿರ್ಮಿಸಲಾಗಿದೆ. ಕೃಷಿ ಚಟುವಟಿಕೆಗೆ ತೆರಳುವವರು, ಕೂಲಿ ಕೆಲಸಗಾರರು, ವಿದ್ಯಾರ್ಥಿಗಳು, ಆಸ್ಪತ್ರೆಗೆ ತೆರಳುವವರು ಎಲ್ಲರಿಗೂ ಈ ಸೇತುವೆಯೇ ಆಸರೆ. ಆದರೆ, ಕಳೆದ ಮಳೆಗಾಲದಲ್ಲಿಯೇ ಅದು ಮುರಿದಿದೆ. ಈ ಹಿಂದೆಯೂ ಒಮ್ಮೆ ನಿರ್ಮಿಸಿದ್ದ ಸೇತುವೆಗೆ ಇದೇ ಗತಿ ಒದಗಿತ್ತು. ಇದರೊಂದಿಗೆ ಹೊಳೆಯ ಇನ್ನೊಂದು ಭಾಗದಲ್ಲಿ ಮಣ್ಣು ಕುಸಿದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಭರವಸೆ ಮಾತ್ರ ಸಿಕ್ಕಿದೆ
ಈ ಸೇತುವೆಯನ್ನು ದುರಸ್ತಿಗೊಳಿಸುವಂತೆ ಅಥವಾ ಹೊಸದಾಗಿ ಉತ್ತಮ ಗುಣಮಟ್ಟದ ಸೇತುವೆ ನಿರ್ಮಿಸುವಂತೆ ಸ್ಥಳೀಯರು ಜನಪ್ರತಿನಿಧಿಗಳ ಗಮನ ಸೆಳೆದಿದ್ದಾರೆ. ಸೇತುವೆ ಸರಿಪಡಿಸುವ ಭರವಸೆಯೂ ಸಿಕ್ಕಿದೆ. ಆದರೆ, ವರ್ಷವೇ ಕಳೆದರೂ ಸೇತುವೆ ಇನ್ನೂ ಹಾಗೆಯೇ ಇದೆ. ಈ ಮಳೆಗಾಲದಲ್ಲಿ ಅದು ಮತ್ತಷ್ಟು ಅಪಾಯಕಾರಿಯಾಗಿ ಗೋಚರಿಸುತ್ತಿದೆ. ದೊಡ್ಡವರಲ್ಲದೆ, ಈ ಸೇತುವೆ ಮೂಲಕ ಶಾಲೆಗೆ ಹೋಗುವ 20ಕ್ಕೂ ಹೆಚ್ಚು ಮಕ್ಕಳ ಪ್ರಾಣಕ್ಕೇ ಕಂಟಕ ತರುವಂತಿದೆ.
ಈಗಲೇ ಬನ್ನಿ
ಜನಪ್ರತಿನಿಧಿಗಳೇ ಸಾಂತ್ವನ ಹೇಳಲು ಬರಬೇಡಿ! ಬರುವುದಾದರೆ ಈ ಸಮಯದಲ್ಲಿ ಬನ್ನಿ. ನಿತ್ಯ 20ಕ್ಕೂ ಹೆಚ್ಚು ಮಕ್ಕಳು ಇದೇ ಸೇತುವೆ ಮೇಲಿಂದ ಶಾಲೆಗೆ ಹೋಗುತ್ತಾರೆ. ಸೇತುವೆ ದುರಸ್ತಿ ಇಲ್ಲವೇ ಹೊಸ ಸೇತುವೆ ನಿರ್ಮಿಸಿ.
– ರಮೇಶ್ ವಿ. ಬಂಗೇರ, ಒಟ್ಲ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.