ಮಕ್ಕಳ ಮನಸ್ಸಿಗೆ ಹೆತ್ತವರೂ ನೋವುಂಟು ಮಾಡದಿರಿ
Team Udayavani, Jan 29, 2018, 10:53 AM IST
ವಿಟ್ಲ : ಪ್ರತಿಯೊಬ್ಬರ ಮನಸ್ಸು ಮಕ್ಕಳ ಮನಸ್ಸಿನಂತಿರಬೇಕು. ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು. ಮಕ್ಕಳ ಮನಸ್ಸಿಗೆ ಹೆತ್ತವರೂ ನೋವುಂಟುಮಾಡಬಾರದು. ಮಕ್ಕ ಳಲ್ಲಿ ಶಿಕ್ಷಕರು ವಿಷಬೀಜ ಬಿತ್ತಬಾರದು. ಸ್ವಾತಂತ್ರ್ಯ ಹೋರಾಟಗಾರರನ್ನು ನಿಂದಿಸಬಾರದು. ಕರ್ಕಶ ಸ್ವರದಿಂದ ಜೈಕಾರ ಹಾಕುವುದೇ ದೇಶಭಕ್ತಿಯಲ್ಲ. ಪ್ರತಿಯೊಬ್ಬನ ಅಂತರಂಗದಲ್ಲಿ ದೇಶ ಪ್ರೇಮ ಬೆಳಗಿಸಬೇಕು ಎಂದು ಸಚಿವ ರಮಾನಾಥ ರೈ ಅಭಿಪ್ರಾಯಪಟ್ಟರು.
ಅವರು ಶನಿವಾರ ಮಂಕುಡೆ ದ.ಕ. ಜಿ.ಪಂ. ಉನ್ನತೀಕರಿಸಿದ ಹಿ.ಪ್ರಾ. ಶಾಲೆಯ ಶತಮಾನೋತ್ಸವ ಕಟ್ಟಡ ಮತ್ತು ಶತ ಸಂಭ್ರಮದ ಉದ್ಘಾಟನೆ ಹಾಗೂ ಮಂಕುಡೆ-ಕುಡ್ತಮುಗೇರು ಹಳೆ ವಿದ್ಯಾರ್ಥಿ ಯುವಕ ಮಂಡಲದ ವಾರ್ಷಿಕೋತ್ಸವ ಉದ್ಘಾಟಿಸಿದರು.
ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಮಂಕುಡೆ ರಾಮಕೃಷ್ಣ ಆಚಾರ್ ಶತಸಂಭ್ರಮವನ್ನು ಉದ್ಘಾ ಟಿಸಿದರು. ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನವೀಕೃತ ಧ್ವಜಸ್ತಂಭ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಆಲಿ, ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್, ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ತಾ.ಪಂ. ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ಮಂಕುಡೆ ಶ್ರೀನಿವಾಸ ಆಚಾರ್, ಮಂಕುಡೆ ವಿಜಯ ಆಚಾರ್, ಗ್ರಾ.ಪಂ. ಸದಸ್ಯ ರಾದ ಪವಿತ್ರ ಪೂಂಜ ಕೊಡಂಗೆ, ಹರೀಶ್ ಟೈಲರ್ ಮಂಕುಡೆ, ದೇವಕಿ, ವೇದಾವತಿ ಪರ್ತಿಪ್ಪಾಡಿ, ವೇದಾವತಿ ಕುದ್ರಿಯ, ಪ್ರಗತಿಪರ ಕೃಷಿಕ ಜತ್ತಪ್ಪ ಪೂಂಜ ಕೊಡಂಗೆ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಮಂಕುಡೆ ಕಲ್ಕಾಜೆ, ಮಂಡಲ ಅಧ್ಯಕ್ಷ ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.
ಶತಮಾನೋತ್ಸವಕ್ಕೆ ಧನಸಹಾಯ ನೀಡಿದ ದಾನಿಗಳನ್ನು ಗೌರವಿಸಿ, ದತ್ತಿನಿಧಿಗಳನ್ನು ವಿತರಿಸಲಾಯಿತು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ ಪ್ರಸ್ತಾವನೆಗೈದು, ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಗಟ್ರೂìಡ್ ಡಿ’ಸೋಜಾ, ಪ್ರಧಾನ ಕಾರ್ಯದರ್ಶಿ ರಾಮ ಬಂಗೇರ ಮತ್ತು ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ವರದಿ ಮಂಡಿಸಿ ದರು. ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ರಮೇಶ್ ಮಂಕುಡೆ ವಂದಿಸಿದರು. ಶಿಕ್ಷಕರಾದ ಪರಮೇಶ್ವರ ಆಚಾರ್ಯ, ಅಶೋಕ ಮಾಂಬಾಡಿ ನಿರೂಪಿಸಿದರು. ಸಹ ಶಿಕ್ಷಕಿ ಚಂದ್ರಾವತಿ ದತ್ತಿನಿ ಧಿ ವಿವರ ಓದಿದರು. ಬಳಿಕ ಮಕ್ಕಳಿಂದ ನೃತ್ಯ ಸಂಭ್ರಮ, ತುಳು ನಾಟಕ ಪ್ರದರ್ಶನಗೊಂಡಿತು.
ಬೆಳಗ್ಗೆ ಎಸ್‌ಡಿಎಂಸಿ ಅಧ್ಯಕ್ಷೆ ವಿಮಲಾ ಲಂಬೋದರ ಪೂಜಾರಿ ಪರ್ತಿಪ್ಪಾಡಿ ಅವರು ಧ್ವಜಾರೋಹಣ ನೆರವೇರಿಸಿದರು. ಮಂಚಿ ವಲಯ ಇ.ಸಿ.ಒ. ಪ್ರಕಾಶ್, ಸಿ.ಆರ್.ಪಿ. ಗಂಗಾಧರ್ ಭಾಗವಹಿಸಿದ್ದರು. ಬಹುಮಾನ ವಿತರಿಸಲಾಯಿತು. ಪುಟಾಣಿಗಳಿಂದ ಚಿಣ್ಣರ ಸಂಭ್ರಮ, ಮಂಕುಡೆ ಶಾಲೆಯ ಮಕ್ಕಳಿಂದ ನೃತ್ಯ ವೈಭವವಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.