ಭಿನ್ನ ಸಾಮರ್ಥ್ಯದ ಮಕ್ಕಳ ಸಾಧನೆ ಮಾದರಿ: ಯು.ಟಿ ಖಾದರ್
Team Udayavani, Jul 16, 2017, 3:50 AM IST
ಮಂಗಳೂರು: ಭಿನ್ನ ಸಾಮರ್ಥ್ಯದ ಮಕ್ಕಳ ಈ ಸಾಧನೆ ಮಾದರಿಯಾಗಿದೆ ಎಂದು ಅಭಿನಂದಿಸಿದರು. ಇಂತಹ ಪ್ರತಿಭಾವಂತ ಮಕ್ಕಳು ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವ ನಿಟ್ಟಿನಲ್ಲಿ ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು ನೆರವು ನೀಡಿ ಪ್ರೋತ್ಸಾಹಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಕ್ರೀಡಾಸಚಿವರಿಗೆ ಮನವಿ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹಾಗೂ ಸ್ಪೆಷಲ್ ಒಲಿಂಪಿಕ್ಸ್‌ನ ಭಾರತ್- ಕರ್ನಾಟಕದ ಅಧ್ಯಕ್ಷ ಯು.ಟಿ.ಖಾದರ್ ಅವರು ಹೇಳಿದರು.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜು.9 ರಿಂದ 13 ವರೆಗೆ ಜರಗಿದ ಸ್ಪೆಷಲ್ ಒಲಿಂಪಿಕ್ಸ್ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸ್ಪೆಷಲ್ ಒಲಿಪಿಂಕ್ಸ್ ಭಾರತ್-ಕರ್ನಾಟಕ ಪ್ರತಿನಿಧಿಸಿ ವಿಜೇತರಾದ ಮಂಗಳೂರಿನ ಸಾನ್ನಿಧ್ಯ ಹಾಗೂ ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆಯ ಮೂವರು ಕ್ರೀಡಾಪಟುಗಳನ್ನು ಅಭಿನಂದಿಸುವ ಕಾರ್ಯಕ್ರಮ ಶನಿವಾರ ನಗರದ ಸರ್ಕ್ನೂಟ್ ಹೌಸ್‌ನಲ್ಲಿ ಜರ ಗಿದ್ದು, ವಿಜೇ ತ ರನ್ನು ಶಾಲು, ಹೂಹಾರ ಹಾಕಿ ಸಮ್ಮಾನಿಸಿ ಅಭಿನಂದಿಸಿ ಅವರು ಮಾತನಾಡಿರು.ಮೇಯರ್ ಕವಿತಾ ಸನಿಲ್ ಅವರು ಮಾತನಾಡಿ, ಭಿನ್ನ ಸಾಮರ್ಥ್ಯದ ಮಕ್ಕಳ ಈ ಸಾಧನೆ ಶ್ರೇಷ್ಠವಾದುದು ಎಂದು ಶ್ಲಾಘಿಸಿದರು. ಈ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಪ್ರೇಮನಾಥ್ ಉಳ್ಳಾಲ್ ಅವರನ್ನು ಕೂಡಾ ಸಮ್ಮಾನಿಸಿ ಅಭಿನಂದಿಸಲಾಯಿತು.
ಅನುದಾನಕ್ಕೆ ಮನವಿ
ಸ್ವಾಗತಿಸಿ ಪ್ರಸ್ತಾವನೆಗೈದ ಸ್ಪೆಷಲ್ ಒಲಿಪಿಂಕ್ಸ್ ಭಾರತ್-ಕರ್ನಾಟಕ ಪ್ರಾದೇಶಿಕ ನಿರ್ದೇಶಕ ವಸಂತ್ ಕುಮಾರ್ ಶೆಟ್ಟಿ ಅವರು ಸ್ಪೆಷಲ್ ಒಲಿಂಪಿಕ್ಸ್ ರಾಜ್ಯ ಸಂಸ್ಥೆ ಸಂಘಟಿಸುತ್ತಿರುವ ಕ್ರೀಡಾ ತರಬೇತಿ ಹಾಗೂ ಸ್ಪರ್ಧೆಗಳಿಗೆ ಸರಕಾರದ ವತಿಯಿಂದ ಪೂರ್ಣ ಪ್ರಮಾಣದ ಅನುದಾನ ನೀಡುವಂತೆ ಹಾಗೂ ರಾಜ್ಯ ಸಂಸ್ಥೆಯ ಕಚೇರಿಯ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕೊಠಡಿ ಒದಗಿಸುವಂತೆ ಮನವಿ ಸಲ್ಲಿಸಲಾಗಿದ್ದು ಇದಕ್ಕೆ ಶೀಘ್ರ ಸರಕಾರದ ಶೀಘ್ರ ಸ್ಪಂದಿಸಬೇಕು ಎಂದು ಕೋರಿದರು.
ಅಬುದಾಭಿಯಲ್ಲಿ ನಡೆಯಲಿರುವ ವರ್ಲ್ಡ್ ಸಮ್ಮರ್ ಗೇಮ್ಸ್‌ನಲ್ಲಿ ರಾಜ್ಯದ ಈ ಆರು ಮಂದಿ ಕ್ರೀಡಾಪಟುಗಳು ಭಾಗವಹಿಸಲಿದ್ದು ಅವರಿಗೆ ಸರಕಾರದ ವತಿಯಿಂದ ಆರ್ಥಿಕ ನೆರವು ಒದಗಿಸಿಕೊಡುವಂತೆ ಎಂದು ವಸಂತ್ ಕುಮಾರ್ ಶೆಟ್ಟಿ ಸಚಿವರಿಗೆ ವಿನಂತಿಸಿದರು.
ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆಯ ಪ್ರಾಂಶುಪಾಲೆ ಸಿ | ಮರಿಯಾ ಶ್ರುತಿ, ವಸತಿಯುತ ಕೇಂದ್ರದ ಮುಖ್ಯಸ್ಥ ಮಹಾಬಲ ಮಾರ್ಲ , ವಿಶೇಷ ಮಕ್ಕಳ ಪೋಷಕರ ಸಂಘದ ಮುಹಮ್ಮದ್ ಬಶೀರ್, ತರಬೇತುದಾರರಾದ ಮಹೇಶ್, ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.
ಪದಕ ವಿಜೇತರು
ಪದಕ ವಿಜೇತರಾದ ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆಯ ಆಸ್ಲಿ ಡಿಸೋಜಾ (ಎತ್ತಿದ ತೂಕ: ಎಂ 6 ವಿಭಾಗದಲ್ಲಿ 245ಕಿ.ಲೋ 2 ಚಿನ್ನದ ಪದಕ ಹಾಗೂ ಸಾನ್ನಿಧ್ಯ ವಸತಿಯುತ ಶಾಲೆಯ ಕ್ರೀಡಾಪಟುಗಳಾದ ಅಭಿಲಾಷ್ ( ಎಂ 1 ವಿಭಾಗದಲ್ಲಿ 187.5 ಕಿ.ಲೋ ) 1 ಚಿನ್ನ, ಒಂದು ಬೆಳ್ಳಿ ಪದಕ ಹಾಗೂ ಪ್ರಜ್ವಲ್ ಲೋಬೋ (ಎಂ8 ವಿಭಾಗದಲ್ಲಿ 235 ಕಿಲೋ ) 1 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದಿದ್ದಾರೆ. ಸ್ಪೆಷಲ್ ಒಲಿಂಪಿಕ್ಸ್ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸ್ಪೆಷಲ್ ಒಲಿಂಪಿಕ್ಸ್ ಭಾರತ್- ಕರ್ನಾಟಕವನ್ನು ಪ್ರತಿನಿಧಿಸಿ ಆರು ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಅವರಲ್ಲಿ ನಾಲ್ವರು ಪುರುಷ ಕ್ರೀಡಾಪಟುಗಳು ಐದು ಚಿನ್ನದ ಪದಕಗಳನ್ನು ಗಳಿಸಿದ್ದರೆ, ಇಬ್ಬರು ಮಹಿಳೆಯರು ಒಂದು ಬೆಳ್ಳಿ ಹಾಗೂ 3 ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.