ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ರಂಗನಾಥ್ ಭಟ್
Team Udayavani, Nov 6, 2017, 9:36 AM IST
ಮಂಗಳೂರು: ಉದಯವಾಣಿ ಹಾಗೂ ಉಡುಪಿಯ ಆರ್ಟಿಸ್ಟ್ಸ್ ಫೋರಂ ಆಯೋ ಜಿ ಸಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಉದಯವಾಣಿ ಮಕ್ಕಳ ಚಿತ್ರಕಲಾ ಸ್ಪರ್ಧೆ “ಚಿಣ್ಣರ ಬಣ್ಣ-2017’ರ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ರವಿವಾರ ನಗರದ ಡೊಂಗರಕೇರಿ ಕೆನರಾ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ರಂಗನಾಥ್ ಭಟ್ ಮಾತನಾಡಿ, ಮಕ್ಕಳ ಕಲಾಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉದಯವಾಣಿ ಹಾಗೂ ಆರ್ಟಿಸ್ಟ್ಸ್ ಫೋರಂ ಕೈಗೊಂಡಿರುವ ಈ ಕಾರ್ಯಕ್ಕೆ ನಮ್ಮ ಸಂಸ್ಥೆಯೂ ಹೆಮ್ಮೆಯಿಂದ ಸಹಯೋಗ ನೀಡಿದೆ. ಮುಂದೆಯೂ ಕೆನರಾ ವಿದ್ಯಾಸಂಸ್ಥೆ ಈ ಕಾರ್ಯಕ್ಕೆ ಸಹಕಾರ ನೀಡಲಿದೆ. ಮಕ್ಕಳ ಕಲಾಪ್ರತಿಭೆಯನ್ನು ಗುರುತಿಸುವ ಕಾರ್ಯ ಎಲ್ಲೆಡೆ ನಡೆಯಲಿ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಮಂಗಳೂರು ಶ್ರೀನಿವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಾ| ಎ. ಶ್ರೀನಿವಾಸ್ ರಾವ್ ಮಾತನಾಡಿ, ಪ್ರಸ್ತುತ ಕಲಾಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಿದ್ದು, ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ಇಂತಹ ಸ್ಪರ್ಧೆಗಳು ಪೂರಕವಾಗಿವೆ. ಈ ನಿಟ್ಟಿನಲ್ಲಿ ಉದಯವಾಣಿ ಕಾರ್ಯಕ್ಕೆ ಎಲ್ಲರೂ ಕೃತಜ್ಞತೆ ಸಲ್ಲಿಸಬೇಕಿದೆ ಎಂದರು.
ಸಾಂಸ್ಕೃತಿಕ ಜವಾಬ್ದಾರಿ
ಆರ್ಟಿಸ್ಟ್ಸ್ ಫೋರಂ ಅಧ್ಯಕ್ಷ ರಮೇಶ್ ರಾವ್ ಮಾತ ನಾಡಿ, ಜನರಿಗೆ ಸುದ್ದಿಯನ್ನು ನೀಡುವ ಜತೆಗೆ ಉದಯವಾಣಿಯು ತನ್ನ ಸಾಂಸ್ಕೃತಿಕ ಜವಾ ಬ್ದಾರಿ ಯನ್ನೂ ಸಮರ್ಥವಾಗಿ ನಿರ್ವ ಹಿಸು ತ್ತಿದೆ. ಅದರ ಕಾರ್ಯಕ್ಕೆ ಆರ್ಟಿಸ್ಟ್ಸ್ ಫೋರಂ ಸಹಕಾರ ನೀಡಿದ್ದು, ಸ್ಪರ್ಧೆಯಲ್ಲಿ ಪ್ರಾಮಾ ಣಿಕ ತೀರ್ಪು ನೀಡಿದ ತೃಪ್ತಿ ನಮಗಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತ ರಾದ 24 ಮಂದಿ ವಿದ್ಯಾರ್ಥಿಗಳು ಹಾಗೂ ತಾಲೂಕು ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಸಬ್‌ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ತಲಾ 5 ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು.
ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರ್ ಬಹುಮಾನಿ ತರ ವಿವರ ನೀಡಿದರು. ಪ್ರಸ್ತಾವನೆಗೈದ ಉದಯ ವಾಣಿ ಮ್ಯಾಗಜಿನ್ ವಿಭಾಗ ಹಾಗೂ ಸ್ಪೆಷಲ್ ಇನಿಶಿಯೇಟಿವ್ಸ್ ರಾಷ್ಟ್ರೀಯ ಮುಖ್ಯಸ್ಥ ಆನಂದ್ ಕೆ. ಅವರು, ಚಿತ್ರಕಲಾ ಸ್ಪರ್ಧೆಗೆ ಉಭಯ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿ, ಭಾಗವಹಿಸಿದ ವಿದ್ಯಾರ್ಥಿಗಳು, ಪೋಷಕರು, ಪ್ರಾಯೋಜಕರು ಹಾಗೂ ವಿದ್ಯಾ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ಆರ್ಟಿಸ್ಟ್ಸ್ ಫೋರಂನ ಪ್ರಮುಖರಾದ ಪುರುಷೋ ತ್ತಮ ಅಡ್ವೆ, ವಿಷ್ಣು ಶೇವಗೂರು, ಜಯವಂತ್, ಎಚ್.ಕೆ. ರಾಮಚಂದ್ರ, ಉದಯ ವಾಣಿ ಮಂಗಳೂರು ಸುದ್ದಿ ವಿಭಾಗದ ಉಪ ಮುಖ್ಯಸ್ಥ ಸುರೇಶ್ ಪುದುವೆಟ್ಟು ಉಪಸ್ಥಿತರಿದ್ದರು. ಆರ್ಟಿಸ್ಟ್ ಫೋರಂ ಕಾರ್ಯದರ್ಶಿ ಸಕು ಪಾಂಗಾಳ ಸ್ವಾಗತಿಸಿದರು. ಉದಯವಾಣಿ ಮಂಗಳೂರು ಸುದ್ದಿ ವಿಭಾಗದ ಮುಖ್ಯಸ್ಥ ಮನೋಹರಪ್ರಸಾದ್ ನಿರ್ವಹಿಸಿದರು.
ದ.ಕ., ಉಡುಪಿ ಜಿಲ್ಲಾ ಮಟ್ಟದ ವಿಜೇತರ ವಿವರ
ಸಬ್‌ಜೂನಿಯರ್ ವಿಭಾಗ: ಸುರತ್ಕಲ್ ಎನ್‌ಐಟಿಕೆ ಆಂಗ್ಲ ಮಾಧ್ಯಮ ಶಾಲೆಯ ಅಕ್ಷಜ್ ಪ್ರಥಮ, ಮಣಿಪಾಲ ಮಾಧವಕೃಪಾ ಸ್ಕೂಲ್‌ನ ಸಾನ್ವಿ ಪಾಲನ್ ದ್ವಿತೀಯ, ಹೆಬ್ರಿ ಎಸ್‌ಆರ್‌ಎಸ್ ಪಬ್ಲಿಕ್ ಸ್ಕೂಲ್‌ನ ಪರೀಕ್ಷಿತ್ ಆಚಾರ್ ತೃತೀಯ, ಉರ್ವ ಸಂತ ಅಲೋಶಿಯಸ್ ಸ್ಕೂಲ್‌ನ ಸಿಂಚನ, ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಸಾನ್ವಿ ಸಂತೋಷ್, ಮಣಿಪಾಲ ಮಾಧವಕೃಪಾ ಸ್ಕೂಲ್‌ನ ಮೇದಿನಿ ಭಟ್, ಉರ್ವ ಕೆನರಾ ಸ್ಕೂಲ್‌ನ ಅನ್ವಿತ್ ಎಚ್., ಗುತ್ತಿಗಾರು ಬ್ಲೆಸ್ಡ್ ಕುರಿಯಕೋಸ್ ಸ್ಕೂಲ್‌ನ ಜಸ್ವಿತ್ ತೋಟ ಅವರು ಪ್ರೋತ್ಸಾಹಕ ಬಹುಮಾನ ಗಳಿಸಿದ್ದಾರೆ.
ಜೂನಿಯರ್ ವಿಭಾಗ: ಹೆಬ್ರಿ ಎಸ್.ಆರ್.ಎಸ್. ಪಬ್ಲಿಕ್ ಸ್ಕೂಲ್‌ನ ಸೃಜನ್ ಮೂಲ್ಯ ಪ್ರಥಮ, ಹೆಬ್ರಿ ಅಮೃತ ಭಾರತಿ ವಿದ್ಯಾಕೇಂದ್ರದ ಶರಣ್ಯಾ ಕುಲಾಲ್ ದ್ವಿತೀಯ, ಮಣಿಪಾಲ ಕ್ರೈಸ್ಟ್ ಸ್ಕೂಲ್‌ನ ನಮ್ರತಾ ಶೆಟ್ಟಿಗಾರ್ ತೃತೀಯ, ಮೂಡಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿಭಾ ಶೆಟ್ಟಿ, ಉರ್ವ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಎಂ. ಸಿಂಚನಾ ಸುಭಾಷ್, ಉಡುಪಿ ಮುಕುಂದಕೃಪಾ ಸ್ಕೂಲ್‌ನ ಲಾಸ್ಯಪ್ರಿಯಾ, ಹೆಬ್ರಿ ಅಮೃತ ಭಾರತಿ ವಿದ್ಯಾಕೇಂದ್ರದ ಸೂರಜ್, ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯ ಹರ್ಷಿತ್ ಎಸ್.ಎಸ್. ಪ್ರೋತ್ಸಾಹಕ ಬಹುಮಾನ ಗಳಿಸಿದ್ದಾರೆ.
ಸೀನಿಯರ್ ವಿಭಾಗ: ಕೊಡಿಯಾಲ್‌ಬೈಲ್ ಸಂತ ಅಲೋಶಿಯಸ್ ಶಾಲೆಯ ಗೌರವ್‌ದೇವ್ ಎಚ್.ಬಿ. ಪ್ರಥಮ, ಮಂಗಳೂರು ಕೆನರಾ ಪ್ರೌಢ ಶಾಲೆಯ ದೀರ್ಘ ಎಂ. ದ್ವಿತೀಯ, ಮಣಿಪಾಲ ಕ್ರೈಸ್ಟ್ ಸ್ಕೂಲ್‌ನ ಹರ್ಷಿತಾ ಶೆಟ್ಟಿಗಾರ್ ತೃತೀಯ, ಕಾರ್ಕಳ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಆರ್. ಅನನ್ಯಾ ಪ್ರಭು, ಉಡುಪಿ ಟಿಎಂಎ ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶ್ರೀನಿಧಿ ಶೇಟ್, ಮಂಗಳೂರು ಕೆನರಾ ಪ್ರೌಢ ಶಾಲೆಯ ಅತುಲ್ ಶೆಟ್ಟಿ, ಪುತ್ತೂರು ತೆಂಕಿಲ ವಿ.ಕೆ.ಎಂ. ಸ್ಕೂಲ್‌ನ ಗೌತಮ್ ಎಸ್., ಕುಂದಾಪುರ ವಿ.ಕೆ.ಆರ್. ಆಂಗ್ಲ ಮಾಧ್ಯಮ ಶಾಲೆಯ ಆದಿತ್ಯ ಕೆ.ಆರ್. ಪ್ರೋತ್ಸಾಹಕ ಬಹುಮಾನ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.