ಕೆಸರಿನಲ್ಲಿ ಮಿಂದೆದ್ದು, ಆಡಿ, ಓಡಿ, ಗುರಿ ಮುಟ್ಟಿದ ಮಕ್ಕಳು
Team Udayavani, Jun 23, 2019, 5:00 AM IST
ಪಾವಂಜೆ: ಕೃಷಿ ಜಾನಪದೋತ್ಸವದಲ್ಲಿ ಶನಿವಾರ ಬೆಳಗ್ಗೆ ಶ್ರೀ ಕ್ಷೇತ್ರ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆದ ಬಳಿಕ ವಿವಿಧ ವಾದ್ಯ ಗೋಷ್ಠಿಯಲ್ಲಿ ಬಾಕಿಮಾರು ಗದ್ದೆಗಿಳಿದು ಶ್ರೀ ದೇವರ ತೀರ್ಥ ಹಾಗೂ ಹಿಂಗಾರ ಸಮರ್ಪಿಸಿ ಎರಡು ದಿನಗಳ ಕ್ರೀಡೆಗಳಿಗೆ ಚಾಲನೆ ನೀಡಲಾಯಿತು.
ಮೊದಲ ದಿನ ಕೆಸರುಗದ್ದೆ ಓಟ, ಹಿಮ್ಮುಖ ಓಟ, ಹಗ್ಗ ಜಗ್ಗಾಟ, ತುಳು ಜನಪದ ಧ್ವನಿ ಸುರುಳಿಗೆ ನೃತ್ಯ ಸ್ಪರ್ಧೆಗಳು ನಡೆಯಿತು. ಉತ್ಸಾಹದಿಂದ ಒಟ್ಟು 15 ವಿವಿಧ ಶಾಲೆಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಸುಮಾರು 980 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರೆ, ಹಗ್ಗಜಗ್ಗಾಟದಲ್ಲಿ 30 ತಂಡಗಳು ಭಾಗವಹಿಸಿದ್ದವು.
ಪ್ರತಿಯೊಂದು ಸ್ಪರ್ಧೆಯಲ್ಲೂ ಮಕ್ಕಳು ಕೆಸರಿನಲ್ಲಿಯೇ ಮಿಂದೆದ್ದು, ಸ್ಪರ್ಧೆಗೆ ತಕ್ಕಂತೆ ಓಡಿ, ಮೈಯೆಲ್ಲ ಕೆಸರಾದರೂ ಗುರಿ ಮುಟ್ಟಲು ಪ್ರಯತ್ನಿಸಿದರು. ಮಕ್ಕಳು ಕೆಸರಿನಲ್ಲಿ ನೃತ್ಯ ಮಾಡುತ್ತಿದ್ದಾಗ ಪ್ರೇರಿತರಾದ ಉಡುಪಿ ಜಿಲ್ಲಾ ಪಂಚಾಯತ್‌ನ ಸದಸ್ಯೆ ಗೀತಾಂಜಲಿ ಸುವರ್ಣ ಅವರು ಕೆಸರು ಮಿಶ್ರಿತ ಗದ್ದೆಗೆ ಇಳಿದು ತಾನೇನು ನೃತ್ಯದಲ್ಲಿ ಕಮ್ಮಿ ಇಲ್ಲ ಎಂದು ಅವರೊಂದಿಗೆ ತುಳು ಹಾಡಿಗೆ ಹೆಜ್ಜೆ ಹಾಕಿ ನೃತ್ಯ ಮಾಡಿ ಮಕ್ಕಳ ಸಹಿತ ಸೇರಿದ ಪ್ರೇಕ್ಷಕರನ್ನು ರಂಜಿಸಿದರು.
ವಿವಿಧ ಶಾಲೆಯ ದೈಹಿಕ ಶಿಕ್ಷಕ ವರ್ಗದ ನಿರ್ದೇಶಕರು ದಯಾನಂದ ಮಾಡ ಎಕ್ಕಾರು ಅವರ ಮುಂದಾಳುತ್ವದಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡರು.
ಸ್ವಾದಿಷ್ಟ ಊಟೋಪಚಾರ
ಕೃಷಿ ಜನಪದೋತ್ಸವದಲ್ಲಿ ಪಾಲ್ಗೊಂಡ ಸ್ಪರ್ಧಾಳುಗಳ ಸಹಿತ ವೀಕ್ಷಕರಿಗೆ ದೇವಸ್ಥಾನದ ವತಿಯಿಂದ ಸ್ವಾದಿಷ್ಟ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಬೆಳಗ್ಗೆ ಚಪಾತಿ, ಕೂರ್ಮ, ಕೇಸರಿಬಾತ್, ಚಾ/ ಕಾಫಿ, ಮಧ್ಯಾಹ್ನ ಉಪ್ಪಿನಕಾಯಿ, ಹಲಸಿನ ಕಾಯಿಯ ಪಲ್ಯ, ತಂಬುಳಿ, ಸೌತೆಕಾಯಿ- ಅವರೆ ಸಾಂಬಾರ್, ಅನ್ನ, ಹೆಸರು ಬೇಳೆ ಪಾಯಸ, ಸಾಟ್, ಸಂಜೆ ವೆಜಿಟೇಬಲ್ ಪಲಾವ್, ಸಲಾಡ್, ಚಾ/ಕಾಫಿ ವ್ಯವಸ್ಥೆ ಆಗಿದೆ. 1,300 ಮಂದಿಗೆ ಬೋಜನವನ್ನು ಸ್ವೀಕರಿಸಿದ್ದಾರೆ ಎಂದು ಪಾಕಶಾಲೆಯ ನಾಗರಾಜ್ ಮಾಂಟ್ರಾಡಿ ತಿಳಿಸಿದರು.
ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್‌ಕುಮಾರ ಬೊಳ್ಳೂರು, ಉಡುಪಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಸುಧಾಕರ ಆರ್. ಅಮೀನ್, ಸುಜಾತಾ ವಾಸದೇವ, ಮೋಹನ್ ಸುವರ್ಣ, ಸುಲೋಚನಾ ಮಹಾಬಲ ಅಂಚನ್, ಮೋಹನ್ ಬಂಗೇರ, ಲಕ್ಷ್ಮಣ್ ಸಾಲ್ಯಾನ್ ಪುನರೂರು, ಯೋಗೀಶ್ ಪೂಜಾರಿ, ಹರಿದಾಸ್ ಭಟ್ ತೋಕೂರು, ನವೀನ್ ಶೆಟ್ಟಿ ಎಡ್ಮೆಮಾರ್, ಸಾವಿತ್ರಿ ಸುವರ್ಣ, ಯತೀಶ್ ಕೋಟ್ಯಾನ್, ರಮೇಶ್ ಕೋಟ್ಯಾನ್ ಮತ್ತಿತರರು ಸಹಕರಿಸಿದ್ದರು.
ಜನಪದೋತ್ಸವ ಉದ್ಘಾಟನೆ
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಶ್ರೀ ಕ್ಷೇತ್ರ ಮತ್ತು ವಿವಿಧ ಯುವ ಸಾಮಾಜಿಕ ಸೇವಾ ಸಂಸ್ಥೆಗಳ ಸಹಯೋಗದಲ್ಲಿ 10ನೇ ವರ್ಷದ ತುಳುನಾಡ ಕೃಷಿ ಜನಪದೋತ್ಸವ ಆಯೋಜಿಸಲಾಗಿತ್ತು.
ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಡಾ| ಯಾಜಿ ನಿರಂಜನ ಭಟ್, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಪ್ರಗತಿಪರ ಕೃಷಿಕ ಗಣೇಶ್ ಶೆಟ್ಟಿ ಮುಚ್ಚಾರು, ತಾ. ಪಂ.್ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು ಉಪಸ್ಥಿತರಿದ್ದರು.
ಮಹಾನಗರ ಪಾಲಿಕೆಯ ಮಾಜಿ ಮೇಯರ್‌ಗಳಾದ ದಿವಾಕರ್, ರಜನಿ ದುಗ್ಗಣ್ಣ, ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್, ಸಮಾಜ ಸೇವಕ ಗುರುಚಂದ್ರ ಹೆಗ್ಡೆ ಕೂಳೂರು, ಉದ್ಯಮಿ ದೇವದಾಸ್ ಹಳೆಯಂಗಡಿ ಪಾಲ್ಗೊಂಡಿದ್ದರು. ವಿನೋದ್ ಸಾಲ್ಯಾನ್ ಬೆಳ್ಳಾಯರು ಸ್ವಾಗತಿಸಿದರು. ಮೋಹನ್ ಸುವರ್ಣ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.