ಬಜಪೆ ಪೊಲೀಸ್ ಠಾಣೆಯಲ್ಲಿ ಶಾಲಾ ಮಕ್ಕಳ ಕಲರವ
Team Udayavani, Oct 5, 2018, 11:51 AM IST
ಬಜಪೆ: ದಿನವಿಡೀ ಕೇಸ್, ಅಪರಾಧ ಹಾಗೂ ಒತ್ತಡಗಳ ನಡುವೆ ಕಾಲ ಕಳೆಯುತ್ತಿದ್ದ ಬಜಪೆ ಪೊಲೀಸ್ ಅಧಿಕಾರಿಗಳು ಗುರುವಾರ ಮಾತ್ರ ಉಲ್ಲಾಸಿತರಾಗಿದ್ದರು. ಇದಕ್ಕೆ ಕಾರಣ ಪುಟಾಣಿ ಕಂದಮ್ಮಗಳ ತೊದಲು ನುಡಿಯ ಟ್ವಿಂಕಲ್ ಟ್ವಿಂಕಲ್ ಲಿಟ್ಲ ಸ್ಟಾರ್ ಹಾಡು..
2ರಿಂದ 4 ವರ್ಷ ಸಣ್ಣ ವಯಸ್ಸಿನ ಮಕ್ಕಳಲ್ಲಿ ಪೊಲೀಸ್‌ರ ಭಯ ಹೋಗಿ, ಸುರಕ್ಷಾ ಭಾವನೆ ಮೂಡಿಸುವ ಉದ್ದೇಶದಿಂದ ನಗರದ ಎಂ.ಜೆ.ಎಂ. ಬಹ್ರುರುತುಲ್ ಕುರಾನ್ ಶಾಲೆಯ ಮಕ್ಕಳು ಅಧ್ಯಾಪಕರೊಂದಿಗೆ ಗುರುವಾರ ಬಜಪೆ ಪೊಲೀಸ್ ಠಾಣೆಗೆ ಭೇಟಿ ನೀಡಿದರು.
ಶಾಲೆಯ 20 ವಿದ್ಯಾರ್ಥಿಗಳನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಲಾಯಿತು. ಠಾಣೆಯ ಎಲ್ಲ ಕೊಠಡಿಗಳ ಸಿಬಂದಿ ಪರಿಚಯ ಮಾಡಿಕೊಂಡು ಮಾಹಿತಿ ಪಡೆದುಕೊಂಡರು. ಪುಟಾಣಿ ವಿದ್ಯಾರ್ಥಿಗಳ ನೃತ್ಯ ಸಹಿತ ಟ್ವಿಂಕಲ್ ಟ್ವಿಂಕಲ್ ಲಿಟ್ಲ ಸ್ಟಾರ್ ಹಾಡಿನೊಂದಿಗೆ ಪೊಲೀಸ್ ಸಿಬಂದಿಯನ್ನು ಮನೋರಂಜಿಸಿ, ಒತ್ತಡವನ್ನು ಮರೆತು ಪುಣಾಣಿಗಳೊಂದಿಗೆ ಬೆರೆಯುವಂತೆ ಮಾಡಿತು.
ಪೊಲೀಸ್‌ರಿಂದ ಐಸ್‌ಕ್ರೀಂ
ಮಧುರ ಧ್ವನಿಯಿಂದ ಹಾಡು ಹೇಳಿ ಪೊಲೀಸ್‌ರನ್ನು ರಂಜಿಸಿದ ಪುಟಾಣಿಗಳ ಮಕ್ಕಳಿಗೆ ಇಷ್ಟವಾದ ಐಸ್‌ಕ್ರೀಂನ್ನು ನೀಡಿ, ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂತೋಷಪಟ್ಟರು. ಕಳೆದ ವಾರವಷ್ಟೇ ಕೈಕಂಬದ ಮರ್ಕಜ್ ಜಹರುತುಲ್ ಕುರಾನ್ ಶಾಲೆಯ 25 ಪುಟಾಣಿಗಳು ಬಜಪೆ ಪೊಲೀಸ್ ಠಾಣೆಗೆ ಬಂದಿದ್ದರು. ಅವರನ್ನು ಕೂಡ ಹೀಗೆ ಸ್ವಾಗತಿಸಿ, ಸಿಹಿತಿಂಡಿ ನೀಡಲಾಯಿತು. ವಾರಕ್ಕೊಂದು ಶಾಲೆಯ ಪುಟಾಣಿಗಳನ್ನು ಪೊಲೀಸ್ ಠಾಣೆಗೆ ಸ್ವಾಗತಿಸಿ, ಎಳೆಯ ವಯಸ್ಸಿನಲ್ಲೇ ಪೊಲೀಸ್‌ರ ಬಗ್ಗೆ ಅವರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಯಾವಾಗಲೂ ಪ್ರಕರಣ, ಕಳ್ಳತನ ಎಂದು ಕೆಲಸದ ಒತ್ತಡದಲ್ಲಿರುವ ನಮಗೆ ಪುಟಾಣಿಗಳು ಬಂದಾಗ ಮಾನಸಿಕ ತೃಪ್ತಿ ಸಿಗುತ್ತದೆ. ಸ್ಟೇಶನ್ ಮನೆ ಹಾಗೂ ಶಾಲೆಯಂತಾಗುತ್ತದೆ ಎಂದು ಬಜಪೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಸ್. ಪರಶಿವ ಮೂರ್ತಿ ಹೇಳಿದರು.
ಮಕ್ಕಳಲ್ಲಿ ಭಯ ಹೋಗಲಾಡಿಸುವ ಉದ್ದೇಶ
ಮನೆಗಳಲ್ಲಿ ಹೆತ್ತವರು ಪುಟಾಣಿಗಳು ತಪ್ಪು ಮಾಡಿದಾಗ ಬೆತ್ತವನ್ನು ತೋರಿಸಿ ಹೆದರಿಸುವ ಹಾಗೂ ಇಲ್ಲವೇ ಪೊಲೀಸ್ ರನ್ನು ಕರೆದು ಅಂಜಿಸುವ ವಾಡಿಕೆಯಿದೆ. ಈ ಭಯವನ್ನು ಅಕ್ಷರಶಃ ಹೋಗಲಾಡಿಸಿ ಸುರಕ್ಷೆ ಭಾವನೆ ಮೂಡಿಸುವ ದೃಷ್ಟಿಯಿಂದ ಪುಟಾಣಿಗಳನ್ನು ಠಾಣೆಗೆ ಭೇಟಿ ನೀಡಲಾಯಿತು ಎಂದು ಶಾಲೆಯ ಅಧ್ಯಾಪಕರು ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.