4 ತಿಂಗಳಿನಿಂದ ಹೊರಗುಳಿದಿದ್ದ ಮಕ್ಕಳು ಮರಳಿ ಶಾಲೆಗೆ
ಶಿಕ್ಷಕರು, ಅಧಿಕಾರಿಗಳ ಪ್ರಯತ್ನದ ಫಲ
Team Udayavani, Nov 7, 2019, 4:48 AM IST
ಈಶ್ವರಮಂಗಲ: ಅಧಿಕಾರಿಗಳು ಮತ್ತು ಶಿಕ್ಷಕರ ತಂಡ ಭೇಟಿ ನೀಡಿ ಹೆತ್ತವರು, ಮಕ್ಕಳ ಮನವೊಲಿಸಿತು.
ಈಶ್ವರಮಂಗಲ: ನಾಲ್ಕು ತಿಂಗಳಿನಿಂದ ಶಾಲೆಯಿಂದ ಹೊರಗುಳಿದಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳನ್ನು ಮರಳಿ ಶಾಲೆಗೆ ಸೇರ್ಪಡೆಗೊಳಿಸಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಶಾಲೆಯಲ್ಲಿ ನಡೆದಿದೆ.
ಬಡಗನ್ನೂರು ಗ್ರಾ.ಪಂ. ಸಮೀಪದ ನಿವಾಸಿ ಗಳಾದ ಸುಂದರ – ಪ್ರೇಮಾ ದಂಪತಿಗೆ ಆರು ಜನ ಮಕ್ಕಳು. ಸುಂದರ ಅವರ ತಾಯಿಯೂ ಜತೆಗಿದ್ದಾರೆ. ದಂಪತಿ ಈಶ್ವರಮಂಗಲದ ಸಾರ್ವಜನಿಕ ಶೌಚಾಲಯದ ಶುಚಿತ್ವದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಹಿರಿಯ ಪುತ್ರ ದುಡಿಯುತ್ತಿದ್ದರೆ ಕೊನೆಯ ಪುತ್ರ ಅಂಗನವಾಡಿಗೆ ಹೋಗದೆ ಅಜ್ಜಿಯ ಜತೆಗೆ ಸಮಯ ಕಳೆಯುತ್ತಿದ್ದ. ಇನ್ನೊಬ್ಬಳು ಸುಳ್ಯಪದವು ಸರ್ವೋದಯ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದು, ಆಕೆಯೂ ಆಗಾಗ ಶಾಲೆಗೆ ಗೈರು ಹಾಜರಾಗುತ್ತಾಳೆ. ಬಡಗನ್ನೂರು ಸರಕಾರಿ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಾಗಿರುವ ಜಯಶ್ರೀ (7ನೇ), ಯತೀಶ್ (5ನೇ) ಮತ್ತು ಸಂತೋಷ (1ನೇ) ಆಗಸ್ಟ್‌ನಿಂದ ಶಾಲೆಯತ್ತ ಮುಖ ಮಾಡಿರಲಿಲ್ಲ. ಶಿಕ್ಷಣದ ಬಗ್ಗೆ ಹೆತ್ತವರಲ್ಲಿರುವ ನಿರ್ಲಕ್ಷ ದ ಪರಿಣಾಮವಾಗಿ ಮಕ್ಕಳಲ್ಲಿ ಶಾಲೆಗೆ ಹೋಗದಿದ್ದರೂ ನಡೆಯುತ್ತದೆ ಎಂಬ ಮನೋಭಾವ ಮಕ್ಕಳಲ್ಲಿ ಬೆಳೆದಿತ್ತು.
ಫಲ ನೀಡಿದ ಪ್ರಯತ್ನ
ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಪೊಲೀಸ್ ಇಲಾಖೆ, ಸಾರ್ವ ಜನಿಕರು ಸತತವಾಗಿ ಪ್ರಯತ್ನ ಮಾಡಿದರೂ ಮಕ್ಕಳನ್ನು ಶಾಲೆಗೆ ಕರೆತರುವ ಯತ್ನ ಫಲ ನೀಡಿರಲಿಲ್ಲ. ಕೊನೆಗೆ 2 ದಿನಗಳ ಹಿಂದೆ ಮಂಗಳೂರು ಚೈಲ್ಡ್‌ಲೈನ್ ಅಧಿಕಾರಿಗಳಾದ ಆಶಾಲತಾ, ಅಸುಂತ, ಕುಂಬ್ರ ಕ್ಲಸ್ಟರ್ ಮುಖ್ಯಸ್ಥೆ ಶಶಿಕಲಾ ಮತ್ತು ಪಂ. ಅಧಿಕಾರಿಗಳ ತಂಡವು ಪೋಷಕರು ಮತ್ತು ಹೆತ್ತವರಿಗೆ ಶಿಕ್ಷಣದ ಮಹತ್ವ ವನ್ನು ಮನವರಿಕೆ ಮಾಡಿದರು. ಮಕ್ಕಳನ್ನು ಕಳಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದರು. ಅದರ ಫಲವಾಗಿ ನ. 6ರಂದು ಮೂವರು ಮಕ್ಕಳೂ ಶಾಲೆಗೆ ಹಾಜರಾದರು. ಶಾಲೆಗೆ ಹೋಗದ ಮಕ್ಕಳಿಬ್ಬರನ್ನು ಪೊಲೀಸ್ ಸಿಬಂದಿ ಮನವೊಲಿಸಿ ಶಾಲೆಗೆ ಕಳುಹಿಸಿದ ಘಟನೆ ಮಂಗಳವಾರ ವಿಟ್ಲದಿಂದ ವರದಿಯಾಗಿತ್ತು.
ಕೆಲವು ತಿಂಗಳಿನಿಂದ ಶಾಲೆಗೆ ಬಾರದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಹಲವು ಬಾರಿ ಪ್ರಯತ್ನಿಸಿದರೂ ಹೆತ್ತವರು ಸ್ಪಂದಿಸದ ಕಾರಣ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಂಗಳೂರಿನ ಚೈಲ್ಡ್ ಲೈನ್‌ನವರ ನೆರವಿನೊಂದಿಗೆ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಸಫಲರಾಗಿದ್ದೇವೆ.
– ಶಶಿಕಲಾ, ಸಿಆರ್‌ಪಿ, ಕುಂಬ್ರ ಕ್ಲಸ್ಟರ್ ವಲಯ
ಮಕ್ಕಳು ವಾಸವಾಗಿರುವ ಮನೆ ಸಂಪೂರ್ಣ ಜೀರ್ಣವಾಗಿದ್ದು, ದುರಸ್ತಿಗಾಗಿ ಪಂಚಾಯತ್‌ಗೆ ಅರ್ಜಿ ಕೊಡುವಂತೆ ತಿಳಿಸಿದ್ದೇವೆ. ಡೋರ್ ನಂಬರ್, ಕುಡಿಯುವ ನೀರಿನ ಸಂಪರ್ಕ ಇದೆ. ಎಲ್ಲ ರೀತಿಯ ಸಹಾಯ ನೀಡಲು ಪಂಚಾಯತ್ ಬದ್ಧವಿದೆ.
– ವಸೀಮ್‌ಗಂಧ, ಬಡಗನ್ನೂರು ಗ್ರಾ.ಪಂ. ಪಿಡಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.